ಪುಕ್ಸಟ್ಟೆಲೈಫ್.. ಪುರ್ ಸೊತ್ ಮಾಡ್ಕೊಂಡು ಓದಾಬೇಕಾದ ಸ್ಟೋರಿ ಇದು..

ಫಾಸ್ಟ್ ಲೈಫು, ಟೈಮೇ ಇಲ್ಲದೆ ಜೀವನ ಶೈಲಿ, ಯಾರನ್ನ ಯಾರನ್ನ ಕೇಳಿದ್ರು ಹೇಳೋದು ಒಂದೇ ಮಾತು, ಅಯ್ಯೋ ಪರ್ ಸೊತ್ತೇ ಇಲ್ಲ ಅಂತ.. ಇದೇ ಟ್ಯಾಗ್ ಲೈನ ಇಲ್ಲೊಂದು ಚಿತ್ರತಂಡ ಇಟ್ಟುಕೊಂಡು ಸಿನಿಮಾ ಮಾಡ್ತಿದೆ.. ಟ್ಯಾಗ್ ಲೈನೇ ಈ ರೇಂಜ್ಗೆ ಇರಬೇಕಾದ್ರೆ ಸಿನಿಮಾದ ಟೈಟಲ್ ಇನ್ ಹೇಗ್ ಇರಬೇಡ ಅಲ್ವ..? ಅದು ಅಷ್ಟೇ ಚೆಂದಾಗಿದೆ.. ಅದೇ ‘ ಪುಕ್ಸಟ್ಟೆಲೈಫು’ ಅಂತ.. ಈ ಪದಕೇಳಿದ್ರೆ ಇದು ದಿನ ನಿತ್ಯ ಬಳಸೋದೆ ಅಲ್ವ ಅನ್ನಿಸಿದ್ರು, ಇದನ್ನ ಕೇಳೋರಿಗು ಹೇಳೋರಿಗು ಅದೇನೊ ಮಜ ಕೊಡುತ್ತೆ.. ಹಾಗಿದ್ರೆ ಟೈಟಲ್ ಇಷ್ಟೊಂದು ಫನ್ನಿ ಅನ್ನಿಸಿದ್ರೆ ಸಿನಿಮಾ ಕೂಡ ಹಾಗೆ ಇರ್ಬೇಕು ಅಲ್ವ..?

ಅದಕ್ಕೆ ನಿರ್ದೇಶಕ ಅರವಿಂದ್ ಕುಪ್ಳಿಕರ್ 200% ಮನರಂಜನೆಯನ್ನ ಸೇರಿಸಿ ಈ ಸಿನಿಮಾವನ್ನ ನಿರ್ದೇಶನ ಮಾಡ್ತಿದ್ದಾರೆ.. ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನ್ನ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.. ಟೈಟಲ್ ಹಾಗೆ ಪೋಸ್ಟರ್ ನಿಂದಲೇ ವಿಭಿನ್ನತೆಯ ಸಂದೇಶ ನೀಡ್ತಿರುವ ಈ ಚಿತ್ರಕ್ಕೆ ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ವಾಸು ದೀಕ್ಷಿತ್ ಸಂಗೀತವಿದ್ದು, ನಾಗರಾಜ್ ಸೌಮ್ಯಾಜೀ ನಿರ್ಮಾಣದಲ್ಲಿ ಸಿನಿಮಾ ತಯಾರಾಗ್ತಿದೆ..

ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವೇಗವಾಗಿ ಸಾಗಿದ್ದು, ಆದಷ್ಟು ಬೇಗ ಸಿನಿಮಾ ಬಗ್ಗೆ ನಿಮಗೆ ಕೊಂಚ ಮಾಹಿತಿ ನೀಡೋಕೆ ಟೀಸರ್ ನ ಬಿಡುಗಡೆ ಮಾಡಲು ತಯಾರಿ ನಡೆಸಿದೆ.‌

Comments

comments

Similar Articles

Top