ಲಕ್ಷ್ಮೀ ಬಾರಮ್ಮ ಸೀರಿಯಲ್ ನಟಿ ಅನಿಕಾ ಹಾಗು ಕಾರುಣ್ಯ ರಾಮ್ ನಡುವೆ ರಂಪಾಟ..

ವಾಹಿನಿ ಸುದ್ದಿ ಸಿನಿಮಾ

ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿ ಕುಮುದಾ ಎಲ್ಲರಿಗೂ ಚಿರಪರಿಚಿತ. ಕುಮುದಾ ಅಲಿಯಾಸ್ ಹಾಗೂ ಅನಿಕಾ ಅವರ ಬಾಳಿನಲ್ಲಿ ಬಿರುಗಾಳಿ ಎದ್ದಿದೆ. ಈಗ ತಾನೆ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ ನಟಿ ಕಾರುಣ್ಯಾ ರಾಮ್  ಬಿರುಗಾಳಿ ಎಬ್ಬಿಸಿದ್ದಾರಂತೆ .


ಸಂಭಾವನೆ ವಿಷ್ಯದಲ್ಲೂ ಪುಟ್ಟಗೌರಿಯದ್ದೇ ಹವಾ.. ಪುಟ್ಟಗೌರಿ ಪಡೆಯೋ ಸಂಭಾವನೆ ಎಷ್ಟಿದೆ ಗೊತ್ತಾ..?

ಹೀಗಂತ ಆರೋಪ ಮಾಡುತ್ತಿರುವುದು ನಟಿ ಅನಿಕಾ. ಕಳೆದ ತಿಂಗಳು 11 ತಾರಿಖು ಅನಿಕಾ ಹಾಗೂ ಸಚಿನ್ ಅವರಿಗೆ ಎಂಗೇಜ್ಮೆಂಟ್ ನಡೆದಿದೆ. ಆದರೆ ಎಂಗೇಜ್ಮೆಂಟ್ ಆಗಿದೆ ತಡ ಸಚಿನ್ ಹಾಗೂ ಅನಿಕಾ ಅವರಿಗೆ ಕಾರುಣ್ಯಾ ಅವರು ಶನಿ ರೂಪದಲ್ಲಿ ಹೆಗಲೇರಿದ್ದಾರಂತೆ.

ಸಚಿನ್ ಹಾಗೂ ಅನಿಕಾ ಅವರಿಗೆ ಮಾರ್ಚ್ ನಲ್ಲಿ ಮದುವೆ ಫಿಕ್ಸ್ ಆಗಿದೆ, ಆದರೆ ಈ ಸಂದರ್ಭದಲ್ಲಿ ಕಾರುಣ್ಯಾ ನನ್ನ ಹುಡುಗನ ಹಿಂದೆ ಬಿದಿದ್ದಾರೆ ಎಂದು ಅನಿಕಾ ಆರೋಪಿಸಿದ್ದಾರೆ ಬಳಹ ವರ್ಷಗಳು ಹಿಂದೆ ಕಾರುಣ್ಯಾ ಹಾಗೂ ಸಚಿನ್ ಪ್ರೀತಿಸುತ್ತಿದ್ದರು, 3 ವರ್ಷದ ಹಿಂದೆ ಇವರಿಬ್ಬರು ನಡುವೆ ಬ್ರೇಕ್ ಆಪ್ ಆಗಿದೆ. ಬ್ರೇಕ್ ಆಪ್ ಆದ್ಮೇಲೆ ಸಚಿನ್ ಜೊತೆ ಎಂಗೇಜ್ಮೆಂಟ್ ನೆರವೇರಿದೆ.


ಸುವರ್ಣ ಗೆ ಹೊರಟ ರಾಘವೇಂದ್ರ ಹುಣಸೂರು ಸಂಭಾವನೆ ಎಷ್ಟು ಗೊತ್ತಾ..?

ಆದರೆ ಈಗ ಕಾರುಣ್ಯಾ ನನ್ನನ್ನು ಮದುವೆಯಾಗುವಂತೆ ಮತ್ತೆ ಕಾಡಲಾರಂಭಿಸಿದ್ದಾಳೆ ಎಂದು ಅನಿಕಾ ದೂರಿದರು. ಅಲ್ಲದೆ ಪಬ್ ಗೆ ಸಚಿನ್ ಅವರನ್ನು ಕರೆಸಿಕೊಂಡು ರಗಳೆ ಮಾಡಿದ್ದಾರೆ ಕಾರುಣ್ಯಾ. ರಾತ್ರಿ ಹೊತ್ತು ಕರೆ ಮಾಡಿ ಭೇಟಿಯಾಗುವಂತೆ ಪೀಡಿಸುತ್ತಿದ್ದಾಳೆ. ಇದಲ್ಲದೆ ಸಚಿನ್ ಹೆತ್ತವರಿಗೂ ಕರೆ ಮಾಡಿ ಧಮಕಿ ಹಾಕುತ್ತಿದ್ದಾಳಂತೆ.

ಮದುವೆಯಾಗಲಿರೋ ಹುಡುಗನನ್ನು ಕಾಡುತ್ತಾ ಹಿಂಸೆ ಕೊಡುತ್ತಿರೋ ಕಾರುಣ್ಯಾ ವಿರುದ್ಧ ದೂರು ದಾಖಲಿಸಲು ಅನಿಕಾ ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಕಾರುಣ್ಯಾ ಹೇಳುವುದೇ ಬೇರೆ, ನನ್ನಗೂ ಸಚಿನ್ ಪರಿಚಯವಿದೆ ಆದರೆ ನನ್ನ ಅವರ ಮಧ್ಯೆ ಸ್ನೇಹ ಬಿಟ್ಟರೆ ಯಾವುದೇ ರೀತಿ ಸಂಬಂಧವಿಲ್ಲ. ಅನಿಕಾ ಮಾಡಿರುವ ಆರೋಪವೆಲ್ಲ ಸುಳ್ಳು ಎಂದಿದ್ದಾರೆ. ಅನಿಕಾ ಯಾರು ಎಂಬುವುದೇ ನನ್ನಗೆ ಗೊತ್ತಿಲ್ಲ, ಗೊತ್ತಿಲ್ಲದ ವ್ಯಕ್ತಿ ಹೀಗೆ ಆರೋಪ ಮಾಡಿದರೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ಇಲ್ಲಿಯವರೆಗೂ ಸಚಿನ್ ಈ ಬಗ್ಗೆ ಎಲ್ಲಿಯೂ ಇದರ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ..