ಪ್ರಾರಂಭ ಟೀಸರ್ ಔಟ್.! ಅಮೂಲ್ ಬೇಬಿ ಮನೋರಂಜ ಅವರನ್ನ ರಗಡ್ ಬೇಬಿ ಅಂದಿದ್ಯಾಕೆ ಡಿ-ಬಾಸ್.?

ಮನೋರಂಜನ್ ರವಿಚಂದ್ರನ್ ಇಂಡಸ್ಟ್ರಿಗೆ ಬಂದು ಎರಡು ಮೂರು ವರ್ಷಗಳು ಕಳೆದಾಗಿದೆ.. ನಾಯಕನಾಗಿ ಎರಡು ಚಿತ್ರಗಳಲ್ಲಿ  ಅಭಿನಯಿಸಿದ್ದು, ತನ್ನ ಮುಂದಿನ ಪ್ರಾಜೆಕ್ಟ್ ಗಳಲ್ಲಿ ಸಿನಿ ಪ್ರೇಮಿಗಳಿಗೆ ವಿಭಿನ್ನತೆಯಿಂದ ಕೂಡಿರುವ ಕ್ಯಾರೆಕ್ಟರ್ ಗಳ ಮೂಲಕ ರಂಜಿಸಬೇಕೆಂಬ ಹಂಬಲವನ್ನ ಹೊಂದಿದ್ದಾರೆ.. ಹೀಗಾಗೆ ಈ ಬಾರಿಪ್ರಾರಂಭಮೂಲಕ ರಗಡ್ ಅಂಡ್ ಮಾಸ್ ಹೀರೊ ಆಗಿ ಕಂಗೊಳಿಸುವ ಭರವಸೆಯನ್ನ ನೀಡುತ್ತಿದ್ದಾರೆ

ಈ ಚಿತ್ರದ ಟೀಸರ್ ಅನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದಾರೆ.. ಅಷ್ಟೆ ಅಲ್ಲ ಮಂತನ್ ಎಂಬ ನಾಯಕ ಕ್ಯಾರೆಕ್ಟರ್ ಅನ್ನ ಪರಿಚಯ ಮಾಡಿಕೊಡುವ ವಾಯ್ಸ್ ಡಿ ಬಾಸ್ ಅವರದ್ದೆ. ಸದ್ಯ ಟೀಸರ್ ನ ನೋಡಿರುವ ದಾಸ, ಮನೋರಂಜನ್ ಅಪಿಯರನ್ಸ್ ಗೆ ಫಿದಾ ಆಗಿದ್ದಾರೆ.. ಹೀಗಾಗೆ ನಮ್ಮ ಅಮೂಲ್ ಬೇಬಿ ರಗಡ್ ಬೇಬಿಯಾಗಿ ನಿಮ್ಮ ಮುಂದೆ ಬರ್ತಿದೆ ಎಂದಿದ್ದು, ‘ಪ್ರಾರಂಭಚಿತ್ರತಂಡಕ್ಕೆ ಶುಭಾಯಶಗಳನ್ನ ತಿಳಿಸಿದ್ದಾರೆ

ಮನು ಕಲ್ಯಾಡಿ ಆಕ್ಷನ್ ಕಟ್ ಹೇಳಿದ್ರೆ, ಬಂಡವಾಳದ ಜವಾಬ್ದಾರಿಯನ್ನ ಜಗದೀಶ್ ಕಲ್ಯಾಡಿ ವಹಿಸಿಕೊಂಡಿದ್ದಾರೆ.. ಸುರೇಶ್ ಬಾಬು ಛಾಯಾಗ್ರಹಣ, ಪ್ರಜ್ವಲ್ ಪೈ ಮ್ಯೂಸಿಕ್ ನಲ್ಲಿ ಪ್ರಾರಂಭ ಸೌಂಡ್ ಮಾಡಲ್ಲಿದ್ದು, ರಗಡ್ ಹುಡುಗನ ಲೈಫ್ ನ ನಾಯಕಿಯಾಗಿ ಕೀರ್ತಿ ಕಾಣಿಸಿಕೊಂಡಿದ್ದಾರೆ..

Comments

comments

Similar Articles

Top