ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’

ಸಿನಿಮಾ

ಟ್ರೇಲರ್ ಮೂಲಕ ಹೊಸದೊಂದು ನಿರೀಕ್ಷೆ ಹುಟ್ಟುಹಾಕಿದ ಸಿನಿಮಾ ಕೆಮಿಸ್ಟ್ರಿ ಆಫ್ ಕರಿಯಪ್ಪ.. ಟ್ರೇಲರ್ ನೋಡಿ ಸಿನಿಮಾ ನೋಡೋಕೆ ಹೋದರವರಿಗೆ ಪೂರ್ತಿ ಮನರಂಜನೆಯ ಟ್ರೀಟ್ ಸಿಕ್ಕಿದೆ.. ಟ್ರೇಲರ್ ನಲ್ಲಿ ಬರೀ ಉಪ್ಪಿನಕಾಯಿ, ಊಟ ಫುಲ್ ಮೂವೀಲಿ ಅನ್ನೋ ಹಾಗೆ ಈ ಚಿತ್ರ ಮೂಡಿ ಬಂದಿದೆ.. ಮಿಡಲ್ ಕ್ಲಾಸ್ ಫ್ಯಾಮಿಲಿ ಅಸಲಿ ಕಥೆ ಚಿತ್ರದ ಜೀವಾಳವಾಗಿದೆ.. ಬರುವ ಒಂದೊಂದು ದೃಶ್ಯಗಳು ನೈಜ್ಯವಾಗಿ ಮೂಡಿ ಬಂದಿದೆ ಎನ್ನಿಸುವ ಹಾಗಿದೆ.‌.

ಕಾಮಿಡಿಯ ಜೊತೆಗೆ ಸಿನಿಮಾದಲ್ಲಿ ಬರುವ ಪಾತ್ರಗಳು ನೋಡೊ ಪ್ರೇಕ್ಷಕರನ್ನ ಇಷ್ಟವಾಗುತ್ತೆ.. ತನ್ನ ಸುತ್ತಮುತ್ತಲಿನ ಜನಗಳೆ ಸಿನಿಮಾದಲ್ಲಿ ಬಂದು ಹೋಗ್ತಿದ್ದಾರೇನೊ ಎನ್ನಿಸುವಷ್ಟರ ಮಟ್ಟಿಗೆ ಕನೆಕ್ಟ್ ಆಗುತ್ತೆ.. ಸೆಕೆಂಡ್ ಆಫ್ ಅಂತು ಪ್ರೇಕ್ಷಕ ಊಹಿಸದ ರೀತಿ ಮುಂದೆ ಸಾಗುತ್ತೆ.. ಟ್ವಿಸ್ಟ್ ಗಳ ಜೊತೆಗೆ ಆಡಿಯನ್ಸ ಹಿಡಿದಿಡುವ ಕೆಲಸ ಮಾಡಿದೆ.. ಕೌಟುಂಬಿಕ ಸಿನಿಮಾ ಇದಾಗಿದ್ದು, ಯುಥ್ಸ್ ನಲ್ಲಿ ಕಾಣುವ ಸಮಸ್ಯೆ ಗಳನ್ನ ಕಾಮಿಡಿಯೊಂದಿಗೆ ಕಟ್ಟಿಕೊಟ್ಟಿರುವ ರೀತಿ ಭೇಷ್ ಎನ್ನಲೇಬೇಕು…

ವೀಕ್ ಎಂಡ್ ನಲ್ಲಿ ಸಖತ್ತಾಗೆ ಕಮಾಲ್ ಮಾಡಿರೋ ಕೆಮಿಸ್ಟ್ರಿ ಆಫ್ ಕರಿಯಪ್ಪ, ಭರವಸೆಯೊಂದಿಗೆ ಗೆಲುವಿನತ್ತ ಮುಖ ಮಾಡಿದ್ದು, ಪ್ರೇಕ್ಷರನ್ನ ತನ್ನತ್ತ ಸೆಳೆಯುತ್ತಿದೆ..