ಸುಕ್ಕಾ ಸೂರಿ ಗರಡಿಯಿಂದ ಮರಳಿ ಬರ್ತಿದ್ದಾರೆ ನಾಯಕ ನವೀನ್. ಇವ್ರಲ್ಲಿ ಮಂಕಿ ಯಾರು..? ಟೈಗರ್ ಯಾರು..?

ಸಿನಿಮಾ

ಸುಕ್ಕಾ ಸೂರಿ ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್ ನಲ್ಲಿ ಹೊರ ಬರುತ್ತಿರುವ ಚಿತ್ರವೇ ಈ ಪಾಪ್ ಕಾರ್ನ್ ಮಂಕಿ ಟೈಗರ್. ಟೈಟಲ್ ಮೂಲಕವೇ ಗಾಂಧಿನಗರದಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟಿಸಿರೋ ವಿಶೇಷ ಸಿನಿಮಾವಿದು. ಸೂಕ್ಕಾ ಸೂರಿ ಚಿತ್ರವೆಂದರೆ ಹಾಗೇಯೆ, ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡುತ್ತೆ. ಈಗಾಗಲೇ ಕೆಲವು ಪೋಸ್ಟ್ ಗಳಿಂದ ಡಾಲಿ ಧನಂಜಯ್ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ ಸೂರಿ.

ಸೂರಿ ಸಿನಿಮಾ ಅಂದ್ರೆ ಅಲ್ಲಿ ರಾ ಕಂಟೆಂಟ್ ಹೆಚ್ಚಿರುತ್ತೆ. ಸದ್ಯ ಈ ಸಿನಿಮಾ ತಂಡದಿಂದ ಬಂದಿರುವ ಮಾಹಿತಿ ಪ್ರಕಾರ ಪಾಪ್ ಕಾರ್ನ್ ಮಂಕಿ ಟೈಗರ್ ಇತ್ತೀಚೆಗಷ್ಟೇ ಡಬ್ಬಿಂಗ್ ಕೆಲಸ ಶುರು ಮಾಡಿ. ಈ ಮಧ್ಯೆ ಚಿತ್ರತಂಡದಿಂದ ಅಭಿಮಾನಿಗಳಿಗಾಗಿ ಈ ಚಿತ್ರದ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದೆ. ಈ ಮೂಲಕ ಅಭಿಮಾನಿಗಳಲ್ಲಿ‌ ಮತ್ತಷ್ಟು ಕುತೂಹಲವನ್ನು ಹೆಚ್ಚುವಂತೆ ಮಾಡಿದೆ.

ಈವರೆಗೂ ಯಾವುದೇ ದೃಶ್ಯಾವಳಿಗಳನ್ನ ಬಿಟ್ಟುಕೊಡದ ಸೂರಿ, ಚಿತ್ರದ ಪೋಸ್ಟರ್ ಗಳನ್ನಷ್ಟೇ ರಿಲೀಸ್ ಮಾಡಿದೆ. ರಿಲೀಸ್ ಮಾಡಿದ ಪ್ರತಿ ಪೋಸ್ಟರ್ ಕೂಡ ಸ್ಯಾಂಡಲ್ ವುಡ್ ನಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇದಕ್ಕೆ ಪುರಕವಾಗಿ ಈಗ ರಿಲೀಸ್ ಮಾಡಿರೋ ಈ ಪೋಸ್ಟರ್ ವಿಭಿನ್ನವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಪೋಸ್ಟರ್ ನಿಂದ ಚಿತ್ರದ ಮೇಲೆ ಹಲವು ಪ್ರಶ್ನೆಗಳನ್ನ ಹುಟ್ಟಿಸಿದೆ. ಜೊತೆಗೆ ಒಂದು ಸರ್ಪೈಸ್ ನ ಕೊಡ ಕೊಟ್ಟಿದೆ. ಹಾಗದ್ರೆ ಈ ಪೋಸ್ಟರ್ ನಲ್ಲಿರೋದು ಯಾರು ಗೊತ್ತಾ..?

ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಜಾಕಿ ಭಾವನ ಪತಿ ನವೀನ್ ಕೂಡ ಮುಖ್ಯ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಈಗಾಗಲೇ ಚಿತ್ರದ ಪೋಸ್ಟರ್ ನಲ್ಲಿ ಟಗರು ಖ್ಯಾತಿಯ ಕಾಕ್ರೋಚ್ ಜೊತೆಗೆ ಕೂದಲು ಬಿಟ್ಟುಕೊಂಡು ಬನಿಯನ್ ನಲ್ಲಿ ಕೂತಿರೋದು ಮಾತ್ರ ನವೀನ್ ಎನ್ನಲಾಗಿದೆ. ಜೊತೆ ನವೀನ್ ಈ ಸಿನಿಮಾ ಇರುವ ಕಾರಣ ಸಿನಿಮಾದ ಮೇಲಿನ ಕುತೂಹಲವನ್ನ ಡಬಲ್ ಮಾಡಿದೆ. ಆದರೆ ನವೀನ್ ಅವರ ಪಾತ್ರ ಏನೆಂಬುದು ಇನ್ನು ರಿವೀಲ್ ಆಗಿಲ್ಲ.

ದುನಿಯಾ ಸೂರಿ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಇರೋ ಈ ಚಿತ್ರವನ್ನ ಸುಧೀರ್ ಕೆ.ಎಂ ನಿರ್ಮಿಸ್ತಿದ್ದಾರೆ. ಶೇಖರ್ ಎಸ್ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಂಯೋಜನೆ ಹಾಗೂ ದೀಪು ಎಸ್. ಕುಮಾರ್ ರ ಸಂಕಲನ ಚಿತ್ರಕ್ಕಿದೆ. ಡಾಲಿ‌ ಧನಂಜಯ್, ನಿವೇದಿತಾ, ಕಾಕ್ರೋಚ್, ನವೀನ್, ಅಮೃತ ಅಯ್ಯಂಗಾರ್, ಸಪ್ತಮಿ, ಮೋನಿಶಾ ನಾಡಿಗೇರ್ ಹಾಗೂ ಗೌತಮ್ ಅಭಿನಯಿಸಿರುವ ಈ ಚಿತ್ರವನ್ನು ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಪಾತ್ರಗಳು ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಅನ್ನಿಸ್ತಿವೆ. ಶೀಘ್ರದಲ್ಲೇ ಈ ಚಿತ್ರವನ್ನು ತೆರೆಗೆ ಬರಲು ಸಿದ್ಧವಾಗುತ್ತಿದೆ.