ಸಿಂಪಲ್ ಆಗಿರೋ ಒಂದು ಚೈನೀಸ್ ಡಿಶ್ ಕ್ಯಾಬೇಜ್ ಅಥವಾ ಎಲೆಕೋಸು ಮಂಚೂರಿಯನ್…

ವಾಹಿನಿ ಸುದ್ದಿ ಸವಿರುಚಿ

ಚೈನೀಸ್ ಫುಡ್ ಅಂದ್ರೆ ಮೊದಲು ಇಷ್ಟ ಆಗೋದು ನೂಡಲ್ಸ್.. ನಂತರ ಫ್ರೈಡ್ ರೈಸ್. ಇದರ ಜೊತೆಗೆ ಅತಿಯಾಗಿ ಫೇಮಸ್ ಅಂದ್ರೆ ಗೋಬಿ ಮಂಚೂರಿಯನ್..

ಮಂಚೂರಿಯನ್ ಗಳಲ್ಲಿ ಗೋಬಿ ಬಿಟ್ಟರೆ ಬೇಬಿಕಾರ್ನ್, ಮಶ್ರೂಮ್, ಚಿಕನ್ ತುಂಬಾ ಫೇಮಸ್. ಆದರೆ ಇದರಂತೆ ರುಚಿಕಟ್ಟಾದ ಹಾಗು ಎಲ್ಲರಿಗು ಇಷ್ಟವಾಗೋ ಹಾಗೆ ಮಾಡಲೂ ಸುಲಭವಾದ ಇನ್ನೊಂದು ಮಂಚೂರಿಯನ್ ಐಟಂ ಅಂದ್ರೆ ಕ್ಯಾಬೇಜ್ ಅಥವಾ ಎಲೆಕೋಸು ಮಂಚೂರಿಯನ್.

ಮಕ್ಕಳಿಂದ ಎಲ್ಲಾ ವಯಸ್ಸಿನವರೂ ಇಷ್ಟ ಪಡುವ ತಿಂಡಿಯಿದು. ಅಥಿತಿಗಳಿಗೆ ಸರ್ವ್ ಮಾಡಿ ಎಲ್ಲರ ಮೆಚ್ಚುಗೆ ಪಡೆದುಕೊಳ್ಳಿ.

ಕ್ಯಾಬೇಜ್ ಅಥವಾ ಎಲೆಕೋಸು ಮಂಚೂರಿಯನ್ ಮಾಡುವ ವಿಧಾನ:

ಬೇಕಾದ ಸಾಮಗ್ರಿಗಳು:

 1. ಮಧ್ಯಮ ಗಾತ್ರದ ಎಲೆಕೋಸು 1
 2. ಮೈದಾ ಹಿಟ್ಟು 1 ಕಪ್
 3. ಕಾರ್ನ್ ಫ್ಲೋರ್ 1 ಕಪ್
 4. ಕೆಂಪು ಬಣ್ಣ 1 ಚಿಟಿಕೆ
 5. ಅಡುಗೆ ಸೋಡಾ 1 ಚಮಚ
 6.  ಚಮಚ ವಿನೆಗರ್ 1 ಚಮಚ
 7. ಟೊಮ್ಯಾಟೋ ಸಾಸ್ 3 ಚಮಚ
 8. ಸೋಯಾ ಸಾಸ್ 1 ಚಮಚ
 9. ಚಿಲ್ಲಿ ಸಾಸ್ 1.5 ಚಮಚ
 10. ಶುಂಠಿ ಬೆಳ್ಳುಳ್ಳಿ ಪೇಸ್ಟ್ 1.5 ಚಮಚ
 11. ಗರಂ ಮಸಾಲ 1 ಚಮಚ
 12. ಅರ್ಧ ಚಮಚ ಅಚ್ಚ ಖಾರದ ಪುಡಿ
 13. ಒಂದುದೊಡ್ಡ ಗಾತ್ರದ ಈರುಳ್ಳಿ
 14. ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ
 15. ಒಂದು ಹೆಚ್ಚಿದ ಕ್ಯಾಪ್ಸಿಕಂ
 16. ಹೆಚ್ಚಿದ ಈರುಳ್ಳಿ ಹೂವು ಸ್ವಲ್ಪ
 17. ಕಪ್ಪು ಮೆಣಸಿನ ಪುಡಿ ಅರ್ಧ ಚಮಚ

ಮಾಡುವ ವಿಧಾನ:
ಮೊದಲು ಎಲೆಕೋಸನ್ನು ಸಣ್ಣದಾಗಿ ಹೆಚ್ಚಿ ಉಪ್ಪು ನೀರಲ್ಲಿ ಅರ್ಧ ಘಂಟೆ ನೆನೆಸಿಡಿ.

ಅದನ್ನು ನೀರಿನಿಂದ ಹಿಂಡಿ ತೆಗೆದು ಅದಕ್ಕೆ ಉಪ್ಪು, ಗರಂ ಮಸಾಲ, ಅಡುಗೆ ಸೋಡಾ, ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಕೆಂಪು ಬಣ್ಣ ಹಾಕಿ ನೀರು ಹಾಕದೆ ಕಲಸಿ. ಇದು ಚಪಾತಿ ಹಿಟ್ಟಿನ ಹದಕ್ಕೆ ಬರುತ್ತದೆ.

ಇದನ್ನು ಸಣ್ಣ ಉಂಡೆ ಮಾಡಿ ಕೆಂಬಣ್ಣ ಬರುವವರೆಗೆ ಕರಿದು ತೆಗೆಯಿರಿ. ಎಣ್ಣೆ ಅಂಶ ಕಡಿಮೆ ಮಾಡಲು ಟಿಶ್ಯು ಪೇಪರ್ ಮೇಲೆ ಹರಡಿ.


ದಪ್ಪ ಉರಿಯಲ್ಲಿ ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ನಂತರ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿ. ಇದು ಸ್ವಲ್ಪ ಬೆಂದಾಗ ಅದಕ್ಕೆ ಹೆಚ್ಚಿದ ಕ್ಯಾಪ್ಸಿಕಂ, ಚಿಲ್ಲಿ ಸಾಸ್, ಸೋಯಾ ಸಾಸ್, ಟೊಮ್ಯಾಟೋ ಸಾಸ್, ಮೆಣಸಿನ ಪುಡಿ ಹಾಕಿ. ಕಡಿಮೆ ಉಪ್ಪು ಬೆರೆಸಿ. ಟೊಮ್ಯಾಟೋ ವಾಸನೆ ಹೋದಾಗ ಅದಕ್ಕೆ ಕರಿದ ಎಲೆಕೋಸಿನ ಉಂಡೆಗಳನ್ನು ಬೆರೆಸಿ ಕಡಿಮೆ ಉರಿಯಲ್ಲಿ ಕೈಯಾಡಿಸಿ.

ಮಸಾಲೆಯು ಉಂಡೆಗಳಿಗೆ ಸೇರಿದಾಗ ಸ್ಟವ್ ಆರಿಸಿ ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ಈರುಳ್ಳಿ ಹೂವು ಸೇರಿಸಿ. ರುಚಿಯಾದ ಎಲೆಕೋಸು ಅಥವಾ ಕ್ಯಾಬೇಜ್ ಮಂಚೂರಿಯನ್ನು ಬಿಸಿಯಲ್ಲೇ ಸೇವಿಸಬೇಕು.

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.