ಕಾಮನ್ ಮ್ಯಾನ್ ಅಚಾರ್ಯರ ಟಿ-ಶರ್ಟ್ ಹರಿದು ರಾದ್ದಾಂತ ಮಾಡಿದ ಜಗನ್

ವಾಹಿನಿ ಸುದ್ದಿ ಸಿನಿಮಾ

ನಿನ್ನೆ ನಡೆದ ಸಂಚಿಕೆಯಲ್ಲಿ ಜಗನ್ ಅವರದ್ದೇ ಆಟ.. ಜೈ ಶ್ರೀನಿವಾಸನ್ ಗುರುಜೀ ತನ್ನ ಸಂಖ್ಯಾಶಾಸ್ತ್ರದ ಜ್ಞಾನದ ಮೂಲಕ ಇಂದು 7 ತಾರೀಖು ಹೀಗಾಗಿ ತಂಡದ ಕ್ಯಾಪ್ಟನ್ ಆಗಿ‌ ಜಗನ್ ಅವರನ್ನ ಆಯ್ಕೆ ಮಾಡಿದ್ರು…

ರಿಯಾಜ್ ಟೀಮ್ ಹಾಗೆ ಜಗನ್ ಟೀಮ್ ನಡುವೆ ಹಣ್ಣು ಹಾಗೆ ಕಬ್ಬಿನ ಜಲ್ಲೆಗಳಿಂದ ರಸ ತೆಗೆದು ಜ್ಯೂಸ್ ಮಾಡುವ ಆಟವನ್ನ ನೀಡಿದ್ರು… ಈ ಸಂದರ್ಭದಲ್ಲಿ ಎದುರಾಳಿ ಬಳಿ ಇರುವ ಕಬ್ಬಿನ ಜೆಲ್ಲೆ, ಮೂಸಂಬಿ ಹಾಗೆ ನಿಂಬೆ ಹಣ್ಣನ್ನ ಕಸಿದುಕೊಳ್ಳುವ ಅವಕಾಶವನ್ನ ನೀಡಲಾಗಿತ್ತು… ಇದೇ ಸಂದರ್ಭದಲ್ಲಿ ಆಚಾರ್ಯ ಅವರು ಕಬ್ಬಿನ ಜೆಲ್ಲೆಗಳನ್ನ ಕಸಿದುಕೊಳ್ಳಲು ಮುಂದಾದ್ರು..

ಆದ್ರೇ, ಇದಕ್ಕೆ ವಿರೋಧ ವ್ಯಕ್ತ ಪಡೆಸಿದ ಜಗನ್ ಆಚಾರ್ಯರ ಟೀಶರ್ಟ್ ಅನ್ನ ಹಿಡಿದೆಳೆದು ಹರೆದು ಹಾಕಿದ್ರು… ಇದು ಆಚಾರ್ಯರಿಗೆ ಕೋಪವನ್ನ ತಂದಿತ್ತು…

ಈ ಬಗ್ಗೆ ಜಗನ್ ಆಚಾರ್ಯರೊಂದಿಗೆ ಜಗಳಕ್ಕೆ ಇಳಿದ್ರು.. ಈ ಸಂದರ್ಭದಲ್ಲಿ ಇಬ್ಬರಿಗೆ ಮಾತಿಗೆ ಮಾತು ಬೆಳೆದು ಜಗನ್ ಆಚಾರ್ಯರ ಮೇಲೆ ಹಲ್ಲೆ ಮಾಡುವಂತೆ ಮುಂದಾದರು.. ಆಚಾರ್ಯರ ಮೇಲೆ ತಿರುಗಿ ಬಿದ್ದ ಜಗನ್ ಏನು.? ಯಾಕೆ..? ನನ್ನ ಹತ್ತಿರ ಇಟ್ಕೋಬೇಡ ಅಂತೆಲ್ಲ ಮಾತಾನಾಡಿದ್ರು..

Image Courtesy : Colors Super