ಗೊತ್ತೊ ಗೊತ್ತಿಲ್ಲದೆಯೋ ಅನುಗೆ ತಾಳಿ ಹಾಕಿಟ್ರು ಆರ್ಯವರ್ಧನ್..!! ವಿಡಿಯೋ ನೋಡಿ

ಸಿನಿಮಾ

ನಾಯಕ ನಟ ಅನಿರುದ್ಧ ಹಾಗೂ ಹೊಸ ಪ್ರತಿಭೆ ಮೇಘ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಬರ್ತಿರುವ ಧಾರಾವಾಹಿಯೇ ಈ ಜೊತೆ ಜೊತೆಯಲಿ. ಮೊದಲ ದಿನದಿಂದಲೂ ಸಾಕಷ್ಟು ಹೆಸರು ಹಾಗೂ ಖ್ಯಾತಿಗೊಳಿಸಿರುವ ಈ ಧಾರಾವಾಹಿ ಇಂದಿಗೆ 50ದಿನ ಪೂರೈಸಿ ಯಶಸ್ವಿಯಾಗಿ ಮುನ್ನುಗುತ್ತಿದೆ. ಇಂದಿಗೂ ನಂಬರ್ ಒನ್ ಸ್ಥಾನದಲ್ಲಿರುವ ಜೊತೆ ಜೊತೆಯಲಿ ಧಾರಾವಾಹಿ ಈಗ ಹಲವಾರು ತಿರುವುಗಳು ಪಡೆಯುತ್ತಿದೆ.

ಈಗಾಗಲೇ ಅನು ಸಿರಿಮನೆ ಮದುವೆ ಸಂಪತ್ ಅವರೊಂದಿಗೆ ನಿಶ್ಚಯವಾಗಿದೆ. ಅನು ಮದುವೆ ಮುಗಿಯುವವರೆಗೆ ಆರ್ಯವರ್ಧನ್ ಅವರೇ ಖುದ್ದಾಗಿ ಮದುವೆ ಸಮಾರಂಭದಲ್ಲಿ ಓಡಾಡುತ್ತಿದ್ದಾರೆ. ಈಗಾಗಲೇ ಅನು ಮನೆಯಲ್ಲಿರುವ ಆರ್ಯವರ್ಧನ್, ಈಗ ಅನು ಮದುವೆಗಾಗಿ ಒಡವೆ ಖರೀದಿಸಲು ಚಿನ್ನದ ಅಂಗಡಿಗೆ ಹೋಗುತ್ತಾರೆ. ಮುಂದೆ ಓದಿ…

ಈ ಸಂದರ್ಭದಲ್ಲಿ ಅನು ಮನೆಯವರು ಮಾಂಗಲ್ಯ ಸರ ನೋಡಲು ಮುಂದಾಗುತ್ತಾರೆ. ಈ ವೇಳೆ ಅನು ಮಾಂಗಲ್ಯ ಸರವನ್ನು ಹಾಕಿಕೊಂಡು ನೋಡೋಣ ಎಂದು ಹಾಕಿಕೊಳ್ಳಲು ಪ್ರಯತ್ನಿಸುತ್ತಾಳೆ. ಇದನ್ನು ನೋಡಿದ ಆರ್ಯವರ್ಧನ್ ತನ್ನಗೆ ತಿಳಿಯದಂತೆ‌ ಎಲ್ಲರ ಮುಂದೆಯೇ ಮಾಂಗಲ್ಯ ಸರವನ್ನು ಅನು ಕೊರಳಿಗೆ ಹಾಕುತ್ತಾರೆ. ವೀಡಿಯೋ ಇಲ್ಲಿದೆ ನೋಡಿ..