ಸಾರಥಿಯನ್ನು ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ ಅಭಿಮಾನಿ..

ವಾಹಿನಿ ಸುದ್ದಿ ವಿಡಿಯೋ ಸಿನಿಮಾ

ಚಾಲೆಂಜಿಂಗ್ ಸ್ಟಾರ್ ಅವರ ಅಭಿಮಾನಿ ಈ ರೇವಂತ್. ರೇವಂತ್ ಬಹಳ ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಶಿವಮೊಗ್ಗ ಮೂಲದ ರೇವಂತ್ 20ನೇ ವಯಸ್ಸಿಗೆ ಕ್ಯಾನ್ಸರ್ ನಿಂದ ನೋವು ಅನುಭವಿಸುತ್ತಿದ್ದಾರೆ.

ರೇವಂತ್ ಬೆಂಗಳೂರಿಗೆ ಬಂದು ಚಿಕಿತ್ಸೆಯನ್ನು ಪಡೆದು ಹೋಗುತ್ತಿದರು. ಆದರೆ ಈ ಬಾರಿ ಕ್ಯಾನ್ಸರ್, ರೇವಂತ್ ಅವರನ್ನು ಬಿಡುವಂತೆ ಕಾಣುತ್ತಿಲ್ಲ. ವೈದ್ಯರು ಇನ್ನು ಮುಂದೆ ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ ಎಂದು‌ ಕೈ ಚೆಲ್ಲಿದ್ದರು. ಹೀಗಿರಬೇಕಾದರೆ ಕೊನೆ ಘಳಿಗೆಯಲ್ಲಿ ರೇವಂತ್, ದರ್ಶನ್ ಅವರನ್ನು ನೋಡಲು ಬಯಸಿದರು.

ಅಭಿಮಾನಿ ಆಸೆಯಂತೆ ರೇವಂತ್ ಅವರಿಗೆ ವೀಡಿಯೊ‌ ಕಾಲ್ ಮಾಡುವ ಮೂಲಕ ಕೊನೆ ಆಸೆಯನ್ನು ದಾಸ ಪೂರೈಸಿದರು. ದಾಸನ ಮಾತುಗಳು ಕೇಳಿ ರೇವಂತ್ ಸಂತೋಷಪಟ್ಟರು.

ಆದರೆ‌ ಇಂದು ಸಾರಥಿಯನ್ನು ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ ರೇವಂತ್.. ನಿಜ, ಕ್ಯಾನ್ಸರ್ ನಿಂದ ಬಳುತ್ತಿದ್ದ ರೇವಂತ್ ಕೊನೆ‌ಗೂ ಜೀವ ಬಿಟ್ಟಿದ್ದಾರೆ. ರೇವಂತ್ ಆತ್ಮಕ್ಕೆ ಶಾಂತಿ ಸಿಗಲಿ..

ದರ್ಶನ್ ಕಿರೀಟಕ್ಕೆ ಮತ್ತೊಂದು ಬಿರುದು ಸೇರ್ಪಡೆ.. ಅಭಿಮಾನಿಗಳಿಗೆ ಖುಷಿಯೋ ಖುಷಿ…!!

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.