ಸೆಟ್ಟೇರಿತು ಕಿರಿಕ್ ಕೀರ್ತಿ ಹೊಸ ಸಿನಿಮಾ‌.. ಕ್ಯಾರೆಕ್ಟರ್ ನಲ್ಲೂ ಕಿರಿಕ್ ಕಿಕ್ ಕೊಡಲಿದ್ದಾರೆ..!!

ವಾಹಿನಿ ಸುದ್ದಿ ವಿಡಿಯೋ ಸಿನಿಮಾ

ಕಿರಿಕ್ ಕೀರ್ತಿ.. ಯೂಟ್ಯೂಬ್ ಸ್ಟಾರ್ ಅಂದೋರೆಲ್ಲ ಆ ನಂತರ ಬಿಗ್ ಬಾಸ್ ನ ಕೀರ್ತಿ ಅನ್ನೋ ಶುರು ಮಾಡಿದ್ರು.. ಬಿಗ್ ಬಾಸ್ ನಿಂದ ಬಂದ ಮೇಲೂ ತಾನು‌ ಅಂದುಕೊಂಡ‌ ಸಮಾಜ‌ಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಕೀರ್ತಿಯನ್ನ ಹುಡುಕಿಕೊಂಡು ಸಿನಿಮಾಗಳ ಆಫರ್ ಕೂಡ ಬರ್ತಿವೆ…

ಬಿಗ್ ಬಾಸ್ ನಿಂದ ಬಂದ ಮೇಲೆ ಹೆಚ್ಚಾಗಿರಬಹುದು.. ಬಟ್ ಬಿಗ್ ಬಾಸ್ ಗೂ ಹೋಗುವ ಮೊದಲು ಸಹ ಬರೀ ಕೀರ್ತಿಯಾಗಿದ್ದ ಸಮಯದಲ್ಲೂ ಕೆಲ ಸಿನಿಮಾಗಳು ಕೀರ್ತಿ ಶಂಕರ್ ಘಟ್ಟ ಅವರನ್ನ ಹುಡುಕಿಕೊಂಡು ಬಂದಿದ್ವು ಅನ್ನೋದು ನಿಮ್ಮ ಗಮನಕ್ಕಿರಲಿ….

ವಾಸ್ತವಕ್ಕೆ ಒಗ್ಗಿಕೊಂಡ ಸಿನಿಮಾಗಳಲ್ಲಿ‌ ಕಾಣಿಸಿಕೊಳ್ಳಬೇಕೆಂಬ ಹಂಬಲದಿಂದ ಮಾಸ್ ಫೈಟ್ ಇರೋ, ಪಂಚಿಂಗ್ ಡೈಲಾಗ್ ಇರೋ, ಮರ ಸುತ್ತೋ ಕಥೆಗಳಿಂದ ದೂರ ಉಳಿದ್ದು, ಇಂತಹ ಚಿತ್ರಗಳಿಗೆ ನೋ ಅಂತ ಹೇಳಿ ಈಗೊಂದು ಚಿತ್ರದಲ್ಲಿ ಅಭಿನಯಿಸೋಕೆ‌ ಒಪ್ಪಿಕೊಂಡಿದ್ದಾರೆ…

ಹೌದು, ಈ ಚಿತ್ರದಲ್ಲಿ ಡ್ರಗ್ ಅಡಿಕ್ಟ್ ಕ್ಯಾರೆಕ್ಟರ್ ಅನ್ನ ಕೀರ್ತಿ ಪ್ಲೇ ಮಾಡಲಿದ್ದಾರೆ… ಮಾದಕ ವ್ಯಸನದ ಪರಿಣಾಮದಿಂದ ಆಗಬಹುದಾದ ಅನಾಹುತಗಳ ಬಗ್ಗೆ ಈ ಚಿತ್ರವಿರಲ್ಲಿದ್ದು, ಪ್ರೇಕ್ಷಕನಿಗೆ ಬೇಕಾದ ಕಮರ್ಷಿಯಲ್ ಎಲಿಮೆಂಟ್ಸ್ ಸಹ ಈ‌ ಸಿನಿಮಾದಲ್ಲಿ ಇರಲಿದೆ..

ನಾನು‌ ಸಿನಿಮಾದ ಹೀರೊ ಅನ್ನೋದಕ್ಕಿಂತ ಪಾತ್ರಕ್ಕೆ‌ ಹೊಂದುವ ಪಾತ್ರಧಾರಿ ಅಂತಾರೆ ಕೀರ್ತಿ… ಈ ಹೊಸ‌ ಚಿತ್ರಕ್ಕೆ‌ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ… ಅದನ್ನು ಸದ್ಯದಲ್ಲೆ‌ ಅನೌನ್ಸ್ ಮಾಡಲಿದ್ದಾರೆ… ಇನ್ನೂ ಕೀರ್ತಿ ಅಭಿನಯದ ಹಾಗು ನಿರ್ಮಾಣದ ಚಿತ್ರಾಲಿ ಸಿನಿಮಾ ಸಹ ರಿಲೀಸ್ ಗೆ ರೆಡಿ ಇದ್ದು ಅದು ಕೂಡ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

ಕೀರ್ತಿ ಅಭಿನಯದ ಹಾಗು ನಿರ್ಮಾಣದ ಚಿತ್ರಾಲಿ ಸಿನಿಮಾದ ಟ್ರೇಲರ್ ಇಲ್ಲಿದೆ ನೋಡಿ: