ನಂಬರ್ 1 ಸ್ಥಾನದಿಂದ ಕೆಳಗಿಳಿದ ವಿರಾಟ್.. ಕೊಹ್ಲಿಯನ್ನ ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ಯಾರು ಗೊತ್ತಾ..?

ಕೊಹ್ಲಿ ಹಾಗು ತಂಡ ವೆಸ್ಟ್ ಇಂಡೀಸ್ ತಂಡವನ್ನ ಎಲ್ಲ ಮಾದರಿಯಲ್ಲು ಸೋಲಿಸುವ ಮೂಲಕ ಗೆಲುವಿನ ನಾಗಲೋಟವನ್ನ ಮುಂದುವರೆಸಿದೆ. ಎರಡು ಟೆಸ್ಟ್ ಗಳನ್ನು ಗೆದ್ದು ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಸ್ಥಾನವನ್ನ ಅಲಂಕರಿಸಿರುವ ಟೀಮ್ ಇಂಡಿಯಾದ ಕ್ಯಾಪ್ಟನ್ ಗೆ ಸದ್ಯ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಬ್ಯಾಟ್ಸಮನ್ ಗಳ ಶ್ರಯಾಂಕದಲ್ಲಿ ಹಿನ್ನಡೆಯಾಗಿದೆ. ಟೆಸ್ಟ್ ನಲ್ಲು ನಂ 1 ಬ್ಯಾಟ್ಸ್‌ಮನ್ ಆಗಿ ರಾರಾಜಿಸುತ್ತಿದ್ದ ಕೊಹ್ಲಿ ಈಗ ಎರಡನೆ ಸ್ಥಾನಕ್ಕೆ ಕುಸಿದ್ದಿದ್ದಾರೆ. ಹೌದು ಕಳೆದ ಪಂದ್ಯದಲ್ಲಿ ಸೊನ್ನೆ ಸುತ್ತಿದ ಕೊಹ್ಲಿ ಈಗ ಎರಡನೆ ಸ್ಥಾನಕ್ಕೆ ಇಳಿದಿದ್ದಾರೆ.

ಹೌದು ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಉತ್ತಮ ಫಾರ್ಮ್ ನಲ್ಲಿದ್ದು ಕೊಹ್ಲಿಯನ್ನ ಹಿಂದಿಕ್ಕಿ ನಂಬರ್ 1 ಪಟ್ಟವನ್ನ ತನ್ನದಾಗಿಸಿಕೊಂಡಿದ್ದಾರೆ ವಿರಾಟ್. ಕೊಹ್ಲಿ 903 ಅಂಕಗಳನ್ನ ಪಡೆದಿದ್ರೆ ಸ್ಮಿತ್ 904 ಅಂಕಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೆ ಅಲ್ಲ ಇನ್ನು ಒಂದು ತಿಂಗಳ ಕಾಲ ಸ್ಮಿತ್ ಇದೆ ಸ್ಥಾನದಲ್ಲಿ ಮುಂದುವರೆಯಲ್ಲಿದ್ದು, ದಕ್ಷಿಣ ಆಫ್ರಿಕಾ ವಿರುದ್ದ ವಿರಾಟ್ ಉತ್ತಮ ಪ್ರದರ್ಶನ ತೋರಿದ್ದೆ ಆದರೆ ಮತ್ತೆ ಮೊದಲ ಸ್ಥಾನಕ್ಕೆ ವಾಪಸ್ ಆಗಲ್ಲಿದ್ದಾರೆ.

ಸದ್ಯ ಸ್ಮಿತ್ ಈಗ ನಾಲ್ಕನೇ ಟೆಸ್ಟ್ ಪಂದ್ಯವಾಡಲು ಸಿದ್ದವಾಗಿದ್ದಾರೆ. ಗಾಯದ ಸಮಸ್ಯೆಯಿಂದ ಕಳೆದ ಪಂದ್ಯದಿಂದ ಹೊರಗುಳಿದಿದ್ದ ಸ್ಮಿತ್ ಈಗ ಚೇತರಿಸಿಕೊಂಡಿದ್ದು, ಮತ್ತಷ್ಟು ಅಂಕಗಳಿಸುವ ಸೂಚನೆ ನೀಡಿದ್ದಾರೆ. ಅಕ್ಟೋಬರ್ ಒಂದರಿಂದ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಟೀಮ್ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲ್ಲಿದೆ

Comments

comments

Similar Articles

Top