ಸಹೋನೊಂದಿಗೆ ‘ಸವರ್ಣದೀರ್ಘಸಂಧಿ’ ಟ್ರೇಲರ್ ರಿಲೀಸ್..

ಸವರ್ಣ ದೀರ್ಘ‌ಸಂಧಿ.. ಇದನ್ನ ನಿಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ಮಾಸ್ಟರ್ ನಿಂದ ಕಲಿತಿರ್ತಿರಾ.. ಈಗ ಇದೇ ಹೆಸರಿನಲ್ಲಿ ಕನ್ನಡದಲ್ಲೊಂದು ಸಿನಿಮಾ ಬಿಡುಗಡೆಯಾಗೋಕೆ ಸಿದ್ದವಾಗಿ ಬಿಟ್ಟಿದೆ.. ಕೋಸ್ಟಲ್ ವುಡ್ ನಲ್ಲಿ‌ಚಾಲಿ ಪೋಲಿಲುಎಂಬ ಹಿಟ್ ಸಿನಿಮಾವನ್ನ ನೀಡಿದ್ದ ನಿರ್ದೇಶಕ ವೀರೇಂದ್ರ ಶೆಟ್ಟಿ ಈ ಚಿತ್ರವನ್ನ ಡೈರೆಕ್ಟ್ ಮಾಡಿ, ಈಗ ಸ್ಯಾಂಡಲ್ ವುಡ್ ನಲ್ಲು ತನ್ನ ಗೆಲುವಿನ ನಾಗಲೋಟವನ್ನ ಮುಂದುವರೆಸುವ ಭರವಸೆಯಲ್ಲಿದ್ದಾರೆ..

ಇದೊಂದು ಗ್ಯಾಂಗ್ ಸ್ಟರ್ ಕಾಮಿಡಿ ಸಿನಿಮಾ.. ಮಾಸ್ ನ ಜೊತೆ ಜೊತೆಗೆ ಕ್ಲಾಸಿ ಕಾಮಿಡಿಯನ್ನ ಮಿಕ್ಸ್ ಮಾಡಿ ಸಿದ್ದವಾಗಿದೆ.. ನಾಯಕ ರೌಡಿ ಆಗಿದ್ದು, ಅಪಟ್ಟ ಕನ್ನಡ ಪ್ರೇಮಿ.. ವಿದ್ಯೆ ಕಲಿಯದಿದ್ರು ವ್ಯಾಕರಣದಲ್ಲಿ ಮಾತ್ರ ಪಂಡಿತನಾಗಿರ್ತಾನೆ.. ಈತ ಕೇಳುವ ವ್ಯಾಕರಣ ಪ್ರಶ್ನೆಗೆ ಉತ್ತರ ನೀಡದಿದ್ರೆ ಅವರಿಗೆ ಹಿಡಿದು ಒದಿತಾನೆ..

ಹೀಗೆ ಸಾಗೋ ಸಿನಿಮಾದಲ್ಲಿ ನಾಯಕಿಯಾಗಿ ರವಿಭಟ್ ( ವಿನಯ್ ಪ್ರಸಾದ್ ಸಹೋದರ) ಅವರ ಪುತ್ರಿ ಕೃಷ್ಣಾ ಅಭಿನಯಿಸಿದ್ದಾರೆ.. ಇವರ ಮೊದಲ ಹೆಸರು ಭಾವನಾ ಭಟ್.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ರಾಜಕುಮಾರ ಸಿನಿಮಾದಲ್ಲಿ ನಟಿಸಿದ್ದ ಈಕೆ, ಇದೇ ಮೊದಲ ಬಾರಿಗೆಸವರ್ಣ ದೀರ್ಘ ಸಂಧಿಗೆ ನಾಯಕಿಯಾಗಿದ್ದಾರೆ..

ಈಗಾಗ್ಲೇ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ.. ಚಿತ್ರದ ಟ್ರೇಲರ್ ಅನ್ನ ಸಖತ್ ಸೌಂಡ್ ಮಾಡುತ್ತಿರುವ ಪ್ರಭಾಸ್ ಅಭಿಯನದ ಸಾಹೋ ಚಿತ್ರದ ಜೊತೆಗೆ ಬಿಡುಗಡೆ ಮಾಡಲಿದೆ..  ಮೆಲೋಡಿ ಕಿಂಗ್ ಮನೋಮೂರ್ತಿ ಅವರು ಸಂಗೀತ ನೀಡಿದ್ದಾರೆ.. ಮೀರು ಟಾಕೀಸ್ ಮತ್ತು ಲಿಲಾಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಈ ಚಿತ್ರ ಸಿದ್ದವಾಗಿದೆ..

Comments

comments

Similar Articles

Top