ಹೊಸ ಸುದ್ದಿಯೊಂದು ನಿವೇದಿತಾಗೆ ಬಹಳ ಸಂತಸ ತಂದಿದೆ.. ಖುಷಿಯಾಗಿರೋದಕ್ಕೆ ಕಾರಣವೇನು ಗೊತ್ತಾ..?

ವಾಹಿನಿ ಸುದ್ದಿ ಸಿನಿಮಾ

ಬಿಗ್ ಬಾಸ್ ಬಾರ್ಬಿ ಡೌಲ್ ನಿವೇದಿತಾ ಗೌಡ ತಮ್ಮ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. ಬಿಗ್ ಬಾಸ್ ಮುಗಿದ ನಂತರ ಒಂದಲ್ಲ ಒಂದರಿಂದ ಸುದ್ದಿಯಾಗುತ್ತಿರುವ ನಿವೇದಿತಾ ಗೌಡ.. ಇದೀಗ ಮತ್ತೆ ಸುದ್ದಿಯಾಗಿದ್ದಾರೆ. 

ಅತಿ ಚಿಕ್ಕಿ ವಯಸ್ಸಿಗೆ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದ ನಿವೇದಿತಾ ಗೌಡ ಇದೀಗ ಮೊದಲ ಬಾರಿಗೆ ಓಟ್ ಮಾಡುತ್ತಿದ್ದಾರಂತೆ.

ನಿವೇದಿತಾ ಗೌಡ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದು, ದೇಶದ ಪ್ರಜೆಗಳಾಗಿ ಮತದಾನ ಮಾಡುವುದು ನಮ್ಮ ಹಕ್ಕು ಎಂದು ಹೇಳಿದ್ದಾರೆ. ಅಲ್ಲದೇ ಮೊದಲ ಬಾರಿಗೆ ತಾವು ಮತದಾನ ಮಾಡುತ್ತಿರುವುದಾಗಿ ಹೇಳಿದ್ದಾರೆ.