ಪವರ್ ಸ್ಟಾರ್ ಅಭಿನಯಿಸಲಿರುವ ‘ಜೇಮ್ಸ್’ ಸಿನಿಮಾದ ಬಗ್ಗೆ ಡೈರೆಕ್ಟರ್ ಚೇತನ್ ಹೇಳಿದ ಸಖತ್ ಸುದ್ದಿ ಇದು..!!

ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಯುವರತ್ನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದು, ಅಂದುಕೊಂಡ ಹಾಗೆ ಚಿತ್ರದ ಶೂಟಿಂಗ್ ಸಾಗಿದೆ.. ಆದಷ್ಟು ಬೇಗಾ ಯುವರತ್ನ ಚಿತ್ರೀಕರಣ ಕಂಪ್ಲೀಟ್ ಆಗಲ್ಲಿದ್ದು, ಈ ವರ್ಷದ ಅಂತ್ಯಕ್ಕೆ ಯುವರತ್ನ ನೋಡುವ ಚಾನ್ಸ್ ನಿಮಗೆ ಸಿಗಲಿದೆ.. ಈಗಾಗ್ಲೇ ಈ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಸಹ ಇದ್ದು, ಅದನ್ನ ಫುಲ್ ಫಿಲ್ ಮಾಡುವ ಭರವಸೆಯನ್ನ ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಕೂಡ ನೀಡಿದ್ದಾರೆ..

ಈ ಸಿನಿಮಾ ಮುಗಿಯುತ್ತಿದ್ದ ಹಾಗೆ ಈ ಮೊದಲೇ ಅನೌಸ್ ಆಗಿದ್ದ ಚೇತನ್ ನಿರ್ದೇಶನ ಮಾಡಬೇಕಿರುವ ಜೇಮ್ಸ್ ಶುರುವಾಗಲಿದೆ. ಇದಕ್ಕೆ ಅಪ್ಪು ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಫಸ್ಟ್ ಲುಕ್ ಪೋಸ್ಟರ್ ನಲ್ಲೆ ಹವಾ ಎಬ್ಬಸಿದ ಈ ಸಿನಿಮಾ ನನ್ನ ಡ್ರೀಮ್ ಪ್ರಾಜೆಕ್ಟ್ ಅಂದಿದ್ದಾರೆ ಚೇತನ್.. ನಾನು ಬಹು ವರ್ಷಗಳಿಂದ ಅಪ್ಪ ಸಾರ್ ಗೆ ಸಿನಿಮಾ ಮಾಡೋ ಆಸೆಯನ್ನ ಇಟ್ಟುಕೊಂಡಿದ್ದೆ, ಈಗ ಅದು ಈಡೇರುವ ಸಮಯ ಬಂದಿದೆ.. ಅದಕ್ಕೆ ಬೇಕಾದ ತಯಾರಿ ಕೂಡ ನಡೆಯುತ್ತಿದೆ ಎಂದಿದ್ದಾರೆ..

ಸದ್ಯದಲ್ಲೆ ಜೇಮ್ಸ್ ಸಿನಿಮಾದ ಹಾಡುಗಳ ರೆಕಾರ್ಡಿಂಗ್ ಗೆ ಪ್ಲಾನ್ ಮಾಡಲಾಗುತ್ತಿದ್ದು, ಆದಷ್ಟು ಬೇಗ ಕೆಲಸ ಶುರು ಮಾಡಲ್ಲಿದ್ದೇನೆ ಎಂದಿದ್ದಾರೆ.. ಸದ್ಯ ಶ್ರೀಮುರುಳಿ ಅವರಿಗೆ ಆಕ್ಷನ್ ಕಟ್ ಹೇಳ್ತಿರುವ ಚೇತನ್, ಭರಾಟೆಯನ್ನ ತೆರೆಗೆ ತರೋಕೆ ಸಿದ್ದತೆ ಮಾಡಿಕೊಳ್ತಿದ್ದಾರೆ.. ಹೀಗಾಗೆ ಜೇಮ್ಸ್ ಸಿನಿಮಾದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ಮುಂದಿನ ದಿನಗಳಲ್ಲಿ ನಿಮ್ಮ ಮುಂದೆ ಇರಲಾಗುವುದು ಎಂದಿದ್ದಾರೆ..

Comments

comments

Similar Articles

Top