ಇಂದಿನ‌ ರಾಶಿ ಭವಿಷ್ಯ.. ಯಾವ್ಯಾವ ರಾಶಿಗೆ ಒಳ್ಳೆಯದು.? ತಿಳಿದುಕೊಳ್ಳಿ

ಧಾರ್ಮಿಕ

ಮೇಷ:

ನಿಮ್ಮ ಜೀವನದಲ್ಲಿ ಪ್ರಯತ್ನ ಹೆಚ್ಚಿಸುತ್ತೀರಿ. ಅನಾವಶ್ಯಕ ವಿಚಾರಗಳಿಂದ ದೂರ ಇರಲು ಪ್ರಾರಂಭಿಸುತ್ತೀರಿ. ಕೆಲಸ ಕಾರ್ಯದಲ್ಲಿ ಮುನ್ನಡೆ . ರಾಜಕೀಯದಲ್ಲಿ ಇರುವವರಿಗೆ ಅಧಿಕಾರ ಹತ್ತಿರ ಬಂದಂತೆ ಅನಿಸುತ್ತದೆ. ಮುನಿಸಿಕೊಂಡ ಕೆಲವರನ್ನು ನೀವೇ ಹೋಗಿ ಸಂತೈಸ ಬೇಕಾಗಬಹುದು. ಹೊಸ ಆಲೊಚನೆಗಳು ಮಾರ್ಗದರ್ಶನ ಮಾಡುತ್ತವೆ ಹಣಕಾಸಿನಲ್ಲಿ ಏರುಪೇರು ಕಂಡು ಬರುತ್ತದೆ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ

ಮಿಥುನ:

ನಿಮ್ಮ ಜೀವನದಲ್ಲಿ ದಿನನಿತ್ಯ ಬುದ್ದಿ ಹಾಗೂ ಚಿಂತನೆ ನಿಮ್ಮನ್ನು ಸ್ವಲ್ಪ ಇಕ್ಕಟ್ಟಿಗೆ ಸಿಲುಕಿಸಲಿದೆ. ವ್ಯಾಪಾರ ಮಾಡುವವರು ಎಚ್ಚರವಹಿಸಿಕೊಳ್ಳ ಬೇಕಾದ ಸಮಯ. ಉದ್ಯೋಗ ಸ್ಥಳದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳಿಂದ ಒತ್ತಡ ಹೆಚ್ಚು ಇರುತ್ತದೆ. ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ ಹಣದ ಲೆವಾದೆವಿಯಲ್ಲಿ ಅಡಚಣೆ ಆಗುತ್ತದೆ ಆದರೆ ಅದೇ ಸಮಯದಲ್ಲಿ ನಿಮ್ಮನ್ನು. ನಿಮ್ಮ ಶ್ರಮವನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ. ನೀವು ತಿನ್ನುವ ಆಹಾರದಲ್ಲಿ ಎಚ್ಚರವಹಿಸಿ. ಕೆಲಸ ಕಾರ್ಯಗಳಲ್ಲಿ ಎಡವಟ್ಟಿನಿಂದ ಕಠಿಣ ಮಾಡಿಕೊಳ್ಳುತ್ತೀರಿ. ಸಹೋದರರ ಸಹಕಾರಕ್ಕಾಗಿ ಪರಿತಪಿಸುತ್ತಿರಿ.

ಕರ್ಕಾಟಕ

ನಿಮ್ಮ ಶತ್ರುಗಳಿಗೆ ಸುವರ್ಣಾವಕಾಶ. ಈ ಮೊದಲಿನಂತೆ ಕೆಲ ವಿಚಾರಗಳು ಸುಲಭವಾಗಿ ಅರ್ಥ ಆಗದು. ಜನರು ನಿಮ್ಮ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಎಂದನಿಸುತ್ತದೆ. ವ್ಯಾಪಾರ ಮಾಡುವವರು ಹಣ ಇದ್ದರೂ ಸಹ ಧೈರ್ಯ ಸಾಲುವುದಿಲ್ಲ. ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕು . ನಿಮ್ಮ ಮೇಲೆ ನಿಮ್ಮ ಮೇಲಧಿಕಾರಿಗಳಿಗೆ ಚಾಡಿ ಹೇಳಲು ನಿಮ್ಮ ಶತ್ರುಗಳಿಗೆ ಸುವರ್ಣಾವಕಾಶ ಲಭಿಸಲಿದೆ. ದೂರದ ಪ್ರಯಾಣ ಮಾಡುವ ಕುಟುಂಬದರೊಂದಿಗೆ ಸೇರಿ ದೇವತಾ ಕಾರ್ಯಗಳನ್ನು ಮಾಡಬಹುದು.ಪ್ರೇಮಿಗಳಿಗೆ ಸಂತಸದ ಸಮಯ.

ವೃಷಭ:

ಆರೋಗ್ಯದಲ್ಲಿ ಸಮಸ್ಯೆ ಕಂಡು ಬರುತ್ತದೆ. ಪ್ರಯಾಣ ಮಾಡುವ ಯೋಗವಿದೆ ನಂಬಿದವರಿಂದ ಮೋಸ ಆಗುವ ಸಾಧ್ಯತೆ ಇದೆ. ಮನೆಯಲ್ಲಿ ಕಿರಿಕಿರಿ ವಾತಾವರಣ ಕಂಡು ಬರುತ್ತದೆನಿಮ್ಮ ಸ್ವಂತ ವಾಹನ ಓಡಿಸುವ ಬದಲು ಸಾಮುಹಿಕ ವಾಹನ ಬಳಸಿ.ನೀವು ತಪ್ಪು ಮಾಡಿಲ್ಲ ಎಂದರೂ ನಿಮ್ಮದೇ ತಪ್ಪು ಎಂದು ವಾದಿಸುತ್ತಾರೆ.ಶಾಂತಿಯಿಂದ ವಾದಿಸಿ.ಸಂಬಂಧ. ಅವರ ಜೊತೆಗೆ ಮನಸ್ತಾಪ ಆಗುತ್ತದೆ.ಪರಿಹಾರ ಹುಡುಕಲು ಪ್ರಯತ್ನ ಮಾಡುತ್ತೀರಿ

ಸಿಂಹ:

ಹಣ ಹೆಚ್ಚು ಖರ್ಚು ಆಗುತ್ತದೆ ಸರಕಾರೀ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಕಾರ್ಯ ಸಾಧನೆ ಸಾಧ್ಯವಿದೆ. ಆದರೆ ಹಣ ಹೆಚ್ಚು ಖರ್ಚು ಆಗುತ್ತದೆ. ಶುಭಕಾರ್ಯಗಳು ಮನೆಯಲ್ಲಿ ನಿಶ್ಚಯವಾಗುತ್ತದೆ. ವಾಹನ ಚಲಾಯಿಸುವ ವೇಳೆ ಗಮನವಿರಲಿ ನೀವು ಮಾಡುವ ಕೆಲಸದಲ್ಲಿ ಜಯ ಏನೂ ಆತಂಕ ಹಿಂಜರಿಕೆ ಬೇಡ, ನಿಮಗೆ ಅನುಮಾನ ಬೇಡ. ಧನಲಾಭ .ನಿಮಗೂ ಇಷ್ಟು ವಿಚಾರ ತಿಳಿದಿದೆ ಎನ್ನುವ ಆಶ್ಚರ್ಯ ನಿಮ್ಮ ಸ್ನೇಹಿತೆಯರೆಲ್ಲರಲ್ಲೂ ಮನೆಮಾಡುತ್ತದೆ.

ವೃಶ್ಚಿಕ:

ನಿಮಗೆ ಸಾಕಷ್ಟು ಕೆಲಸಗಳು ಬರುತ್ತವೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಅಂದುಕೊಂಡಂತೆ ಲಾಭ ಕಂಡು ಬರುತ್ತದೆ . ಆದರೆ ಅವೆಲ್ಲ ಮಾಡಲು ಮಾತ್ರ ಸಮಯಾವಕಾಶ ಲಭಿಸದೇ ಪರಿತಪಿಸುತ್ತೀರಿ. ನಿಮ್ಮ ಸ್ನೇಹಿತ ಅಥವಾ ಬಾಳಸಂಗಾತಿಯೊಂದಿಗೆ ಚಿಕ್ಕ ಪುಟ್ಟ ಮನಸ್ತಾಪಗಳು ಬರಬಹುದು.ನಿಮ್ಮ ಸುಖ ಸಂಸಾರದಲ್ಲಿ ಹುಳಿ ಹಿಂಡುವವರು ಪ್ರಯತ್ನ ಪಾರ್ಟ್ನರ್ಶಿಪ್ ನಲ್ಲಿ ವ್ಯಾಪಾರ ಮಾಡುತ್ತಿರುವವರಿಗೂ ಸಹ ನಿಮ್ಮ ನಿಮ್ಮಲ್ಲಿ ಅಭಿಪ್ರಾಯ ಭೇದಗಳು ಹಾಗೂ ಹಣದ ವಿಚಾರದಲ್ಲಿ ಕಿತ್ತಾಟಗಳು ಆಗುತ್ತವೆ. ನೆನಪಿರಲಿ ಕ್ಷಮೆ ಕೇಳಿದರೆ ಅದು ಸೋಲಲ್ಲ.

ಕನ್ಯಾ:

ಕ್ಷೇತ್ರಗಳ ದರ್ಶನ ಭಾಗ್ಯ ಕಂಡು ಬರುತ್ತದೆ ನಿಮಗೆ ಸೇರು ಬೇಕಾದ ಹಣದ ವಿಚಾರದಲ್ಲಿ ಅತೀ ಹೆಚ್ಚಿನ ಪ್ರಯತ್ನದ ಅವಶ್ಯ ಇದೆ. ಆಲಸ್ಯ ಮಾಡಲು ಸಹ ಆಗದ ಸ್ಥಿತಿ. ಆರೋಗ್ಯದ ಮೇಲೆ ಗಮನ ಇರಲಿ. ಕೆಲಸ ಕಾರ್ಯಗಳ ಮೇಲೆ ಶ್ರಮ ಇರಲಿ.ಹಣವನ್ನು ಸೂಕ್ಷ್ಮವಾಗಿ ಖರ್ಚು ಮಾಡಬೇಕು . ನಂಬಿದವರಿಂದಲೇ ಮೋಸ ಹೋಗುತ್ತೀರಿ ನಿಮ್ಮಿಂದ ಕಲಿತ ವಿದ್ಯೆಯನ್ನು ಕೆಲವರು ಉದ್ದೇಶಪೂರ್ವಕ ನಿಮ್ಮ ಮೇಳೆ ಪ್ರಯೋಗ ಮಾಡುವ ಸಾಧ್ಯತೆ ಇದೆ. ನಿಮ್ಮ ನಿರಂತರ ಪ್ರಯತ್ನದ ಆವಶ್ಯ ಹೆಚ್ಚು ಇದೆ

ಧನು:

ನಿಮ್ಮಜೀವನದಲ್ಲಿಅನಾವಶ್ಯಕವಾದಚಿಂತೆಗಳುವೃದ್ಧಿಸಬಹುದು. ಆದುದರಿಂದ ಆದಷ್ಟು ಜಾಗ್ರತೆವಹಿಸಬೇಕಾಗುತ್ತದೆ. ಜಾಗದ ವಿಚಾರದಲ್ಲಿ ತಕರಾರು ವಿಚಾರಗಳಲ್ಲಿ ಇದ್ದವರು ಸ್ವಲ್ಪ ಎಚ್ಚರದಿಂದಿರಿ. ಯಾವುದೇ ಕಾರಣದಲ್ಲಿಯೂ ತಾಳ್ಮೆ ಇರಬೇಕು ಮಾಡಿಕೊಳ್ಳಬೇಡಿ. ನಿಮ್ಮ ಸಹೋದರರು ಚಿತ್ರ ವಿಚಿತ್ರ ಬೇಡಿಕೆಗಳನ್ನು ಇಡಬಹುದು. ನಿಮ್ಮ ಕೈಯಲ್ಲಿ ಎಷ್ಟು ಆಗುತ್ತದೆಯೋ ಅಷ್ಟು ಮಾತ್ರ ಕೆಲಸಗಳನ್ನು ಮಾಡಿಕೊಡುವುದಾಗಿ ಒಪ್ಪಿಕೊಳ್ಳಿ, ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ಯಾರಿಗೂ ಬೇರೆಯವರಿಂದ ಸಾಲ ಕೊಡಿಸುವ ದುಸ್ಸಾಹಸ ಬೇಡವೇ ಬೇಡ.

ಕುಂಭ:

ನಿಮ್ಮಆರ್ಥಿಕಸಮಸ್ಯೆಗಳಬಗ್ಗೆಸ್ನೇಹಿತರಲ್ಲಿಅಥವಾಬಂಧುಗಳೊಡನೆಚರ್ಚೆಬೇಡ. ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಮನಸ್ಸಿನಲ್ಲಿಯೇ ಇರಲ್ಲಿ ಕಷ್ಟ ಅನಿಸಿದರೂ ಸಹ ಒಬ್ಬರೇ ಅನುಭವಿಸಿ. ಆರೋಗ್ಯದ ಮೇಲೆ ಎಚ್ಚರಿಕೆ ಇರಲಿ. ನಿಮ್ಮ ಮಾತಿಗೆ ಬೆಲೆ ಸಿಕ್ಕಿದೆ ಎಂದಾದಲ್ಲಿ ಮುಂದೆ ಸಹ ಲಭಿಸುತ್ತದೆ. ವಿದೇಶ ಪ್ರಯಾಣದ ವಿಚಾರದಲ್ಲಿ ಸಹ ಈ ವಾರ ಅಡಚನೆಗಳು ಆಗಬಹುದು. ನಿಮ್ಮ ಶತ್ರುಗಳದ್ದೇ ಮೆಲುಗೈ ಆಗುತ್ತದೆ. ನ್ಯಾಯಾಲಯದಲ್ಲಿ ಹೂಡಿದ್ದ ದಾವೆಗಳು ಮುಂದೂಲ್ಪಡುವ ಸಾಧ್ಯತೆಗಳು ಹೆಚ್ಚು.

ತುಲಾ:

ನಿಮ್ಮಜೀವನದಲ್ಲಿಧೈರ್ಯಹೆಚ್ಚುಆಗುತ್ತದೆ. ದೈವಾನುಗ್ರಹ ಸಹ ಹೆಚ್ಚು ಇದೆ. ನಿಮಗಾಗುವ ಮೋಸ ಅಥವಾ ಕೆಡುಕನ್ನು ದೈವಬಲ ತಡೆಯುತ್ತದೆ. ವಿದೇಶ ಪ್ರಯಾಣದ ಹೋಗುವ ನಿರೀಕ್ಷೆ ಇದೆ. ನಿರುದ್ಯೋಗಿಗಳಿಗೂ ಸಹ ಪ್ರಯತ್ನಿಸಿದರೆ ಉದ್ಯೋಗ ಪ್ರಾಪ್ತಿ ಯೋಗ ಇದೆಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಲಾಭ ಕಂಡು ಬರುತ್ತದೆ ಉತ್ತಮ ಸಮಯ ಅದರ ಉತ್ತಮ ವಿಧದ ಬಳಕೆಯಲ್ಲಿ ತೋರಿಸಬೇಕು. ಕೆಲ ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ರಾಜಿ ಸೂತ್ರಗಳು ನಿಮ್ಮ ಸಹಾಯಕ್ಕೆ ಬರುತ್ತವೆ. ತಪ್ಪನ್ನು ಮಾತ್ರ ಹುಡುಕುವ ವಿಧಾನ ಬೇಡ.

ಮಕರ:

ಸ್ವಲ್ಪ ನಷ್ಟ ಇದ್ದರೆ, ಬಾಕಿ ಭಾಗ ಉತ್ತಮ ಲಾಭದಾಯಕ ಎನ್ನಬಹುದು. ಆದುದರಿಂದ ಮೊದಲ ಭಾಗದಲ್ಲಿ ಆಗಬಹುದಾದ ನಷ್ಟದ ವಿಚಾರದಲ್ಲಿ ಹೆಚ್ಚು ಚಿಂತನೆ ಮಾಡಬೇಡಿ . ತಾಳ್ಮೆಯಿಂದ ಕಾಲ ಕಳೆಯಿರಿ ಸಾಕು. ಇನ್ನು ವಿವಾಹದ ಮಾತುಕತೆ ನಡೆದರೆ ಮುರಿದು ಬೀಳುವ ಸಾಧ್ಯತೆಗಳಿರುವುದರಿಂದ ನಿಮಗೆ ಅನ್ವಯಿಸುವುದಾದಲ್ಲಿ ಬಹಳ ಎಚ್ಚರಿಕೆ ವಹಿಸಿ. ನಿಮಗೆ ಯಾವುದೋ ಒಂದು ಉತ್ತಮ ಬೆಳವಣಿಗೆ ಆಗುತ್ತಿದೆ ಎಂದಾದಲ್ಲಿ ಅದರ ವಿಚಾರ ಯಾರಿಗೂ ತಿಳಿಸಬೇಡಿ.

ಮೀನ:

ನಿಮ್ಮ ದಿನನಿತ್ಯ  ಕೆಲ ವಿಚಾರಗಳಲ್ಲಿ ಕೆಲವರನ್ನು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಆರೋಗ್ಯದಲ್ಲಿ ಇರುವ ಸಮಸ್ಯೆ ದಿನೆ ದಿನೆ ಕಡಿಮೆ ಆಗುತ್ತ ಬರುತ್ತವೆ. ಮುಖ್ಯವಾದ ಸಂದರ್ಭದಲ್ಲಿ ವಿಚಾರಗಳು ವಿಷಯಗಳನ್ನು ಮರೆಯುತ್ತೀರಿ. ಕೆಲ ಪೂರ್ವ ನಿಗದಿತ ಕೆಲಸಗಳನ್ನು ಮುಂದೂಡುತ್ತೀರಿ. ದೂರ ಪ್ರಯಾಣಗಳು ಲಾಭದಾಯಕ ಆಗಬಹುದು. ಸಾಲಗಳು ಮರುಪಾವತಿ ಆಗುತ್ತವೆ. ಸ್ವಲ್ಪ ಮಾತಿನ ಚುರುಕುತನ ಬೇಕು. ಅತಿಯಾದ ಖಾರ ಅಥವಾ ಹುಳಿ ಪದಾರ್ಥಗಳಿಂದ ದೂರ ಇದ್ದರೆ ಒಳಿತು. ನಿಮ್ಮಿಂದ ಕೆಲವರಿಗೆ ಸಹಾಯ ಆಗಲಿದೆ ಅದು ನಿಮಗೂ ಸಂತಸ.