‘ಬಡವ ರಾಸ್ಕಲ್’ ಮೇಲೆ ಮುನಿಸಿಕೊಂಡ ಡಾಲಿ ಧನಂಜಯ್ ಅಭಿಮಾನಿಗಳು..

ಸಿನಿಮಾ

ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ಹೆಚ್ಚಾಗಿಬಿಟ್ಟಿದೆ, ಇದೀಗ ಈ ಸಾಲಿಗೆ ಡಾಲಿ ಧನಂಜಯ್ ಹಾಗೂ ರಿಷಬ್ ಶೆಟ್ಟಿ ಹೊಸ ಸೇರ್ಪಡೆಯಾಗಿದ್ದಾರೆ. ಇದಕ್ಕೆಲ್ಲಾ ಕಾರಣ ಆಬಡವ ರಾಸ್ಕಲ್‘. ಹೌದು, ಬಡವ ರಾಸ್ಕಲ್ ಹಾಡಿನಿಂದ ಸೃಷ್ಟಿಯಾದ ಗೊಂದಲ ಈಗ ಡಾಲಿ ಧನಂಜಯ್ ಅಭಿಮಾನಿಗಳನ್ನು‌ ಕೆರಳಿಸಿದೆ.

ರಿಷಬ್ ಶೆಟ್ಟಿ ಅವರು ಬಡವ ರಾಸ್ಕಲ್ ಎಂಬ ಸಾಹಿತ್ಯವಿರುವ ಹಾಡೊಂದನ್ನ 9 ಸುಳ್ಳು ಕಥೆಗಳು ಎಂಬ ಚಿತ್ರಕ್ಕೆ ಹಾಡಿದ್ದಾರೆ.. ಆದರೆ ಇದೇ ಈಗ ಧನಂಜಯ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.. ಯಾಕಂದ್ರೆ ಬಡವ ರಾಸ್ಕಲ್ ಅನ್ನೋದು ಧನಂಜಯ್ ಮುಂದಿನ ಸಿನಿಮಾ ಹೆಸರಾಗಿದ್ದು, ಅದೇ ಟೈಟಲ್ ಅನ್ನ ಇಟ್ಟುಕೊಂಡು ಹಾಡು ಮಾಡಿರೋದು ಎಷ್ಟು ಸರಿ ಅಂತ ಪ್ರಶ್ನೆ ಮಾಡಿದ್ದಾರೆ.

ಈ ಹಾಡನ್ನು ಕೇಳಿದ‌ ಮೇಲೆ ಪ್ರತಿಕ್ರಿಯಿಸಿರುವ ಡಾಲಿ ಧನಂಜಯ್, ನನ್ನ ಬಡವ ರಾಸ್ಕಲ್ ಸಿನಿಮಾಗೂ ನಿರ್ದೇಶಕ ರಿಷಬ್ ಶೆಟ್ಟಿ ಹಾಡಿರುವ ಈ ಹಾಡಿಗೂ, ಯಾವುದೇ ಸಂಬಂಧವಿಲ್ಲ. ಇದು ಯಾವ ಸಿನಿಮಾ ಹಾಡು ಎಂದು ನನಗೂ ಗೊತ್ತಿಲ್ಲ, ಆದರೆ ಈ ತಂಡಕ್ಕೆ ಆಲ್ ದಿ ಬೆಸ್ಟ್. ನನ್ನ ಸಿನಿಮಾ ಪ್ರಮೋಟ್ ಮಾಡಿರೋದಕ್ಕೆ ತುಂಬಾ ಥ್ಯಾಂಕ್ಸ್ ಎಂದು ಬರೆದುಕೊಂಡಿದ್ದಾರೆ.