ಅಭಿಷೇಕ್ ಅಂಬರೀಶ್‌ ‘ಬ್ಯಾಡ್ ಮ್ಯಾನರ್ಸ್’ ಗೆ ಸಾಥ್ ನೀಡಿದ ದುನಿಯಾ ಸೂರಿ…

ವಾಹಿನಿ ಸುದ್ದಿ ಸಿನಿಮಾ

ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ಹಾಗೂ ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದೇ ಶುಕ್ರವಾರ ದಿ.ಅಂಬರೀಶ್ ಅವರ ಹುಟ್ಟುಹಬ್ಬದಂದು ಚಿತ್ರದ ಮೋಷನ್ ಪೋಸ್ಟರ್ ಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.

ಪಕ್ಕಾ ಮಾಸ್ ಕಥೆಯಾಗಿರುವ ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಸುರೇಂದ್ರನಾಥ್ ಕಥೆ ಜೊತೆಗೆ ಪಾಪ್ ಕಾರ್ನ್ ಮಂಕಿ‌ ಟೈಗರ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಅಮೃತ ಭಾರ್ಗವ್ ಜೊತೆಯಾಗಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್ ಯಶಸ್ಸಿನ ನಂತರ‌ ಇದೇ‌ ತಂಡವನ್ನು ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೂ ಮುಂದುವರೆಸಿದ್ದಾರೆ ನಿರ್ದೇಶಕ ಸೂರಿ..

ಸ್ಟುಡಿಯೋ 18 ಬ್ಯಾನರ್ ನಡಿಯಲ್ಲಿ ಪಾಪ್ ಕಾರ್ನ್ ಮಂಕಿ‌ಟೈಗರ್ ಖ್ಯಾತಿಯ ಸುಧೀರ್ ಕೆ.ಎಂ ನಿರ್ಮಾಣ ಮಾಡ್ತಿದ್ದು, ಶೇಖರ್ ಛಾಯಾಗ್ರಹಣ ಹಾಗೂ ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ಇನ್ನು ಹೆಸರೇ ಸೂಚಿಸುವಂತೆ ಇದೊಂದು ಪಕ್ಕಾ ಮಾಸ್ ಎಂಟರ್ಟೈನರ್ ಸಿನಿಮಾ ಆಗಿರಲಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ನಿಂದ ಗಮನ ಸೆಳೆದಿರುವ ಅಭಿಷೇಕ್ ಅಂಬರೀಶ್ ‘ಬ್ಯಾಡ್ ಮ್ಯಾನರ್ಸ್’ ಮಾಸ್ ಸಿನಿಮಾದಲ್ಲಿ ಹೇಗೆ ಕಾಣಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ ಮೂಡಿಸಿದೆ.