ಸಖತ್ ಸೌಂಡ್ ಮಾಡ್ತಿದೆ ಕನ್ನಡದ ‘ಸವರ್ಣ ದೀರ್ಘ ಸಂಧಿ’ ಟ್ರೇಲರ್…

ಪ್ರಭಾಸ್ ಅಭಿನಯದ ಸಾಹೋ ಸಿನಿಮಾದ ಜೊತೆಗೆ ಕನ್ನಡದ ಹೊಸಬರ ಸಿನಿಮಾದ ಟ್ರೇಲರ್ ಬಿಡುಗಡೆಗೊಂಡಿದೆ.. ಅದೇ ಈಸವರ್ಣ ದೀರ್ಘ ಸಂಧಿ‘..  ಹೆಸರಿನಿಂದಲೇ ಕ್ಯೂರಿಯಾಟಿಯನ್ನ ಹುಟ್ಟಿಹಾಕಿದ್ದ ಈ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ.. ರಿಲೀಸ್ ಆಗಿರೋದು ಮಾತ್ರವಲ್ಲ ಹೊಸ ಆಯಾಮದ ಚಿತ್ರ ಎಂಬ ಅನುಭವವನ್ನ ನೀಡುವಂತಿದೆ ಟ್ರೇಲರ್.. ಕನ್ನಡದ ಕಂಪಿನ ಜೊತೆ ಜೊತೆಗೆ ಕ್ರೈಮ್ ಆ್ಯಗಲ್ ನಲ್ಲಿ ಸಾಗುವ ಕಾಮಿಡಿ ಎಲಿಮೆಂಟ್ ಒಳಗೊಂಡಿರುವ ಸಿನಿಮಾ ಎಂಬುದು ಟ್ರೇಲರ್ ನಲ್ಲಿ ಎದ್ದುಕಾಣ್ತಿದೆ..

ಇನ್ನು ಈ ಚಿತ್ರದ ಮೇಲೆ ಭರವಸೆ ಇಡೋಕೆ ಮತ್ತೊಂದು ಕಾರಣ ಅಂದ್ರೆ ಅದು ನಿರ್ದೇಶಕ ಹಾಗು ನಟ ವೀರೇಂದ್ರ ಶೆಟ್ಟಿ.. ಇವರು ತುಳುವಿನಲ್ಲಿ ಜಾಲಿಲೂ ಪೋಲಿಲು ಎಂಬ ಸಿನಿಮಾ ನಿರ್ದೇಶನ ಮಾಡಿದ್ರು.. ಇದರ ಬಜೆಟ್ 38 ಲಕ್ಷ.. ಬರೋಬ್ಬರಿ 73 ವಾರ ಪ್ರದರ್ಶನಗೊಂಡ ಈ ಸಿನಿಮಾ 3.25 ಕೋಟಿ ಗಳಿಕೆಯನ್ನ ಕಂಡಿತ್ತು.. ಆನಂತರ ದೊಡ್ಡ ಗ್ಯಾಪ್ ಪಡೆದುಕೊಂಡ ಈ ಡೈರೆಕ್ಟರ್ ಈಸವರ್ಣ ದೀರ್ಘಸಂಧಿಸಿನಿಮಾವನ್ನ ಸಿದ್ದ ಮಾಡಿದ್ದಾರೆ..

ಚಿತ್ರದ ಮತ್ತೊಂದು ಹೈಲೆಟ್ ಅಂದ್ರೆ ಮೆಲೋಡಿ ಕಿಂಗ್ ಮನೋಮೂರ್ತಿ ಅವರ ಸಂಗೀತ ಇದಕ್ಕಿರೋದು.. ಟ್ರೇಲರ್ ನಲ್ಲಿ ಮೂಡಿಬಂದಿರುವ ಒಂದೇ ಒಂದು ಹಾಡಿನ ಮಾಧುರ್ಯ ಚಿತ್ರದಲ್ಲಿರಬಹುದಾದ ಸಾಂಗಳ ಬಗ್ಗೆ ಜಾಗೃತಿಯನ್ನ ನೀಡುತ್ತಿದೆ.. ವೀರು ಟಾಕೀಸ್, ಲೈಲಾಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಲುಷ್ಟಿಂಗ್ಟನ್ ಥಾಮಸ್, ಪಿವಿಆರ್ ಹೇಮಂತ್, ವೀರೇಂದ್ರ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ..

ಇನ್ನು ಈ ಸಿನಿಮಾದಲ್ಲಿ ವೀರೇಂದ್ರ ಶೆಟ್ಟಿ, ಕೃಷ್ಣ, ಪದ್ಮಜರಾವ್ ಸೇರಿದಂತೆ ಹಲವರು ನಟಿಸಿದ್ದಾರೆ.. ಚಿತ್ರದುದಕ್ಕೂ ಕಾಮಿಡಿಯ ಜೊತೆಗೆ ಫುಲ್ ಕಮರ್ಶಿಯಲ್ ಆಗಿ ಸಿದ್ದವಾಗಿರುವ ಚಿತ್ರವಿದು.. ಆದಷ್ಟು ಬೇಗ ತೆರೆಗೆ ಬರಲು ರೆಡಿಯಾಗ್ತಿದೆ..

Comments

comments

Similar Articles

Top