ರಾಶಿಚಕ್ರದ ಬದಲಾವಣೆಯಿಂದ ಈ ಮೂರು ರಾಶಿಯವರಿಗೆ ಕೊರೋನಾ ಭೀತಿ ದೂರವಾಗಲಿದೆ..

ಲೈಫ್‍ಸ್ಟೈಲ್

ಶಾರ್ವರಿ ನಾಮ ಸಂವತ್ಸರದ ಆಗಮನ ಕೆಲವು ರಾಶಿಯವರಿಗೆ ಉತ್ತಮ ಫಲ ನೀಡಲಿದೆ. ಪ್ರಸ್ತುತ ಜನರನ್ನ ಸಂಕಷ್ಟಕ್ಕೆ ದೂಡಿ, ಭೀತಿಯ ವಾತಾವರಣ ಸೃಷ್ಟಿಸಿರುವ ಕರೋನಾ ರೋಗದಿಂದ ಚೇತರಿಕೆ ಸಿಗಲಿದೆ ಹಾಗು ಭಯ ಮುಕ್ತರಾಗಲಿದ್ದೀರಿ. ಈ ರಾಶಿಗಳಾವುವು ಎಂದು ನೋಡೋಣ ಬನ್ನಿ..

ಮೊದಲನೆಯದಾಗಿ ಮೇಷ ರಾಶಿ. ವಾರದ ಭವಿಷ್ಯದ ಪ್ರಕಾರ ಚಂದ್ರ ಐದನೇ, ಆರನೇ, ಏಳನೇ ಮತ್ತು ಎಂಟನೇ ಮನೆಗೆ ಸಾಗಲಿದ್ದಾನೆ. ಈ ವಾರದ ಆರಂಭದಲ್ಲಿ ಈ ರಾಶಿಯವರಿಗೆ ಉತ್ತಮವಾಗಲಿದೆ. ಇನ್ನು ಪ್ರತಿದಿನ ವ್ಯಾಯಾಮದಂತಹ ದೈಹಿಕ ಆರೋಗ್ಯ ಚಟುವಟಿಕೆಗಳನ್ನ ರೂಢಿಸಿಕೊಂಡರೆ ಇದು ನಿಮಗೆ ದೀರ್ಘಾವಧಿಯಲ್ಲಿ ಉಪಯೋಗವಾಗುವುದು.
ಇನ್ನು ಮತ್ತೊಂದು ರಾಶಿಯೆಂದರೆ ಅದು ಮಕರ ರಾಶಿ. ಕುಟುಂಬದಲ್ಲಿ ಪ್ರೀತಿ ಕಾಳಜಿಯನ್ನ ತೋರಿಸಿ. ಧನಲಾಭ ನಿಮ್ಮ ನಿರೀಕ್ಷೆಯಷ್ಟು ಇರುವುದಿಲ್ಲ. ನಿಮ್ಮ ಈ ಬಿಡುವಿನ ವೇಳೆಯನ್ನು ಸರಿಯಾಗಿ ಯೋಜಿಸಿ ಬಳಸಿಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಂತರದ ದಿನಗಳು ಸುಗಮವಾಗಿರುವಂತೆ ತೋರುತ್ತದೆ. ವಾರದ ಆರಂಭದಲ್ಲಿ ಚಂದ್ರ ಎರಡನೇ ಮನೆಯಲ್ಲಿ ಇರುವುದರಿಂದ ಒಳಿತಾಗುವ ಸಾಧ್ಯತೆ ಇದೆ. ಇದು ಧನಲಾಭದ ಸೂಚನೆ.

ಇನ್ನು ಕೊನೆಯದಾಗಿ ತುಲಾ ರಾಶಿ. ಈ ವಾರ ಚಂದ್ರ ಹನ್ನೊಂದನೇ, ಹನ್ನೆರಡನೇ, ಮೊದಲನೇ ಮತ್ತು ಎರಡನೇ ಮನೆಯಲ್ಲಿರುತ್ತದೆ. ಈ ವಾರದ ಆರಂಭದಲ್ಲಿ ಚಂದ್ರ ಹನ್ನೊಂದನೇ ಮನೆಯಲ್ಲಿರುವುದರಿಂದ ಲಾಭ ಮತ್ತು ಸಾಮಾಜಿಕ ಯಶಸ್ಸನ್ನು ಸೂಚಿಸುತ್ತದೆ. ಆದಷ್ಟು ಕಾಲ ಬಿಡುವಿನ ಕಾಲವನ್ನ ಸದುಪಯೋಗಪಡಿಸಿಕೊಳ್ಳಿ. ಮುಂದಿನ ದಿನಗಳು ನಿಮಗೆ ಉತ್ತಮವಾಗಿರಲಿದೆ. ನಿಮ್ಮ ಕೌಶಲ್ಯವನ್ನು ಈ ಸಮಯದಲ್ಲಿ ಅಭಿವೃದ್ಧಿಗೊಳಿಸಿಕೊಳ್ಳಿ.
ಈ ಮೇಲಿನ ಎಲ್ಲಾ ರಾಶಿಯವರಿಗೆ ಚಂದ್ರನ ದೆಸೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಹಾಗು ಧನಲಾಭ ಕೂಡ ಆಗಿ ಆರೋಗ್ಯವೃದ್ಧಿಯಾಗಲಿದೆ.