ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ‘ನೀರು ಕುಡಿದರೆ’ ಆರೋಗ್ಯವಾಗಿರುವಿರಿ

ಲೈಫ್‍ಸ್ಟೈಲ್

ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು ತಾಮ್ರದ ಪಾತ್ರೆಗಳಿಂದ ನೀರು ಕುಡಿಯುತ್ತಾ ಬಂದಿದ್ದಾರೆ ಹಾಗೂ ಇದರ ಪ್ರಯೋಜನಗಳನ್ನು ಪಡೆದಿದ್ದಾರೆ. ಇಂದಿಗೂ ಹಲವು ಹಿರಿಯರು ತಾಮ್ರದ ಲೋಟಗಳಿಂದಲೇ ನೀರು ಕುಡಿಯುವುದನ್ನು ಬೆಂಬಲಿಸುತ್ತಾರೆ. ಆದರೆ ಯುವಜನತೆ ಕೈಗೆ ಸಿಕ್ಕಿದ ಪ್ಲಾಸ್ಟಿಕ್ ಅಥವಾ ಇತರ ಲೋಹಗಳ ಲೋಟಗಳಿಂದಲೇ ನೀರು ಕುಡಿಯುತ್ತಾರೆ. ಇಂದು ನಮ್ಮ ಹಳೆಯ ಸಂಪ್ರದಾಯಗಳು ವೈಜ್ಞಾನಿಕ ಕಾರಣಗಳಿಂದಾಗಿ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿವೆ. ಇವುಗಳಲ್ಲೊಂದು ತಾಮ್ರದ ಪಾತ್ರೆಗಳ ಮರುಬಳಕೆ. ಇದಕ್ಕೂ ಮುನ್ನ ತಾಮ್ರ ನಮ್ಮ ದೇಹಕ್ಕೇಕೆ ಅವಶ್ಯ ಎಂಬುದನ್ನು ನೋಡೋಣ1.ಆರೋಗ್ಯ ಪೂರ್ಣ ಚರ್ಮ
ದಿನ ನಿತ್ಯವೂ ನೀವು ರಾತ್ರಿ ಪೂರ್ತಿ ತಾಮ್ರದ ಪಾತ್ರದಲ್ಲಿ ನೀರಿಟ್ಟು ಬೆಳಗ್ಗೆ ಸೇವಿಸಿದಲ್ಲಿ, ನೀವು ಆರೋಗ್ಯ ಪೂರ್ಣ ಚರ್ಮ ಹೊಂದುವುದಲ್ಲದೆ ಚರ್ಮದ ಕಾಂತಿಯನ್ನು ಪಡೆಯುತ್ತೀರಿ.
2.
ಥೈರಾಯ್ಡ್ ನಿಂದ ರಕ್ಷಣೆ
ತಾಮ್ರದಲ್ಲಿರುವ ಲೋಹೀಯ ಗುಣದಿಂದ ಥೈರೋಕ್ಸಿನ್ ಹಾರ್ಮೋನು ಸಮಪ್ರಮಾಣದಲ್ಲಿರುತ್ತದೆ.ಇದರಿಂದ ಥೈರಾಯ್ಡ್ ಅಪಾಯ ತಪ್ಪುತ್ತದೆ.
3.
ಗಂಟು ನೋವು ಪರಿಹಾರ
ತಾಮ್ರದ ಪಾತ್ರೆಯಿಂದ ಸೇವಿಸುವ ನೀರಿನಿಂದ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಯೂರಿಕ್ ಆಸಿಡ್ ಪ್ರಮಾಣ ಕಡಿಮೆಯಾಗುತ್ತದೆ,ನಮ್ಮ ಗಂಟುನೋವಿಗೆ ಉತ್ತಮ ಪರಿಹಾರ ದೊರಕುತ್ತದೆ.
4.
ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ.
ತಾಮ್ರದ ಪಾತ್ರೆಯಲ್ಲಿ ಸುಮಾರು 8 ಘಂಟೆಗೂ ಅಧಿಕ ಹೊತ್ತು ತುಂಬಿಟ್ಟ ನೀರಿನಿಂದ ಅಸಿಡಿಟಿ ದೂರವಾಗಿ ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ.
5.
ಅನೀಮಿಯಾ(ರಕ್ತದ ಕೊರತೆ)ನಿವಾರಣೆ
ತಾಮ್ರದ ಲೋಹೀಯ ಗುಣದಿಂದ ರಕ್ತದ ಕೊರತೆ ನಿವಾರಣೆಯಾಗುತ್ತದೆ.
6.
ಹೃದಯಕ್ಕೂ ಉತ್ತಮ
ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಟ್ಟು ನಮ್ಮ ಹೃದಯಕ್ಕೆ ಸಂಪೂರ್ಣ ಆರೋಗ್ಯ ನೀಡುತ್ತದೆ.
7.
ಕ್ಯಾನ್ಸರ್ ನಿಂದ ಮುಕ್ತಿ
ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವ ಆಂಟಿ ಓಕ್ಸಿಡೆಂಟ್ಸ್ ನಮಗೆ ಕ್ಯಾನ್ಸರ್ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ.
8.
ಡಯಾರಿಯಾ,ಕಾಮಾಲೆ ಹಾಗೂ ಇನ್ನಿತರ ರೋಗಗಳ ವಿರುದ್ಧ ರಕ್ಷಣೆ
ತಾಮ್ರದಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣದಿಂದ,ನೀರಿನಲ್ಲಿರೋ ಅನೇಕ ಬ್ಯಾಕ್ಟೀರಿಯಾವನ್ನು ನಿವಾರಿಸಿ,ಡಯಾರಿಯಾ,ಕಾಮಾಲೆ ಹಾಗೂ ಇನ್ನಿತರ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.
9.
ದೇಹಕ್ಕೆ ಬರಬಹುದಾದ ಬೊಜ್ಜನ್ನು ತಡೆಗಟ್ಟುತ್ತದೆ.
ಶರೀರದ ಬೊಜ್ಜು ತಡೆಗಟ್ಟುವುದಲ್ಲದೆ,ಇದರಿಂದ ನಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ.
10.
ವಯಸ್ಸನ್ನು ಮರೆಮಾಚುತ್ತದೆ.
ತಾಮ್ರದ ಪಾತ್ರೆಯಲ್ಲಿ ನೀರಿನ ಸೇವನೆಯಿಂದ ವಯೋಮಿತಿಗನುಗುಣವಾಗಿ ಚರ್ಮದಲ್ಲುಂಟಾಗುವ ನೆರಿಗೆ,ಸುಕ್ಕುಗಳನ್ನು ನಿವಾರಿಸಿ,ಚರ್ಮದಲ್ಲಿ ಸತ್ತುಹೋಗಿರೋ ಅಂಗಾಂಶಗಳನ್ನು ಮತ್ತೆ ಜೀವಂತವಾಗಿಸುತ್ತಲ್ಲದೆ,ವಯಸ್ಸನ್ನು ಮರೆಮಾಚುತ್ತದೆ.