ಕವಿತಾ ಜೊತೆಗೆ ಶಶಿ ಮದುವೆಗೆ, ಕವಿತಾ ತಾಯಿ ಒಪ್ಪಿಗಿ ಇದ್ಯಾ..? ಈ ಬಗ್ಗೆ ಹೇಳಿದ್ದೇನು ಗೊತ್ತಾ..?

ವಾಹಿನಿ ಸುದ್ದಿ

ಬಿಗ್ ಬಾಸ್ ಮನೆಯಲ್ಲಿ ಕವಿತಾ ಹಾಗೂ ಶಶಿ ಇಬ್ಬರು ಒಳ್ಳೆಯ ಸ್ನೇಹಿತರು. ಆದರೆ ಶಶಿ ಅವರಿಗೆ ಕವಿತಾ ಮೇಲೆ ಕೊಂಚ ಪ್ರೀತಿ ಇದೆ ಎಂಬ ಸುದ್ದಿ ಕೆಲವೊಮ್ಮೆ ಕೇಳಿಬಂದಿದೆ, ಈ ಬಗ್ಗೆ ಸುದೀಪ್ ಕೂಡ ಕೆಲವು ಬಾರಿ ಚರ್ಚಿಸಿದ್ದಾರೆ. ಇನ್ನು ಮೊನ್ನೆ ನೀಡಿದ ಕ್ಯಾಂಡಲ್ ಲೈಟ್ ಡಿನ್ನರ್ ನಲ್ಲಿ ಟಾಸ್ಕ್ ನಲ್ಲಿ ಶಶಿ ಹಾಗೂ ಕವಿತಾ ಮದುವೆ ವಿಚಾರ ಪ್ರಸ್ತಾಪ ಕೂಡ ಆಯಿತ್ತು. ಆದರೆ ಅದು ಟಾಸ್ಕ್ ಆಗಿತ್ತು..

ಇನ್ನು ಇತ್ತ ಈ ಬಗ್ಗೆ ಕವಿತಾ ತಾಯಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗಳು ಬಿಗ್ ಬಾಸ್ ನೀಡಿದ ಟಾಸ್ಕ್ ಉತ್ತಮವಾಗಿ ನಿಭಾಯಿಸಿದ್ದಾಳೆ. ಬಿಗ್ ಬಾಸ್ ಮನೆಯಲ್ಲಿ ಮನರಂಜನೆ ನೀಡುವುದು ಸ್ಪರ್ಧಿಗಳ ಕರ್ತವ್ಯ ಅದನ್ನು ಕವಿತಾ ಚೆನ್ನಾಗಿ ಮಾಡಿದ್ದಾಳೆ. ನನ್ನ ಮಗಳು ಒಪ್ಪಿದ್ರೆ, ನನಗೆ ಏನು ಸಮಸ್ಯೆ ಇಲ್ಲ, ಕವಿತಾ ಯಾರನ್ನು ಇಷ್ಟಪಟ್ಟು ಕರೆದುಕೊಂಡು ನಮ್ಮ ಮುಂದೆ ನಿಲ್ಲಿಸಿದ್ರು, ನಾವು ಮದುವೆ ಮಾಡಿಸುತ್ತೇವೆ, ಎಂದು ಹೇಳುತ್ತಾ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಕವಿತಾ ತಾಯಿ..