ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಐತಿಹಾಸಿಕ ನಿಲುವು..

ಸ್ಪೋರ್ಟ್ಸ್

ಬಿಸಿಸಿಐ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ವಹಿಸಿಕೊಂಡ ಸೌರವ್ ಗಂಗೂಲಿ ಭಾರತದ ಮೊದಲ ಹೊನಲು ಬೆಳಕಿನ (ಹಗಲು-ರಾತ್ರಿ) ಟೆಸ್ಟ್ ಪಂದ್ಯಗಳನ್ನು ಆಯೋಜಿಸುವಲ್ಲಿ ತಮ್ಮ ಮೊದಲ ಹೆಜ್ಜೆಯಲ್ಲೇ ಯಶಸ್ವಿಯಾಗಿದ್ದಾರೆ. ಗಂಗೂಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯನ್ನು (ಬಿಸಿಬಿ) ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಅದಕ್ಕೆ ತಕ್ಷಣ ಒಪ್ಪಿದರಂತೆ ಮತ್ತು ಭಾರತೀಯ ನಾಯಕ ವಿರಾಟ್ ಕೊಹ್ಲಿ ಅವರ ಸಕಾರಾತ್ಮಕ ಅನುಮೋದನೆಯಿಂದಾಗಿ ಇದು ಸಾಕಾರವಾಗಿದೆ. ವಾಸ್ತವವಾಗಿ, ಗಂಗೂಲಿ ಅವರು ಅಲ್ಪಾವಧಿಯಲ್ಲಿ ಈ ‘ಐತಿಹಾಸಿಕ ನಿರ್ಧಾರ’ ವನ್ನು ತೆಗೆದುಕೊಂಡಿದ್ದಾರೆ. ಈ ಐತಿಹಾಸಿಕ ಪಂದ್ಯ ನವೆಂಬರ್ 22 ರಿಂದ ಕೋಲ್ಕೊತಾ ಈಡನ್ ಗಾರ್ಡನ್‌ನಲ್ಲಿ ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯವನ್ನು ಹೊನಲು ಬೆಳಕಿನ ಟೆಸ್ಟ್ ಪಂದ್ಯವಾಗಿ ಆಡಲಾಗುವುದು.

“ನಮ್ಮ ದೀರ್ಘಾವಧಿಯ ಸಹ ತಂಡ ಬಿಸಿಬಿ (ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್), ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಲು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. ಇದು ಭಾರತೀಯ ಕ್ರಿಕೆಟ್‌ನಲ್ಲಿ ವಿಶೇಷವಾದ ಆರಂಭವಾಗಿದೆ “ಎಂದು ಬಿಸಿಸಿಐನ ಅಧಿಕೃತ ವೆಬ್‌ಸೈಟ್ ವರದಿ ಮಾಡಿದೆ. “ಭಾರತೀಯ ಕ್ರಿಕೆಟ್ ಅನ್ನು ಮುಂದೆ ಕೊಂಡೊಯ್ಯಲು ಭಾರತದ ಮಾಜಿ ಕ್ಯಾಪ್ಟನ್ ಮತ್ತು ಬಿಸಿಸಿಐನ ಪ್ರಸ್ತುತ ಅಧ್ಯಕ್ಷರಾಗಿ ಆಯ್ಕೆಯಾದ ನನಗೆ ಟೆಸ್ಟ್ ಕ್ರಿಕೆಟ್ ಅತ್ಯಂತ ಆದ್ಯತೆಯಾಗಿದೆ ಮತ್ತು ಬಿಸಿಸಿಐನಲ್ಲಿ ನಾವು ಈ ಸ್ವರೂಪವನ್ನು ಮತ್ತೆ ಮರಳಿ ತರಲು ಯಾವುದೇ ತಡೆಯಿದ್ದರೂ ಬಿಡುವುದಿಲ್ಲ “ಎಂದು ಅವರು ಸೌರವ್ ಗಂಗೂಲಿ ತಿಳಿಸಿದ್ದಾರೆ.

ಈ ಹಂತವು ಪ್ರೇಕ್ಷಕರನ್ನು ಕ್ರೀಡಾಂಗಣಗಳಿಗೆ ಕರೆತರುತ್ತದೆ ಎಂಬ ಆಶಾವಾದವಿದೆ. “ನಮ್ಮ ಈ ಪ್ರಯತ್ನದಲ್ಲಿ, ಇದು ಒಂದು ದೊಡ್ಡ ಹೆಜ್ಜೆಯಾಗಲಿದೆ ಮತ್ತು ಇದು ಪ್ರೇಕ್ಷಕರನ್ನು ಮುಖ್ಯವಾಗಿ ಚಿಕ್ಕ ಮಕ್ಕಳನ್ನು ಕ್ರೀಡಾಂಗಣಗಳಿಗೆ ಕರೆತರುತ್ತದೆ ಎಂದು ನಾವು ನಂಬುತ್ತೇವೆ ವಿನಂತಿಯನ್ನು ಸ್ವೀಕರಿಸಿದ್ದಕ್ಕಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ ಮತ್ತು ಅವರ ತಂಡಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ಸಹಕಾರಕ್ಕಾಗಿ ಭಾರತ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ”ಎಂದು ಗಂಗೂಲಿ ತಿಳಿಸಿದರು. ಬಿಸಿಸಿಐ ಕಾರ್ಯದರ್ಶಿ ಜೇ ಷಾ ಸಹ ಇದನ್ನು ಅನುಮೋದಿಸಿ, “ಸೌರವ್ ನಮ್ಮ ತಂಡಕ್ಕೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ರಾಂತಿಕಾರಕ ಕಲ್ಪನೆಯನ್ನು ಸಾಕಾರವಾಗಿಸಲು ಮೊದಲ ಹೆಜ್ಜೆ ಇರಿಸಿದ್ದಾರೆ” ಎಂದು ಹೇಳಿದರು.