ಗಣೇಶ ಹಬ್ಬಕ್ಕೆ ಫೇಸ್ ಬುಕ್ ಲೈವ್ ನಲ್ಲಿ ರಕ್ಷಿತ್ ಕೊಟ್ರು ಅವನೇ ಶ್ರೀಮನ್ನಾರಾಯಣ ಅಪ್ ಡೇಟ್..

ರಕ್ಷಿತ್ ಶೆಟ್ಟಿಯನ್ನ ಬೆಳ್ಳಿಪರದೆಯ ಮೇಲೆ ನೋಡಿ ಮೂರು ವರ್ಷ ಕಳೆಯುತ್ತ ಬಂದಿದೆ.. ಅಲ್ಲಿಂದ ಇಲ್ಲಿಯವರೆಗೂ ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಬ್ಯುಸಿಯಾಗಿರೋ ರಕ್ಷಿತ್ ಗಣೇಶ ಹಬ್ಬದ ಪ್ರಯುಕ್ತ ತಮ್ಮ ವೃತ್ತಿ ಬದುಕಿನ ಬಹು ಕೋಟಿ ವೆಚ್ಚದ ಸಿನಿಮಾದ ಬಗ್ಗೆ ಅಪ್ ಡೇಟ್ ನೀಡಿದ್ದಾರೆ.. ಕೇವಲ ಟೀಸರ್ ನಲ್ಲಿ ದಕ್ಷಿಣ ಭಾರತದ ಚಿತ್ರರಂಗ ಬೆರಗಾಗುವಂತೆ ಮಾಡಿದ್ದ ಈ ಚಿತ್ರ ಈಗ ಯಾವ ಹಂತದಲ್ಲಿ ಎಂಬ ಬಗ್ಗೆ ಇಂಚಿಂಚು ಮಾಹಿತಿಯನ್ನ ನೀಡಿದ್ದಾರೆ..

ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ತೆರೆಗೆ ಬರಲು ಸನ್ನದವಾಗಿರುವ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿ ಈಗ ಪೋಸ್ಟ್ ಪ್ರೊಡಕ್ಷನ್ ವರ್ಕ್ ಸಾಗುತ್ತಿದೆ.. ಡಬ್ಬಿಂಗ್ ಮುಗಿದಿದ್ದು, ಅಜನೀಶ್ ಲೋಕನಾಥ್ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನಲ್ಲಿ ಬ್ಯೂಸಿಯಾಗಿದ್ದಾರೆ..

ಪುಷ್ಕರ್ ಮಲ್ಲಿಕಾರ್ಜುನ್, ಹೆಚ್‌.ಕೆ ಪ್ರಕಾಶ್ ಗೌಡ ನಿರ್ಮಾಣದಲ್ಲಿ ಸಚಿನ್ ರವಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಶ್ರೀಮನ್ನಾರಾಯಣನ ಗ್ರಾಫಿಕ್ಸ್ ವರ್ಕ್ಸ್ ಕೂಡ ಪಿನಾಕಲ್ ಸ್ಟುಡಿಯೊದಲ್ಲಿ ನಡೆಯುತ್ತಿದೆ.. ರಕ್ಷಿತ್ ಗೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್ ಅಭಿಯಿಸಿದ್ರೆ, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ ಬಹುಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಮಾಸ್ ಹಾಗು ಕ್ಲಾಸ್ ಆಡಿಯನ್ಸ್ ಗೆ ಇಷ್ಟ ಆಗುವ ಹಾಗೆ ಚಿತ್ರ ನಿರ್ಮಾಣವಾಗಿದ್ದು, ಎಲ್ಲ ಸಿನಿಮಾ ಟೀಮ್ ನ ಪ್ಲಾನ ಹಾಗೆ ನಡೆದ್ರೆ ಅಕ್ಟೋಬರ್ ಕೊನೆಯಲ್ಲಿ ಅಥವಾ ನವೆಂಬರ್ ಮೊದಲನೇ ವಾರದಲ್ಲಿ ಈ ಶ್ರೀಮನ್ನಾರಾಯಣ ದರ್ಶನ ಅಭಿಮಾನಿಗಳಿಗೆ ಸಿಗಲಿದೆ..

Comments

comments

Similar Articles

Top