ಭಜರಂಗಿ 2 ಪೋಸ್ಟರ್ ಬಿಟ್ಟು ಕ್ರೇಜ್ ಹುಟ್ಟಿಸಿದ ಶಿವಣ್ಣ- ಹರ್ಷ

ಸಿನಿಮಾ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ, ಈ ವರ್ಷದ ಮೋಸ್ಟ್ ಅವೈಟೆಡ್ ಭಜರಂಗಿ 2 ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಭಜರಂಗಿ 2 ಚಿತ್ರದ ನೆಕ್ಸ್ಟ್ ಲೆವೆಲ್ ಬೊಂಬಾಟ್ ಪೋಸ್ಟರ್ ರಿಲೀಸ್ ಆದ ಕೆಲವೇ ಹೊತ್ತಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಪೋಸ್ಟರ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಭಜರಂಗಿ 2 ಟೈಟಲ್ಲೇ ಹೇಳುವ ಹಾಗೆ ಆಂಜನೇಯನ ಬಗ್ಗೆ ಕಥೆ ಹೊಂದಿದೆ. ಭಜರಂಗಿ ಸಿನಿಮಾದಂತೆ ಮತ್ತೆ ಈ ಸಿನಿಮಾದಲ್ಲೂ ಹನುಮಂತನ ಆರಾಧನೆಯನ್ನು ನಿರ್ದೇಶಕ ಹರ್ಷ ಮುಂದುವರೆಸಿದ್ದಾರೆ. ಭಾವನಾ ಸಿನಿಮಾದ ನಾಯಕಿಯಾಗಿದ್ದು ಬೇಡರ ಹುಡುಗಿಯಂತಿದ್ದ ಅವರ ಹೀರೋಯಿನ್ ಲುಕ್ ಕೂಡ ಈಗಾಗ್ಲೇ ಕುತೂಹಲ ಕೆರಳಿಸಿದೆ

ಜಯಣ್ಣ ಹಾಗೂ ಭೋಗೆಂದ್ರ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜಿಸಿದ್ದು, ಜೆ.ಸ್ವಾಮಿ ಅವರ ಛಾಯಾಗ್ರಹಣವಿದೆ. ದೀಪು ಎಸ್.ಕುಮಾರ್ ಅವರ ಸಂಕಲನವಿದೆ. ಇನ್ನು  ಸಿನಿಮಾದಲ್ಲಿ ನಟಿಸುತ್ತಿರುವ ಕಲಾವಿದರು ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ ನಿರ್ದೇಶಕ ಹರ್ಷ. ಒಟ್ಟಿನಲ್ಲಿ ಭರ್ಜರಂಗಿ 2 ಪೋಸ್ಟರ್ ಶಿವಣ್ಣ ಅಭಿಮಾನಿಗಳಿಗೆ ಸಂತಸ ತಂದಿದೆ. ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್ ಮತ್ತೆ ಹಿಟ್ ಆಗುವ ಭರವಸೆ ಮೂಡಿಸಿದೆ.