ಕುತೂಹಲ ಹುಟ್ಟಿಸಿದ ಅಳಿದು ಉಳಿದವರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಶ್ರೀಮನ್ನಾರಾಯಣಯಿಂದ ರಿಲೀಸ್.

ಸಿನಿಮಾ

ಬಹುಮುಖ ಪ್ರತಿಭೆ ಅಶುಬೇದ್ರಾ ಮೊದಲ ಬಾರಿಗೆ ನಾಯಕನಾಗಿ ನಿರ್ಮಾಪಕನಾಗಿ ಸಿದ್ದವಾಗ್ತಿರೋ ಸಿನಿಮಾವೇ ಅಳಿದು ಉಳಿದವರು. ಮಕ್ಕಳ ದಿನಚಾರಣೆಯಂದು ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಚಂದನವನದ ಸಿಂಪಲ್​ ಸ್ಟಾರ್​ ಅಳಿದು ಉಳಿದವರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದು ಮತ್ತೊಂದು ವಿಶೇಷ ಎನ್ನಬಹುದು..

ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ರಕ್ಷಿತ್​ ಹೊಸ ಚಿತ್ರತಂಡಕ್ಕೆ ಬೆನ್ನು ತಟ್ಟಿದ್ದಾರೆ. ಹೊಸ ಚಿತ್ರವೊಂದರ ಫಸ್ಟ್​ ಲುಕ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಹುರಿದುಂಬಿಸಿದ್ದಾರೆ. ಟೈಟಲ್ ನಿಂದಲೇ ಸಾಕಷ್ಟು ಕುತೂಹಲ ಹುಟ್ಟಿಸಿರೋ ಈ ಸಿನಿಮಾ, ಟೈಟಲ್ಲೇ ಹೇಳೋ ಹಾಗೇ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಅದೇ ಕಾರಣಕ್ಕೆ ಫಸ್ಟ್ ಲುಕ್ ಪೋಸ್ಟರ್ ಕೂಡ ಪತ್ತೆದಾರಿ ಮಾದರಿಯಲ್ಲಿದೆ.

ಈ ಹಿಂದೆ ಕಹಿ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಅರವಿಂದ್​ ಶಾಸ್ತ್ರಿ ಈ ಹೊಸ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇನ್ನು ಈ ಚಿತ್ರದ ಮೂಲಕ ನಿರ್ಮಾಪಕ ಅಶುಬೇದ್ರಾ ಹೀರೋ ಆಗಿ ಪರಿಚಯವಾಗ್ತಿದ್ದು, ಇವರಿಗೆ ನಾಯಕಿಯಾಗಿ ಸಂಗೀತ ಭಟ್ ನಟಿಸಿದ್ದಾರೆ.

ಹಿರಿಯ ನಟ ಅತುಲ್​ ಕುಲಕರ್ಣಿ, ಲೂಸಿಯಾ ಪವನ್​ ಕುಮಾರ್​, ಬಿ ಸುರೇಶ್​ ತಾರಾಗಣದಲ್ಲಿದ್ದು ಚಿತ್ರದ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ. ಮಿಥುನ್​ ಮುಕುಂದ್​ ಚಿತ್ರಕ್ಕೆ ರಾಗ ಸಂಯೋಜಿಸಿದ್ದಾರೆ. ವಿಭಿನ್ನ ಶೀರ್ಷಿಕೆಯಿಂದ ಪತ್ತೆದಾರಿ ಕಥೆ ಹೇಳಲು ಹೊರಟಿರುವ ಅಳಿದು ಉಳಿದವರು, ಶೀಘ್ರದಲ್ಲೇ ಚಿತ್ರದ ಟ್ರೈಲರ್​ ಕೂಡ ರಿಲೀಸ್ ಮಾಡಲಿದೆ.