ಹೊಸ ಕಾರು, ಬೈಕ್ ಖರೀದಿ ಮಾಡೋ ಹಾಗಿದ್ರೆ ಆಗಸ್ಟ್ ವರೆಗೂ ಕಾಯಿರಿ..! ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದೆ.

ಲೈಫ್‍ಸ್ಟೈಲ್ ವಾಹಿನಿ ಸುದ್ದಿ

ಹೊಸ ಕಾರು ಅಥವ ಬೈಕ್ ಖರೀದಿ ಮಾಡ್ಬೇಕು ಅನ್ನೋ ಪ್ಲಾನ್ ನಿಮ್ಮಲಿದ್ರೆ ಈ ವಾರ ಕಾಯೋದು ಒಳ್ಳೆದು ಯಾಕಂದ್ರೆ ಆಗಸ್ಟ್ ನಿಂದ ಹೊಸ ಕಾರು ಬೈಕ್ ಬೆಲೆ ಭಾರಿ ಮೊತ್ತದಲ್ಲಿ ಕಡಿಮೆಯಾಗಲಿದೆ. ಹೊಸ ಕಾರು ಹಾಗೂ ಬೈಕ್ ನ ಆನ್ ರೋಡ್ ಬೆಲೆಯ ಕಡಿಮೆಯಾಗಲಿದೆ. ಇದಕ್ಕೆ ಕಾರಣ ವಾಹನದ ಮೇಲಿನ ಇನ್ಷುರೆನ್ಸ್. ಈ ಮೊದಲು ಹೊಸ ವಾಹನ ಖರೀದಿಸಿದಾಗ 3 ಅಥವ 4 ವರ್ಷದ ಲಾಂಗ್ ಟರ್ಮ್ ಇನ್ಷುರೆನ್ಸ್ ಬದಲಾಗಿ ಈ ಮೊದಲೇ ಇದ್ದ 1 ವರ್ಷದ ಕಂಪ್ಲೀಟ್ ಕವರ್ ಇನ್ಷುರೆನ್ಸ್ ಮಾತ್ರ ಇರಲಿ ಅನ್ನೋ ನಿರ್ಧಾರಕ್ಕೆ IRDAI ಬಂದಿದೆ.ಹಾಗಾಗಿ ಆನ್ ರೋಡ್ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗಲಿದೆ.