8 MM ನಲ್ಲಿ ಟಗರು ಸಿಂಗರ್ ಆಟೋನಿ ಅಬ್ಬರ..!! ಮೋಡಿ ಮಾಡ್ತಿದೆ ಮೇಕಿಂಗ್ ವಿಡಿಯೋ…

ವಿಡಿಯೋ ಸಿನಿಮಾ

8 MM ನಲ್ಲಿ ಟಗರು ಸಿಂಗರ್ ಆಟೋನಿ ಅಬ್ಬರ..!! ಮೋಡಿ ಮಾಡ್ತಿದೆ ಮೇಕಿಂಗ್ ವಿಡಿಯೋ…

ಕೆಲವೊಂದು ಸಿನಿಮಾಗಳೆ ಹಾಗೆ.. ಪ್ರಚಾರ ಮಾಡ್ಲೇಬೇಕು ಅಂತ ಏನು ಇಲ್ಲ.. ಚಿತ್ರ ಸೆಟ್ಟೇರಿದ್ರೆ ಸಾಕು ಅದಾಗಿ ಅದೇ ಪ್ರಚಾರವಾಗಿ ಬಿಡುತ್ತೆ.. ಅದರಲ್ಲು ಜಗ್ಗೇಶ್ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ತಿರುವ ಡಿಫರೆಂಟ್ ಲುಕ್ ಗೆ ಚಂದನವನದ ತುಂಬಾ ಟಾಕ್ ಶುರುವಾಗಿ ಬಿಟ್ಟಿದೆ.. ಇಲ್ಲಿಂದ ಶುರುವಾಗಿದ್ದೆ 8 ಎಂಎಂ ಅನ್ನೋ ಸಿನಿಮಾದ ಬಿಸಿ ಬಿಸಿ ಸುದ್ದಿ…

ಸದ್ಯಕ್ಕೆ ರಿಲೀಸ್ ಗೆ ರೆಡಿ ಇರುವ ಈ ಚಿತ್ರದ ಮೇಕಿಂಗ್ ವಿಡಿಯೋ ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡ್ತಿದೆ.. ಕಾರಣ ಈ ಹಾಡಿನ ಮೇಕಿಂಗ್ ಪೂರ ಸಿನಿಮಾ ಮುಹೂರ್ತ ದಿಂದ ಹಿಡಿದು ಚಿತ್ರದ ಶೂಟಿಂಗ್ ವರೆಗೂ ತೋರಿಸಲಾಗಿದೆ.. ಮತ್ತೊಂದು ವಿಶೇಷತೆ ಅಂದ್ರೆ ಟಗರು ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿನ ಮೂಲಕ ಗಮನ ಸೆಳೆದಿದ್ದ ಆ್ಯಂಟೋನಿ ಈ ಹಾಡನ್ನ ಹಾಡಿರೋದು..

ಅಭಿ ಕನಸಿನ ಕವನ ಲಿರಿಕ್ಸ್ ಬರೆದಿರುವ ದುನಿಯಾ ಹಾರಿ ಬಿಟ್ಟ ಗಾಳಿಪಟ ಅನ್ನೋ ಹಾಡು ಇದಾಗಿದ್ದು, 8 ಎಂಎಂ ನ ಒಳಗೆ ಫುಲ್ ಪ್ಯಾಕಡ್ ಮನರಂಜನೆ ತುಂಬಿದೆ ಅನ್ನೋದನ್ನ ಸಾಭೀತು ಪಡೆಸುತ್ತಿದೆ.. ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.. ಹರಿಕೃಷ್ಣ ಎಸ್ ನಿರ್ದೇಶನದಲ್ಲಿ 8ಎಂಎಂ ರೆಡಿಯಾಗಿದೆ.. ನವರಸ ನಾಯಕ ಜಗ್ಗೇಶ್, ವರಿಷ್ಠ ಸಿಂಹ, ಮಯೂರಿ, ಆದಿ ಲೋಕೇಶ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ದೊಡ್ಡ ತಾರಬಳಗವೇ ಸಿನಿಮಾದಲ್ಲಿದೆ..

ಹರಿಚರಣ್‌ ಆರ್ಟ್ಸ್‌ ಮತ್ತು ಶಾನ್ವಿ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿಯಲ್ಲಿ ನಾರಾಯಣ ಬಾಬು, ಇನ್‌ಫಾಂಟ್‌ ಪ್ರದೀಪ್, ಸಲೀಮ್‌ ಷಾ ನಿರ್ಮಾಣ ಮಾಡಿದ್ದಾರೆ. ಅಂದ್ಹಾಗೆ 8ಎಂ ಎಂ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ಬರಲಿದ್ದು, ಚಿತ್ರತಂಡ ರಿಲೀಸ್‌ಗೆ ಭರ್ಜರಿ ತಯಾರಿ ನಡೆಸ್ತಿದೆ.