ದಾಂಪತ್ಯ ಜೀವನಕ್ಕೆ‌ ಕಾಲಿಟ್ಟ ಕಾಮಿಡಿ ಕಿಲಾಡಿ ಜೋಡಿ ದಿವ್ಯಶ್ರೀ-ಗೋವಿಂದೇ ಗೌಡ..

ಸಿನಿಮಾ

ಕಾಮಿಡಿ ಕಿಲಾಡಿಗಳು ಷೋ ಹಲವು ಪ್ರತಿಭೆಗಳನ್ನ ಪರಿಚಯಿಸಿದೆ.. ಇನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ದಿವ್ಯಶ್ರೀ ಹಾಗು ಗೋವಿಂದೇ ಗೌಡ ಸಹ ಇದ್ದಾರೆ.. ಈ ಇಬ್ಬರ ತಮ್ಮ ನಟನೆಯ ಮೂಲಕ ನಿಮ್ಮನ್ನ ರಂಜಿಸಿದ್ದಾರೆ.. ಈಗ ಇದೇ ಕಿಲಾಡಿ ಜೋಡಿ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ..

ಇಂದು ಶೃಂಗೇರಿಯಲ್ಲಿ ನಡೆದ ಸರಳ ವಿವಾಹದಲ್ಲಿ ಈ ಜೋಡಿ ಹೊಸ ಜೀವನಕ್ಕೆ ತಮ್ಮ ಗುರುಹಿರಿಯರ ಉಪಸ್ಥಿತಿಯಲ್ಲಿ ಕಾಲಿಟ್ಟಿದೆ.. ಕಾಮಿಡಿ ಕಿಲಾಡಿಗಳಲ್ಲಿ ಪರಿಚಯವಾದ ಈ ಇಬ್ಬರು ಒಳ್ಳೆ ಸ್ನೇಹಿತರಾಗಿದ್ರು.. ಇಬ್ಬರ ಮನೆಯಲ್ಲು ಮದುವೆಗೆ ಸೂಕ್ತ ವರವಧುವಿನ ಹುಡುಕಾಟ ನಡೆದಿತ್ತು.. ಈ ಸಂದರ್ಭದಲ್ಲಿ ದಿವ್ಯಶ್ರೀ ತಂದೆಯೇ ಗೋವಿಂದೇ ಗೌಡನಿಗೆ ತನ್ನ ಮಗಳನ್ನ ಕೊಟ್ಟು ಮದುವೆ ಮಾಡಿದ್ರೆ ಹೇಗೆ ಅಂತ ಯೋಚಿಸಿದ್ರಂತೆ.. ಇಬ್ಬರ ಮನೆಯಲ್ಲಿ ಕೂತು ಮಾತನಾಡಿದ್ದಾರೆ.. ಈ ಜೋಡಿ ಸಹ ಮದುವೆಗೆ ಸಮ್ಮತಿ ನೀಡಿದ್ದಾರೆ.. ಇನ್ನೇನು ಮನೆಯವರು ಒಪ್ಪಿಯಾಯ್ತು, ಇವರು ಒಪ್ಪಿ ಜ.27ಕ್ಕೆ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ನಡೆದಿತ್ತು..

ಇಂದು ಶೃಂಗೇರಿಯಲ್ಲಿ ಈ ಜೋಡಿ ಹಸೆಮಣೆ ಏರಿದೆ.. ಸದ್ಯ ಕೆಜಿಎಫ್ ಚಿತ್ರದಲ್ಲಿ ಅಭಿನಯಿಸಿ ಗುರುತಿಸಿಕೊಂಡಿರುವ ಗೋವಿಂದೇ ಗೌಡ , ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.. ಮತ್ತಷ್ಟು ಚಿತ್ರಗಳ ಆಫರ್ ಇವರ ಕೈಲಿವೆ.. ಇತ್ತಕಡೆ ದಿವ್ಯ ಕೂಡ ಸಿನಿಮಾ ರಂಗದಲ್ಲಿ ಆಫರ್ ಗಳನ್ನ ಗಿಟ್ಟಿಸಿಕೊಳ್ಳುತ್ತಿದ್ದು, ಈ ಇಬ್ಬರ ಜೀವನ ಮತ್ತಷ್ಟು ಸಂತಸದಿಂದ ಕೂಡಿರಲಿ ಎಂಬುದು ಎಲ್ಲರ ಆಶಯ..