ಕಿರುತೆರೆ ರೇಟಿಂಗ್ ನಲ್ಲಿ ಇತಿಹಾಸ ಸೃಷ್ಟಿಸಿದ ಜೊತೆ ಜೊತೆಯಲ್ಲಿ ಧಾರಾವಾಹಿ. ಇದರ TRP ಎಷ್ಟು ಗೊತ್ತಾ..?

ಸಿನಿಮಾ

ಜೀ ಕನ್ನಡ ವಾಹಿನಿ ಈಗ ಮುಟ್ಟಿದ್ದೆಲ್ಲ ಚಿನ್ನ ಎಂಬಂತಾಗಿದೆ. ಹೌದು, ನಾಗಿಣಿ, ಯಾರೇ ನೀ ಮೋಹಿನಿ, ಕಮಲಿ , ಪಾರು , ಗಟ್ಟಿಮೇಳ , ರಾಧಾ ಕಲ್ಯಾಣ ಯಶಸ್ಸಿನ ನಂತರ ಈಗ ಮತ್ತೊಂದು ಧಾರಾವಾಹಿ ಇತಿಹಾಸ ಬರೆದಿದೆ.. ಯಾರು ಊಹೆ ಮಾಡದ ರೀತಿ ಮೊದಲ ವಾರ ದಾಖಲೆ ಬರೆದಿದೆ ಈ ಹೊಸ ಧಾರಾವಾಹಿ, ಅದೇ ಜೊತೆ ಜೊತೆಯಲ್ಲಿ…

ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ, ಶುರುವಾದ ಮೊದಲನೇ ವಾರದಲ್ಲಿ ನಂಬರ್ 1 ಧಾರಾವಾಹಿಯಾಗಿ ಹೊರಹೊಮ್ಮಿದ ಸೀರಿಯಲ್ ಈ ಜೊತೆ ಜೊತೆಯಲ್ಲಿ. ಹೌದು, ಜೊತೆ ಜೊತೆಯಲ್ಲಿ ಧಾರವಾಹಿ ಬ್ಲಾಕ್ ಬಾಸ್ಟರ್ TRP ಪಡೆದು ಮೊದಲ ವಾರದಲ್ಲೇ ಕಿರುತೆರೆಯ no. 1 ಸ್ಥಾನ ಗಿಟ್ಟಿಸಿ ಕೊಂಡಿದೆ..

ಅಷ್ಟಕ್ಕೂ ಜೊತೆ ಜೊತೆಯಲ್ಲಿ ಧಾರಾವಾಹಿ ರೇಟಿಂಗ್ ಎಷ್ಟು ಗೊತ್ತಾ..? ಜೊತೆ ಜೊತೆಯಲ್ಲಿ ಧಾರಾವಾಹಿ ಲಾಂಚ್ ಆದ ಮೊದಲ ವಾರವೇ ಬರೋಬ್ಬರಿ 12TRP ಪಡೆದು ಕೊಂಡಿದೆ. ಇನ್ನು ಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿರುವ ನಟ ಅನಿರುದ್ದ ಅವರ ಕೆರಿಯರ್ ನಲ್ಲಿ ಬ್ರೇಕ್ ಸಿಗುವ ಲಕ್ಷಣಗಳು ಕಾಣುತ್ತಿದೆ. ಒಟ್ಟಿನಲ್ಲಿ ಜೊತೆ ಜೊತೆಯಲ್ಲಿ ಧಾರವಾಹಿ ತಂಡಕ್ಕೆ ತುಂಬು ಹೃದಯದ ಶುಭಾಶಯಗಳು.. ಧಾರಾವಾಹಿಯಲ್ಲಿ ಅನಿರುದ್ ಅವರ ಅಭಿನಯದ ಬಗ್ಗೆ ಹೇಳೋದೆ ಬೇಡ..

ದೊಡ್ಡ ಬ್ಯುಸಿನೆಸ್ಮನ್ ಆಗಿ ಕಾಣಿಸಿಕೊಂಡಿದ್ದು, ಈ ಪಾತ್ರಕ್ಕೆ ಅನಿರುದ್ದ ಅವರನ್ನ ಹೊರತು ಪಡೆಸಿದ್ರೆ ಬೇರ್ಯಾರನ್ನು ಊಹಿಸಲು ಸಾಧ್ಯವಿಲ್ಲ ಎಂಬಂತಿದೆ.. ಬೆಳ್ಳಿತೆರೆಯ ಮೇಲೆ ನಾಯಕನಾಗಿ ಮಿಂಚಿ ಈಗ ಕಿರುತೆರೆ ಪ್ರೇಕ್ಷಕರನ್ನ ರಂಜಿಸಲು ಅಡಿ ಇಟ್ಟಿರುವ ಈ ನಟನಿಗೆ ಒಂದೇ ವಾರದಲ್ಲಿ ಕಿರುತೆರೆ ಮಂದಿ ತಮ್ಮ ಮನಗಳಲ್ಲಿ ಜಾಗ ಕೊಟ್ಟಾಗಿದೆ..

ಸದ್ಯ ತನ್ನ ಹೊಸ ಪಯಣದಲ್ಲಿ ಅನಿರುದ್ದ ಹಾಗು ಇಡೀ ಧಾರಾವಾಹಿ ತಂಡಕ್ಕೆ ಸಿಕ್ಕಿರುವ ಈ ಜಯ, ಸ್ಮಾನ್ ಸ್ಕ್ರೀನ್ ಇತಿಹಾಸದಲ್ಲಿ ಬರೆದಿಡುವಂತಿದ್ದು, ದಿನದಿಂದ ದಿನಕ್ಕೆ ಜೊತೆ‌ಜೊತೆಯಲಿ ಸೀರಿಯಲ್ ನೋಡುವವರ ಸಂಖ್ಯೆಯು ಹೆಚ್ಚಾಗುತ್ತಿದೆ.. ಇನ್ನು ಡಾ.ವಿಷ್ಣುವರ್ಧನ್ ಅವರ ಹುಟ್ಟು ಹಬ್ಬದ ವಾರವೆ ಇಂತಹದೊಂದು ಸಿಹಿ ವಿಚಾರ ಸಿಕ್ಕಿರುವುದು ಸಾಮಾನ್ಯವಾಗಿ ವಿಷ್ಣು ದಾದ ಮನೆಯವರ ಮೊಗದಲ್ಲಿ ಮಂದಹಾಸ ಮೂಡಿಸಿದೆ..