ನಂಬರ್.1 ಬೌಲರ್ ಜಸ್ಪ್ರೀತ್ ಬುಮ್ರಾ ಹಿಂದಿನ ಕಣ್ಣೀರಿನ ಕಥೆ ಗೊತ್ತಾ?

ಸ್ಪೋರ್ಟ್ಸ್

ಅಲ್ಪಾವಧಿಯಲ್ಲಿಯೇ ಖ್ಯಾತಿ ಗಳಿಸಿದ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ, ಮುಂಬೈ ಇಂಡಿಯನ್ಸ್ ಟ್ವೀಟ್ ಮಾಡಿದ ವೀಡಿಯೊವೊಂದರಲ್ಲಿ ತಮ್ಮ ಹೋರಾಟದ ದಿನಗಳನ್ನು ನೆನಪಿಸಿಕೊಂಡರು. ಕಠಿಣ ಸಮಯವೇ ಒಬ್ಬರನ್ನು ಬಲಪಡಿಸುತ್ತದೆ ಎಂದು ಹೇಳಿದರು. “ನನ್ನ ಬಳಿ ಕೇವಲ ಒಂದು ಜೋಡಿ ಶೂಗಳು ಮಾತ್ರ ಇತ್ತು!” ಎಂದು ಜಸ್ಪ್ರಿತ್ ವೀಡಿಯೊದಲ್ಲಿ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬೈ ಮೂಲದ ಟಿ 20 ಫ್ರ್ಯಾಂಚೈಸ್ ಮಾಲೀಕ ನೀತಾ ಅಂಬಾನಿ ಸೋಮವಾರ ಲಂಡನ್‌ನಲ್ಲಿ ನಡೆದ ಕ್ರೀಡಾ ವ್ಯವಹಾರ ಶೃಂಗಸಭೆಯಲ್ಲಿ ಮಾತನಾಡುತ್ತಾ, “ಪ್ರತಿಭೆ ಎಲ್ಲಿಂದಲಾದರೂ ಬರಬಹುದು ಮತ್ತು ಯಶಸ್ಸಿನ ಪರಾಕಾಷ್ಠೆಯನ್ನು ತಲುಪಬಹುದು. ಭಾರತದ ಸಣ್ಣ ಪಟ್ಟಣದಲ್ಲಿ ಇದ್ದ ಒಬ್ಬ ಚಿಕ್ಕ ಹುಡುಗ ಮುಂಬೈ ಇಂಡಿಯನ್ಸ್ ಟೀಮ್ ಗೆ ಆಯ್ಕೆಯಾದ ಪರಿವರ್ತನೆಯ ಪ್ರಯಾಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ ” ಎಂದು ವೀಡಿಯೊದಲ್ಲಿ ಬುಮ್ರಾ ಬಗ್ಗೆ ತಿಳಿಸಿದ್ದಾರೆ.


ಬುಮ್ರಾ ತಾಯಿ ದಲ್ಜಿತ್ ಬುಮ್ರಾ ಹೇಳಿದ್ದೇನೆಂದರೆ, “ಅವನು ಐದು ವರ್ಷದವನಿದ್ದಾಗ, ನಾನು ನನ್ನ ಗಂಡನನ್ನು ಕಳೆದುಕೊಂಡೆ.” ಎಂದು ಭಾವುಕರಾದರು. ಬುಮ್ರಾ ಅದಕ್ಕೆ, “ನಂತರದ ದಿನಗಳಲ್ಲಿ ನಮಗೆ ಏನನ್ನೂ ಪಡೆಯಲು ಸಾಧ್ಯವಾಗಲಿಲ್ಲ. ನನ್ನ ಬಳಿ ಒಂದು ಜೋಡಿ ಬೂಟುಗಳು ಇದ್ದವು. ನಾನು ಒಂದು ಜೋಡಿ ಟೀ ಶರ್ಟ್‌ಗಳನ್ನು ಹೊಂದಿದ್ದೆ. ನಾನು ಅವುಗಳನ್ನೇ ತೊಳೆದು ಮತ್ತೆ ಮತ್ತೆ ಬಳಸುತ್ತಿದ್ದೆ. ಬಾಲ್ಯದಲ್ಲಿ, ನೀವು ಕಥೆಗಳನ್ನು ಕೇಳಿರುತ್ತೀರಿ ಕೆಲವೊಮ್ಮೆ ಈ ರೀತಿಯ ಸಂಗತಿಗಳನ್ನು ನೋಡಿ ತಿಳಿದುಕೊಂಡಿರುತ್ತೀರಿ. ಆದರೆ ನನ್ನ ಜೀವನದಲ್ಲಿ ಅದು ನಿಜವಾಗಿ ಸಂಭವಿಸಿತು. ಈ ಕಠಿಣ ಸಮಯಗಳು ನಿಮ್ಮನ್ನು ಬಲಪಡಿಸುತ್ತವೆ ಏಕೆಂದರೆ ನೀವು ಕಠಿಣ ದಿನಗಳನ್ನು ನೋಡಿದ್ದೀರಿ”ಎಂದು ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡರು.

“ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಟಿವಿಯಲ್ಲಿ ಮೊದಲ ಬಾರಿಗೆ ಬುಮ್ರಾನನ್ನ ನೋಡಿದಾಗ, ನನಗೆ ಅಳು ತಡೆದುಕೊಳ್ಳಲಾಗಲಿಲ್ಲ. ಅವನು ದುಡ್ಡಿಗಾಗಿ ದೈಹಿಕವಾಗಿ ಹೋರಾಡುವುದನ್ನು ನೋಡಿದ್ದೇನೆ.” ಎಂದು ದಲ್ಜೀತ್ ಹೇಳಿದರು. ಶ್ರೇಯಾಂಕದಲ್ಲಿ ಜಸ್ಪ್ರಿತ್ ಬುಮ್ರಾ ಈಗ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಂಬರ್ ಒನ್ ಬೌಲರ್ ಆಗಿದ್ದಾರೆ.