Braking News ; ಅನರ್ಹ ಶಾಸಕರು ಮತ್ತೆ ಸ್ವಪಕ್ಷಕ್ಕೆ ವಾಪಸ್? ಬಿಜೆಪಿಗೆ ರಿಯಲ್ ಶಾಕ್!

ಬಿಜೆಪಿ ಪಕ್ಷ ತಮಗೆ ಮುಂಬರುವ ಚುನಾವಣೆಗಳಲ್ಲಿ ತಮಗೆ ಟಿಕೆಟ್ ನೀಡುವುದಾಗಿ ಭರವಸೆ ಹೊಂದಿದ್ದ ಅನರ್ಹ ಶಾಸಕರಲ್ಲಿ ಈಗ ಅಸಮಾಧಾನ ಭುಗಿಲೆದ್ದಿದೆ!. ಬಿಜೆಪಿಗಾಗಿ ತಮ್ಮ ಪಕ್ಷವನ್ನು ತೊರೆದು ಸರ್ಕಾರವನ್ನು ಬೀಳಿಸಿ ಮುನ್ನಡೆದ ಶಾಸಕರು ಈಗ ಸ್ವಪಕ್ಷಕ್ಕೂ ಬೇಡವಾಗಿ, ಬಿಜೆಪಿಗೂ ಬೇಡವಾಗಿ ತ್ರಿಶಂಕು ಸ್ಥಿತಿಯಲ್ಲಿ ಎಲ್ಲರಿಂದ ಟೀಕೆಗೊಳಗಾಗಿದ್ದಾರೆ. ಈಗಿನ ಆಡಳಿತ ಸರ್ಕಾರದಲ್ಲಂತೂ ಖಾತೆ ಸಿಗಲಿಲ್ಲ. ಈಗ ಮುಂಬರುವ ಉಪ ಚುನಾವಣೆಯಲ್ಲಾದರೂ ಸ್ಪರ್ಧಿಸೋಣ ಅಂದರೆ ಅದಕ್ಕೂ ಬಿಜೆಪಿಯಿಂದಲೇ ಅಡ್ಡಗಾಲು. ಪರಿಸ್ಥಿತಿ ಹೀಗಿರುವಾಗ, ಎಲ್ಲಾ ಹದಿನೈದು ಕ್ಷೇತ್ರಗಳ ಪಕ್ಷದ ನಾಯಕರು, ಅನರ್ಹ ಶಾಸಕರ ಕುಟುಂಬಗಳಿಗೆ ಟಿಕೆಟ್ ನೀಡುವ ಬಿಜೆಪಿಯ ನಿರ್ಧಾರವನ್ನು ವಿರೋಧಿಸಿ ಹೊರಬಂದಿದ್ದಾರೆ.

ಟಿಕೆಟ್ ನೀಡದಿದ್ದಲ್ಲಿ ಕಾಂಗ್ರೆಸ್ ಮತ್ತು ಜೆಡಿ (ಎಸ್) ಗೆ ಸೇರ್ಪಡೆಗೊಳ್ಳುವ ಒಲವನ್ನು ವ್ಯಕ್ತಪಡಿಸಿದ್ದಾರೆ. ಎಂಟಿಬಿ ನಾಗರಾಜ್ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದರೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಹೊಸ್ಕೋಟೆ ಕ್ಷೇತ್ರದ ಬಿಜೆಪಿ ನಾಯಕ ಶರತ್ ಬಚ್ಚೆ ಗೌಡ ಅವರು ಸ್ಥಳೀಯ ನಾಯಕರ ಸಭೆ ಕರೆದಿದ್ದಾರೆ. ಮಾಜಿ ಕಾಂಗ್ರೆಸ್ ಮುಖಂಡ ಮತ್ತು ಶಿವಾಜಿನಗರ ಕ್ಷೇತ್ರದಿಂದ ಅನರ್ಹಗೊಂಡ ಶಾಸಕ ಆರ್. ರೋಶನ್ ಬೇಗ್ ಅವರ ಕುಟುಂಬಕ್ಕೆ ಟಿಕೆಟ್ ನೀಡಲು ಬಿಜೆಪಿ ಪಕ್ಷದ ನಾಯಕ ಕಟ್ಟಾ ಸುಬ್ರಮಣ್ಯ ನಾಯ್ಡು ವಿರೋಧಿಸುತ್ತಿದ್ದಾರೆ.

ಹಿರಿಯ ನಾಯಕ ಯುಬಿ ಬಣಕಾರ್ ಅನರ್ಹಗೊಂಡ ಮತ್ತೊಬ್ಬ ಶಾಸಕ ಬಿ.ಸಿ. ಪಾಟೀಲ್ ಅವರ ಕಡೆಗೆ ಆಸಕ್ತಿ ವಹಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.ಮೂಲಗಳ ಪ್ರಕಾರ, 15 ಕ್ಷೇತ್ರಗಳ ಕೆಲವು ಪ್ರಮುಖ ನಾಯಕರು ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆ ಸಂಪರ್ಕದಲ್ಲಿದ್ದಾರೆ. ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಆತಂಕಕ್ಕೀಡುಮಾಡಿದೆ.

ಬಿಜಿಪಿ ನಾಯಕರು ಟಿಕೆಟ್ ನೀಡದಿದ್ದರೆ ಈ ಅನರ್ಹ ಶಾಸಕರು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಎಲ್ಲವನ್ನೂ ಮಾಡಲು ತಯಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ಸಂಜೆ ನಡೆದ ಪಕ್ಷದ ಪ್ರಮುಖ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಮತ್ತು ಅನರ್ಹ ಶಾಸಕರ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡುವ ತೀರ್ಪಿನಂತೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಉಪಚುನಾವಣೆ ನಡೆಯಲಿರುವ 15 ಸ್ಥಾನಗಳಲ್ಲಿ 13 ಸ್ಥಾನಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದ ಬಿಜೆಪಿ ಪಕ್ಷಕ್ಕೆ ಈ ಬೆಳವಣಿಗೆ ಖಂಡಿತವಾಗಿಯೂ ಆಘಾತವನ್ನುಂಟು ಮಾಡಿದೆ.

Similar Articles

Top