ಬಿಗ್ ಬಾಸ್ ನಿಂದ ಹೊರಬಿದ್ದ ಚೈತ್ರಾ ಕೊಟ್ಟೂರ್ ಕೊನೆಗೆ ಹೇಳಿದ ಮಾತೇನು ಗೊತ್ತಾ??

ಸಿನಿಮಾ

ಮೊದಲನೇ ವಾರ ಆಪಲ್ ವಿಷಯಕ್ಕೆ ವಿವಾದ ಸೃಷ್ಟಿಸಿದ್ದ ಕವಯತ್ರಿ ಚೈತ್ರಾ ಕೊಟ್ಟೂರ್ ಕ್ಯಾಮೆರಾವನ್ನ ತನಗೇ ತಿಳಿಯದೇ ತನ್ನಡೆ ಸೆಳೆದುಕೊಂಡ ಅಭ್ಯರ್ಥಿ. ಚಂದನ್ ಆಚಾರ್ ಕೂಡ ಚೈತ್ರಾರನ್ನ ಜಗಳಕ್ಕೆ ಎಳೆದು ಕೊನೆಗೂ ಆಕೆಯ ಕಣ್ಣಲ್ಲಿ ಕಂಬನಿ ತರಿಸಿದ್ದರು. ಕಳೆದ ವಾರದಲ್ಲಿ, ದಲಿತರ ವಿರುದ್ಧ ಮಾತಾಡಿದ್ದರೆಂದು ವಿವಾದ ಸೃಷ್ಟಿಯಾಗಿ ಎಲ್ಲೆಡೆ ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧವೇ ಹೋರಾಟದ ಕೂಗು ಎದ್ದಿತ್ತು. ಇದೆ ಕಾರಣಕ್ಕೆ ಚೈತ್ರಾರನ್ನ ಹೊರಗೆ ಕಳಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಈ ವಾರ ಎಲಿಮಿನೇಟ್ ಆದ ಚೈತ್ರಾ ಕೊನೆಗೂ ತಮ್ಮ ಮನದ ಮಾತುಗಳನ್ನ ಹೊರಗೆಡವಿದ್ದಾರೆ. ಇದರಲ್ಲಿ ತಮ್ಮ ಮೊದಲನೇ ದಿನದಿಂದ ಇಂದಿನವರೆಗೆ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅದರಂತೆ, ದೊಡ್ಡಮನೆಯಲ್ಲಿ ಇದ್ದ 18 ಕನ್ನಡಿಗಳು, ತಮ್ಮದೇ ವಿವಿಧ ಮನಸಿನ ಮುಖಗಳನ್ನ ಪ್ರತಿನಿಧಿಸುವಂತೆ ಅಂದುಕೊಂಡಿದ್ದೆ. ಆಪಲ್ ವಿಷಯ ಏಕೆ ಅಷ್ಟೊಂದು ಗಹನವಾದ ವಿಚಾರವಾಯ್ತು ಎನ್ನುವುದು ತನಗೂ ತಿಳಿದಿಲ್ಲ. ಕೊನೆಯಲ್ಲಿ ಎಲ್ಲರೂ ತನ್ನನ್ನು ವೋಟ್ ಮಾಡಿ ಹೊರಗೆ ಕಳಿಸಿದ್ದಾರೆ. ಅದಕ್ಕೆ ತಮಾಷೆಗೆಂಬಂತೆ, “ನೀವ್ಯಾರೂ ಇಲ್ಲಿ ಶಾಶ್ವತ ಅಲ್ಲ. ನೀವೂ ಹೊರಗೆ ಬಂದೇ ಬರ್ತೀರಾ” ಅಂತ ಹೇಳಿ ಬಂದೆ ಅಂತ ಹೇಳಿದ್ದಾರೆ.