ಸಮೀರ್ ಕಾಲಿಗೆ ಬೀಳಲು ಬಂದ ರಿಯಾಜ್.. ಆಚಾರ್ಯ ಮಾಡಿದ ಎಡವಟ್ಟೇನು‌‌..?

ವಾಹಿನಿ ಸುದ್ದಿ ಸಿನಿಮಾ

ಇಂದು ಇದಕ್ಕೆ‌ ಇದ್ದಹಾಗೆ ರಿಯಾಜ್ ಸಮೀರ್ ಆಚಾರ್ಯ ‌ಮೇಲೆ ರೊಚ್ಚಿಗೆ ಎದ್ದಿದ್ರು.. ಅದೇನ್ ಆಯ್ತೋ ಏನೋ‌ ಸೀದಾ ಬಂದು ಸಮೀರ್ ಬಳಿ ಕುಳಿತು ನಾನ್ ಬಿಗ್ ಬಾಸ್ ಮನೆಗೆ ಯಾಕ್ ಬಂದಿದ್ದೀನಿ.. ಆ ದುಡ್ಡನ್ನ ಏನ್ ಮಾಡ್ತೀನಿ ಅಂತ ಬಿಡಿಸಿ ಬಿಡಿಸಿ ಮತ್ತೆ ಸಮೀರ್ ಮುಂದೆ ಹೇಳೋಕೆ‌ ಶುರು ಮಾಡಿದ್ರು..

ಈ ಇಬ್ಬರ ಸಂಭಾಷಣೆ ಆಳಕ್ಕೆ ಹೋಗುತ್ತಿದಂತೆ ಬಯಲಾಗಿದ್ದು ಎರಡು ಮೂರು ವಾರಗಳ ಹಿಂದೆ ನಡೆದು ಹೋದ ಬಿಗ್ ಬಾಸ್ ಸಂಚಿಕೆ.. ಒಂದು ಟಾಸ್ಕ್ ಗಾಗಿ ಬಿಗ್ ಬಾಸ್ ರಿಯಾಜ್ ಗೆ ಫೋನ್ ಕೊಟ್ಟಿದ್ರು.. ಅದನ್ನ ಕಂಡು ಹಿಡಿದ ಸಮೀರ್ ಬಿಗ್ ಬಾಸ್ ಗೆ ತಿಳಿಯದ ಹಾಗೆ ರಿಯಾಜ್ ಫೋನ್ ಯೂಸ್ ಮಾಡಿ ತಮಗೆ ತಾವೇ ಓಟ್ ಹಾಕಿಕೊಳ್ತಾರೆ ಅಂತ ಆರೋಪ ಮಾಡಿದ್ರು..

ಈ ವಿಚಾರವಾಗಿ ಇಂದು ಮಾತುಕತೆ ಶುರುವಾಗಿ ಅದು ಬಿಗ್ ಬಾಸ್ ಗೆಲ್ಲೋವರೆಗೂ ಹೋಗಿ ನಿಂತಿತ್ತು.. ಸಮೀರ್ ಆಗ ಹೇಳಿದ ಹೇಳಿಕೆಯೊಂದನ್ನ ಜೆಕೆ ರಿಯಾಜ್ ಬಳಿ ಕೇಳಿದ್ರಂತೆ‌‌.‌. ಬಿಗ್ ಬಾಸ್ ಹಣದ ಅವಶ್ಯಕತೆ ರಿಯಾಜ್ ಗೆ ಇಲ್ಲ ಅನ್ನೋ ಹಾಗೆ ಸಮೀರ್ ಹೇಳಿಕೆ ನೀಡಿದ್ದು ಇದು ಮನೆಯವರಿಗೆ ತಲುಪಿದೆ ಅನ್ನೋದು ರಿಯಾಜ್ ಆರೋಪವಾಗಿತ್ತು..

ನನ್ನ ಬಳಿ ಗಾಡಿ ಇರಬಹುದು, ಸೈಟ್ ಇರಬಹುದು, ಆದ್ರೇ ಖಾಲಿ ಸೈಟ್ ನಲ್ಲಿ ಹೋಗಿ ಮಲಗೋಕೆ ಆಗುತ್ತ.. ನಾನು ಈ ದುಡ್ಡಿನಲ್ಲಿ ಮನೆಕಟ್ಟಬೇಕು ಅಂತ ಅಂದುಕೊಂಡಿದ್ದೇನೆ.‌. ಅದು ನನ್ನ ಧ್ಯೇಯ ಕೂಡ.‌ ಆದರೆ ನೀವೂ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದೀರಿ ಅಂತ ಸಮೀರ್ ಗೆ ಕ್ಲಾಸ್ ತೆಗೆದುಕೊಂಡಿದ್ರು..

ಆದರೆ ಇದನ್ನ ಒಪ್ಪದ‌ ಸಮೀರ್ ನೀವು ಇಲ್ಲ ಸಲ್ಲದ ಆರೋಪ ಮಾಡೋಕೆ‌ ಮುಂದಾಗಿದ್ದೀರಿ.. ನಾನು ಹೇಳಿದ್ದೆ ಒಂದು ನೀವೂ ಅರ್ಥ ಮಾಡಿಕೊಂಡಿರುವುದೆ ಮತ್ತೊಂದು ಅಂತ ಹೇಳಿ ಅಲ್ಲಿಂದ ಎದ್ದು ಹೋಗಲು ಮುಂದಾದರು.. ಇದಕ್ಕೆ ರಿಯಾಜ್ ಮತ್ತಷ್ಟು ಕೋಪಗೊಂಡು ನೀವೂ ಕರ್ನಾಟಕ ಜನತೆಗೆ ಮೋಸ ಮಾಡುತ್ತಿದ್ದೀರ ಅಂದ್ರು..

ಈ ಮಾತಿಗೆ ಸಮೀರ್ ಬೇಸರಗೊಂಡು ನೀವೂ ಬೇರೆ ಏನೋ ಮಾತಾಡುತ್ತಿದ್ದೀರ.. ಈ ಸಂದರ್ಭಕ್ಕೂ ನೀವೂ ಮಾತನಾಡಿದ ರೀತಿಗೂ ಸರಿ ಇಲ್ಲ ಅಂತ ಹೇಳಿ ಎದ್ದು ಹೋಗಲು‌ ಮುಂದಾದಗ ರಿಯಾಜ್ ಸಮೀರ್ ಕಾಲಿಗೆ ಬೀಳುವಂತೆ ನಡೆದುಕೊಂಡ್ರು…

ಒಟ್ಟಿನಲ್ಲಿ ನಿನ್ನೆಯ ಸಂಚಿಕೆಯಲ್ಲಿ ಈ ಇಬ್ಬರದ್ದೆ ದೊಡ್ಡ ಚರ್ಚೆ ನಡೆದಿತ್ತು.. ಆದರೆ ಇದಕ್ಕೆ ಸರಿ ಉತ್ತರ ನೀಡೋದು ಬಿಗ್ ಬಾಸ್ ನೋಡುವ ವೀಕ್ಷಕರಲ್ಲದೆ ಮತ್ಯಾರು ಅಲ್ಲ.. ಏನಂತ್ತೀರಾ..

Pic Courtesy: Colors kannada HD