ಅಂದವಾದ ಸಿನಿಮಾಗೆ ಮನಸೋತ ಪ್ರೇಕ್ಷಕ.. ಸೂಪರ್ ಹಿಟ್ ಸಿನಿಮಾ ಸಾಲಿಗೆ ಹೊಸಬರ ಚಿತ್ರ..!!

ಸಿನಿಮಾ

ಅಂದವಾದ.. ಚಿತ್ರದ ಟೈಟಲ್ಲೆ ಹೇಳುವ ಹಾಗೆ ಇದು ಒಂದು ಸುಮಧುರ ಸುಂದರ ಪ್ರಕೃತಿ ಮಡಿಲಲ್ಲಿ, ಪ್ರೇಮ ಪಕ್ಷಿಗಳ ನಡುವೆ ನಡೆಯುವ ಚಂದವಾದ ಹಾಗು ಅಂದವಾದ ಸಿನಿಮಾ.. ಇದು ನಾವ್ ಹೇಳ್ತಿರೋದಲ್ಲ.. ಬದಲಿಗೆ ಸಿನಿಮಾ ನೋಡಿ ಬಂದ ಪ್ರೇಕ್ಷಕರ ಮಾತು.. ಕಥೆ ಆಯ್ಕೆ, ನಿರ್ದೇಶನ, ಸ್ಟಾರ್ಕಾಸ್ಟ್ ಹಾಡುಗಳು ಎಲ್ಲವು ಹದವಾಗಿ ಬೆರೆತ ಸಿನಿಮಾವಿದು..

ಹೊಸಬರ ಸಿನಿಮಾ ಅಂದ್ರೆ ತೆರೆಗೆ ಬರ್ತಿದ್ದ ಹಾಗೆ ಥಿಯೇಟರ್ ನಲ್ಲಿ ಒಂದೆರಡು ದಿನ ಇರೋದೆ ಹೆಚ್ಚು.‌ ಅಂತಹದರಲ್ಲಿ ಇನ್ನೇನು ವಾರ ಕಳೆಯುತ್ತ ಬಂದರು ಚಿತ್ರದ ಪ್ರದರ್ಶನ ಮಾತ್ರ ನಾನ್ ಸ್ಟಾಪ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಗಳಿಕೆಯನ್ನ ಕಾಣುವ ಮೂಲಕ ಮುಂದೆ ನುಗ್ಗುತ್ತಿದೆ.. ಚಿತ್ರ ಶುರುವಾಗಿನಿಂದ ಕೊನೆಯವರೆಗು ಎಲ್ಲು ಬೋರ್ ಆಗದ ನಿರೂಪಣೆ ಈ ಚಿತ್ರದ ಯಶಸ್ಸಿನ ಪ್ರಮುಖ ಗುಟ್ಟಾಗಿದೆ..

ಸುಳ್ಳನ್ನ ಹೇಳಿ ಪ್ರೀತಿ ಮಾಡೋ ಹುಡುಗಿ, ಆನಂತರ ಸುಳ್ಳಿನ ಬಗ್ಗೆ ತಿಳಿದಾಗ ಹುಡಗ ಏನು ಮಾಡುತ್ತಾನೆ ಎಂಬುದು ಒನ್ ಲೈನ್ ಸ್ಟೋರಿಯಾಗಿದ್ದು, ಹಾಡುಗಳು ಕೂಡ ಅಂದವಾದ ಸಿನಿಮಾ ಚೆಂದವನ್ನ ಹೆಚ್ಚಿಸಿದೆ.. ದೊಡ್ಡ ದೊಡ್ಡ ಸಿನಿಮಾಗಳ ನಡುವೆ ಕನ್ನಡದ ಈ ಚಿತ್ರ ಐಎಮ್ ಡಿಬಿಯಲ್ಲಿ 3ನೇ ಸ್ಥಾನವನ್ನ ಉಳಿಸಿಕೊಂಡಿದೆ ಅಂದ್ರೆ ಅದು ಈ ಚಿತ್ರದ ಸ್ವಂತಿಕೆ ಪ್ರತಿಕವಲ್ಲದೆ ಮತ್ತೆ.. ನೀವಿನ್ನು ಈ ಚಿತ್ರವನ್ನ ನೋಡಿಲ್ಲ ಅಂದ್ರೆ ನೋಡಿ ಬನ್ನಿ, ಹಸಿರ ಸಿರಿಯ ನಡುವೆ ಮೂಡಿಬಂದಿರೋ ಸ್ವಚ್ಚಂದ ಪ್ರೇಮಕಥೆ ಅಂದವಾದ..