30 ಕೋಟಿ 30 ಕೋಟಿ ಅನ್ಬೇಡಿ.. ಬಿಗ್ಬಾಸ್ ಮನೆಗು ಬಂದು ಬಿಟ್ಟಾರು ಐಟಿ ನವರು : ಕಿಚ್ಚ.! ವಿಡಿಯೋ ನೋಡಿ

ವಾಹಿನಿ ಸುದ್ದಿ

30 ಕೋಟಿ 30 ಕೋಟಿ ಅನ್ಬೇಡಿ.. ಬಿಗ್ಬಾಸ್ ಮನೆಗು ಬಂದು ಬಿಟ್ಟಾರು ಐಟಿ ನವರು : ಕಿಚ್ಚ.! ವಿಡಿಯೋ ನೋಡಿ

ಇಂದು ಕಿಚ್ಚ ಸುದೀಪ್ ತಮ್ಮ ವಾರಾಂತ್ಯದ ಎಪಿಸೋಡ್ ನಲ್ಲಿ ಎಲಿಮಿನೆಟ್ ಆಗಿ ಹೊರ ಬಂದ ಸ್ಪರ್ಧಿಗಳನ್ನ ಭೇಟಿ ಮಾಡಿ ಅವರ ಬಿಗ್ಬಾಸ್ ಜರ್ನಿಯ ಬಗ್ಗೆ ಮಾತನಾಡುವುದು ವಾಡಿಕೆ.. ಸದ್ಯ ಹೊರ ಬಂದ ಮುರುಳಿ ಹಾಗೆ ಜೀವತ ಪೈಕಿ, ಮುರುಳಿಯವರನ್ನ ಮಾತನಾಡಿಸುವ ಸಂದರ್ಭದಲ್ಲಿ ಕಿಚ್ಚ ಐಟಿ ರೇಡ್ ಬಗ್ಗೆ ಮಾತನಾಡುವ ಸಮಯ ಬಂದಿತ್ತು..

ಹೌದು, ಮುರುಳಿ 30 ಕೋಟಿ ಬಜೆಟ್ ನ ಬಿಗ್ಬಾಸ್ ನಂತಹ ದೊಡ್ಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರೋದಕ್ಕೆ ಖುಷಿಯಾಗಿದೆ.. ಇಂತಹ ಕೋಟಿ ಮೊತ್ತದ ಷೋನಲ್ಲಿ ಕಾಣಿಸಿಕೊಂಡಿದ್ದೀನಿ ಅಂದ್ರೆ ಅದಕ್ಕಿಂತ ಇನ್ನೇನು ಬೇಕು ಎಂದ್ರು.. ಇದಕ್ಕೆ ಕಿಚ್ಚ 30 ಕೋಟಿ 30 ಕೋಟಿ ಅನ್ಬೇಡಿ ಆಮೇಲೆ ಬಿಗ್ಬಾಸ್ ಮನೆಗೆ ಬಂದು ಬಿಟ್ಟಾರು ಅಂತ ತಮಾಷೆಯಾಗಿ ಹೇಳಿದ್ರು..

ಇದರ ಬಗ್ಗೆ ಮಾಹಿತಿ ಇಲ್ಲದ ಮುರುಳಿ ಯಾಕೆ ಸಾರ್ ಏನಾಯ್ತು ಎಂದಾಗ ಕಿಚ್ಚ ತಮ್ಮದೇ ಶೈಲಿಯಲ್ಲಿ ವಿವರಣೆ ನೀಡಿದ್ರು.. ಕಳೆದ ಮೂರ್ನಾಲ್ಕು ದಿನದಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇತ್ತು ನಾಲ್ಕು ಜನ ಸ್ಟಾರ್ ಗಳಲ್ಲಿ ಒಬ್ಬರಿಗೆ ನಿನ್ನೆ ಒಬ್ಬರಿಗೆ ಇಂದು ಬಿಡುಗಡೆ ಸಿಕ್ಕಿದೆ.. ಸ್ವಲ್ಪ ಮಿಸ್ ಆಗಿದ್ರೆ ನಾನು ನಿಮ್ಮನ್ನ ಮನೆಯಿಂದ ಆಚೆ ಕರೆಯೋಕೆ ಬರ್ತಾನೆ ಇರಲಿಲ್ಲ ಅಂದ್ರು.. ತಮಾಷೆಯಾಗಿಯೇ ಮುರುಳಿ ಅವರೊಂದಿಗೆ ಈ ವಿಚಾರವನ್ನ ಹಂಚಿಕೊಂಡ್ರು..

 

View this post on Instagram

 

A post shared by ಕನ್ನಡಿಗ ಶ್ರೀ ಸ್ವಾಮಿ (@shree.swamy) on