ನೀಲಿ ಚಿತ್ರ ನೋಡಿ ರೇಪ್ ಮಾಡಲು ಹೋದ 60ರ ಮುದುಕನಿಗೆ 4 ವರ್ಷ ಜೈಲು

ವಾಹಿನಿ ಸುದ್ದಿ

ಕಾರು ಚಾಲಕನಾಗಿದ್ದ ಭಾರತೀಯ ಮೂಲದ 60ವರ್ಷದ ಮುದುಕನೊಬ್ಬ ಸಿಂಗಪೂರ್ ನಲ್ಲಿ ತನ್ನ ಕಾರಿನೊಳಗೆ ಕೂತು ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದ ಇದೇ ಟೈಮ್ ಗೆ ಅಲ್ಲೇ ಜಾಗಿಂಗ್ ಮಾಡುತ್ತಿದ್ದ 35ರ ಸಿಂಗಪೂರ್ ಮಹಿಳೆಯನ್ನೂ ನೋಡಿ, ಅವರ ಮೇಲೆ ಎರಗಿದ್ದಾನೆ. ಮುದುಕನಿಂದ ತಪ್ಪಿಸಿಕೊಳ್ಳಲು ಮಹಿಳೆ ಓಡಲು ಯತ್ನಿಸಿದಾಗ, ಮುದುಕ ಮಹಿಳೆಯನ್ನು ಹತ್ತಿರದಲ್ಲೆ ಇದ್ದ ಪೊದೆಯ ಕಡೆಗೆ ದೂಡಿದ್ದಾನೆ. ನಂತ್ರ ಮಹಿಳೆಯ ಸ್ತನಗಳಿಗೆ ಬಲವಾಗಿ ಪೆಟ್ಟು ನೀಡಿದ್ದಾನೆ. ಆನಂತ್ರ ಮಹಿಳೆಯ ಕಿರುಚಾಟ ಕೇಳಿದ ಸ್ಥಳಿಯರು ಅಲ್ಲಿಗೆ ಓಡಿ ಬಂದಿದ್ದಾರೆ. ಮುದುಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರೆ. ಅಲ್ಲಿನ ಕೋರ್ಟ್ ನಲ್ಲಿ ಕೇಸ್ ಸಾಬೀತಾಗಿದ್ದು. ಮುದುಕನಿಗೆ 4.5 ವರ್ಷ ಜೈಲು ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.