ಹೀನಾಯವಾಗಿ ಸೋತ ಪಾಕ್ ನಾಯಕನಿಗೆ ರೊಚ್ಚಿಗೆದ್ದ ಅಭಿಮಾನಿ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ..

ಸ್ಪೋರ್ಟ್ಸ್

ಶ್ರೀಲಂಕಾ ತಂಡವನ್ನು ತಮ್ಮ ನೆಲದಲ್ಲಿ ಟಿ 20 ಐ ಸರಣಿ ಆಡಲು ಆಹ್ವಾನಿಸಿದ ಪಾಕಿಸ್ತಾನ ತಂಡ ಈ ಬಾರಿ, ಭಾರಿ ನಿರೀಕ್ಷೆಯನ್ನು ಹೊತ್ತು ಎಲ್ಲರ ಗಮನ ಸೆಳೆದಿತ್ತು. ಇದು ಇಂಡೋ ಪಾಕ್ ಮ್ಯಾಚ್ ನಷ್ಟೇ ಕುತೂಹಲಭರಿತವಾಗಿತ್ತು. ಆದರೆ ಈ ಸರಣಿಯಲ್ಲಿ ಕೇವಲ 89 ರನ್‌ಗಳಿಂದ ಪಾಕ್ ತಂಡ ಸೋತಿದ್ದೆ ತಡ ಅಭಿಮಾನಿಗಳು ರೊಚ್ಚಿಗೆದ್ದರು. ಸೋಶಿಯಲ್ ಮೀಡಿಯಾ ತಂಡ ಮತ್ತು ಅದರ ಆಟಗಾರರ ಬಗ್ಗೆ ಟೀಕೆಗಳಿಂದ ತುಂಬಿ ತುಳುಕಿತು. ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಸೋಲಿನ ನಂತರ ಈಗ ಈ ಸೋಲಿನಿಂದ ಪಾಕಿಸ್ತಾನದ ಆಟಗಾರರು ಎಲ್ಲಾ ಜೋಕ್‌ಗಳ ಕೇಂದ್ರಬಿಂದುವಾಗಿದರು!

ಪಾಕಿಸ್ತಾನ ಕ್ರಿಕೆಟ್ ತಂಡದ ಈ ಮಟ್ಟಿಗಿನ ಪ್ರಭಾವಶಾಲಿ ಪ್ರದರ್ಶನ, ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಅವರನ್ನು ಗೆಲಿಗೀಡುಮಾಡಿದೆ! ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ. ಅವರು ವಿಶ್ವಕಪ್ ಸಮಯದಲ್ಲಿ ತೀವ್ರ ಟೀಕೆಗಳನ್ನು ಎದುರಿಸಿದ ನಂತರ, ಶ್ರೀಲಂಕಾ ವಿರುದ್ಧದ ಇತ್ತೀಚಿನ ಸೋಲಿನ ನಂತರ ಅವರ ಕಟೌಟ್ ನ್ನ ಅವರ ಕಟ್ಟಾ ಅಭಿಮಾನಿಯೊಬ್ಬರು ಹೀನಾಮಾನವಾಗಿ ಹೊಡೆಯುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ..

ಪಂದ್ಯಾವಳಿಯಲ್ಲಿ ತಂಡವು 89 ರನ್‌ಗಳಿಂದ ಸೋತ ಕೂಡಲೇ, ಇಂಗ್ಲೆಂಡ್‌ನ ಮಾಲ್‌ವೊಂದರಲ್ಲಿ ಇವರ ಅಭಿಮಾನಿ ಒಬ್ಬ ನೀವು ಅತಿ ದಪ್ಪವಾಗಿದ್ದೀರಾ, ಯಾಕೆ ಇಷ್ಟು ತೂಕವನ್ನು ಹೆಚ್ಚಿಸುತ್ತಿದ್ದೀರಿ ಎಂದು ನಾಯಕನನ್ನು ಕೇಳುವ ವಿಡಿಯೋ ಬಹಳ ಟ್ರೋಲ್ ಆಗಿತ್ತು. ಭಾರತ ವಿರುದ್ಧದ ಪಂದ್ಯದ ನಂತರ, ಇದೆ ಮಾದರಿಯ ಹಲವಾರು ವೀಡಿಯೊಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡವು, ಇದರಲ್ಲಿ ಅಭಿಮಾನಿಗಳು ತಂಡದ ಸದಸ್ಯರನ್ನು ಅವರ ಫಿಟ್ನೆಸ್ ನೋಡಿಕೊಳ್ಳುವಂತೆ ಕೇಳಿಕೊಳ್ಳುತ್ತಿದ್ದರು.

ಶ್ರೀಲಂಕಾ ಅಂತಿಮ ಟಿ 20 ಯಲ್ಲಿ, 13 ರನ್‌ಗಳಿಂದ ಸೋಲಿಸಿ ಆತಿಥೇಯ ಪಾಕಿಸ್ತಾನವನ್ನು ಸಂಪೂರ್ಣ ಧೂಳೀಪಟ ಮಾಡಿತು. ಶ್ರೀಲಂಕಾ ಸರಣಿಯನ್ನು 3-0 ಅಂತರದಿಂದ ಜಯಗಳಿಸಿತು. ಪ್ರಸ್ತುತ ಪ್ರಮುಖ ಆಟಗಾರರನ್ನು ತಂಡದಿಂದ ಹೊರಗಿಟ್ಟಿದ್ದರೂ ಸಹ, ಶ್ರೀಲಂಕಾ ಪಾಕಿಸ್ತಾನವನ್ನು ಸರ್ವನಾಶ ಮಾಡಿತು.

ಸೆಪ್ಟೆಂಬರ್ 9 ರಂದು, ಶ್ರೀಲಂಕಾದ ಹತ್ತು ಆಟಗಾರರು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಪಾಕಿಸ್ತಾನದಲ್ಲಿ ಸರಣಿಗೆ ಸೇರಬಾರದೆಂದು ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಆಯ್ಕೆಯಾಗದ ಆಟಗಾರರು – ಲಸಿತ್ ಮಾಲಿಂಗ, ನಿರೋಷನ್ ಡಿಕ್ವೆಲ್ಲಾ, ಕುಸಲ್ ಜಾನ್ ಇಥ್ ಪೆರೆರಾ, ಧನಂಜಯ ಡಿ ಸಿಲ್ವಾ, ಥಿಸರಾ ಪೆರೆರಾ, ಅಕಿಲಾ ಧನಂಜಯ, ಏಂಜೆಲೊ ಮ್ಯಾಥ್ಯೂಸ್, ಸುರಂಗ ಲಕ್ಮಲ್, ದಿನೇಶ್ ಚಂಡಿಮಾಲ್ ಮತ್ತು ದಿಮುತ್ ಕರುಣರತ್ನ. ಶ್ರೀಲಂಕಾ ತಂಡವು 2009 ರಲ್ಲಿ ಪಾಕಿಸ್ತಾನದೊಂದಿಗೆ ಟೆಸ್ಟ್ ಪಂದ್ಯಕ್ಕಾಗಿ ಲಾಹೋರ್‌ನ ಗಡಾಫಿ ಕ್ರೀಡಾಂಗಣಕ್ಕೆ ತೆರಳುತ್ತಿದ್ದಾಗ ತಾಲಿಬಾನ್ ಮತ್ತು ಲಷ್ಕರ್-ಎ- ಜಂಗ್ವಿ ಭಯೋತ್ಪಾದಕರು ಅವರ ಬಸ್ ಗೆ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿದರು. ಆ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದರು ಮತ್ತು ಏಳು ಶ್ರೀಲಂಕಾದ ಆಟಗಾರರು ಮತ್ತು ಸಿಬ್ಬಂದಿ ಗಾಯಗೊಂಡರು. ಅಂದಿನಿಂದ, ಅಂತರರಾಷ್ಟ್ರೀಯ ಕ್ರಿಕೆಟ್ ಯಾವುದೇ ಉನ್ನತ ಮಟ್ಟದ ತಂಡವನ್ನು ಪೂರ್ಣ ಪ್ರವಾಸಕ್ಕಾಗಿ ಆ ದೇಶಕ್ಕೆ ಭೇಟಿ ನೀಡದ ಹಾಗೆ ಪ್ರತಿಬಂಧಿಸಿತು. ಆದರೂ ಅದನ್ನು ಮರೆತು, ಶ್ರೀಲಂಕಾ ತಂಡ 2017 ರ ಅಕ್ಟೋಬರ್‌ನಲ್ಲಿ ದಾಳಿ ನಡೆದ ಸ್ಥಳವಾದ ಲಾಹೋರ್‌ನಲ್ಲಿ ನಡೆದ ಏಕೈಕ ಟಿ 20 ಪಂದ್ಯಕ್ಕೆ ಪಾಕಿಸ್ತಾನಕ್ಕೆ ತೆರಳಿತ್ತು.