ಬಿಚ್ಚುಗತ್ತಿಗೆ ಬಂತು ಬಂಪರ್ ಪ್ರೈಸ್.. ಭಾರಿ ಮೊತ್ತಕ್ಕೆ ಸೇಲ್ ಆಯ್ತು ಬಿಚ್ಚುಗತ್ತಿ ಡಬ್ಬಿಂಗ್ ರೈಟ್ಸ್…

ಸಿನಿಮಾ

ಖ್ಯಾತ ಕಾದಂಬರಿಗಾರ ಬಿ.ಎಲ್.ವೇಣು ಅವರು ಬರೆದಿರುವ ಕಾದಂಬರಿಯನ್ನು ಆಧಾರಿಸಿ ತಯಾರಾಗಿರುವ ಕೋಟೆ ನಾಡಿನ ಪಾಳೇಗಾರ ಬಿಚ್ಚುಗತ್ತಿಯ ಜೀವನಗಾಥೆ ಆಧರಿಸಿದ ಬಿಚ್ಚುಗತ್ತಿ ಚಿತ್ರದ 

ಡಬ್ಬಿಂಗ್ ರೈಟ್ಸ್ ಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಹೌದು, ಬಿಚ್ಚುಗತ್ತಿ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಬಂತು ಬಂಪರ್ ಬೆಲೆ. ಬರೊಬ್ಬರಿ 3 ಕೋಟಿ. 20 ಲಕ್ಷಕ್ಕೆ ಚಿತ್ರದ ರೈಟ್ಸ್ ಮಾರಾಟವಾಗಿದೆಯಂತೆ.

ಸದ್ಯ ಸ್ಯಾಂಡಲ್ವುಡ್ ಅಂಗಳದಲ್ಲಿ ಈ ವಿಚಾರವಾಗಿ ಬಿಚ್ಚುಗತ್ತಿ ಭಾರಿ ಸುದ್ದಿಯಾಗ್ತಿದೆ. ಹೊಸಬರ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಈ ಮಟ್ಟಕ್ಕೆ ಡಬ್ಬಿಂಗ್ ರೈಟ್ಸ್ ಆಗ್ತಿರೋದು ವಿಶೇಷ ಎನ್ನಬಹುದು. ಅಲ್ಲದೆ ಇದಕ್ಕೆ ಮುಖ್ಯ ಕಾರಣ ಐತಿಹಾಸಿಕ ಸಿನಿಮಾ, ಚಿತ್ರಕಥೆ ಹಾಗೂ ಚಿತ್ರದ ಮೇಕಿಂಗ್ ಎನ್ನಲಾಗುತ್ತಿದೆ. ಹೀಗಾಗಿ ಗಾಂಧಿನಗರದಲ್ಲಿ ರಿಲೀಸ್ ಗೂ ಮೊದಲೇ ಬಿಚ್ಚುಗತ್ತಿ ಸಿನಿಮಾ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ.

ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಹಾಗೂ ಹರಿಪ್ರಿಯಾ ನಟಿಸಿರುವ ಬಿಚ್ಚುಗತ್ತಿ ಚಿತ್ರವನ್ನು ಹರಿ ಸಂತೋಷ್ ನಿರ್ದೇಶಿಸಿದ್ದು ಬಾಹುಬಲಿ ಖ್ಯಾತಿಯ ಪ್ರಭಾಕರ್‍ಗೆ ವಿಶಿಷ್ಟ ಪಾತ್ರವಿದೆ. ರಮೇಶ್‌ ಪಂಡಿತ್‌, ಪ್ರಕಾಶ್‌ ಹೆಗ್ಗೊಡು, ಕಲ್ಯಾಣಿ, ಶ್ರೀನಿವಾಸಮೂರ್ತಿ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ. ನಕುಲ್‌ ಅಭ್ಯಂಖರ್‌ ಅವರ ಸಂಗೀತವಿದ್ದು, ಸೂರಜ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಗುರುಪ್ರಶಾಂತ್‌ ರೈ ಛಾಯಾಗ್ರಹಣವಿದ್ದು, ಇದೇ 21ರಂದು ರಾಜ್ಯದಾದ್ಯಂತ ರಿಲೀಸ್ ಆಗಲಿದೆ ಬಿಚ್ಚುಗತ್ತಿ ಚಿತ್ರ.