ಸುಯೋಧನ ದರ್ಶನ್ ಕಂಠ ಸಿರಿಯಲ್ಲಿ ಕ್ರೇಜಿಸ್ಟಾರ್ ಪುತ್ರನ ‘ ಪ್ರಾರಂಭ’ ಟೀಸರ್..!!

ರವಿಚಂದ್ರನ್ ಹಾಗು ದರ್ಶನ್ ಇಬ್ಬರು ಕುರುಕ್ಷೇತ್ರ ಚಿತ್ರದಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಹಬ್ಬ ನೀಡಿದ ಬೆನ್ನಲ್ಲೇ ಈಗ ಮತ್ತೆ ಹೊಸ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.. ಕ್ರೇಜಿಸ್ಟಾರ್ ಮಗ ಮನೋರಂಜನ್ ಅಭಿನಯದಪ್ರಾರಂಭಸಿನಿಮಾದ ಬಗ್ಗೆ ನಿಮಗೆಲ್ಲ ಗೊತ್ತೆ ಇದೆ.. ನಾಳೆ ಈ ಚಿತ್ರದ ಟೀಸರ್ ಬಿಡುಗಡೆಗೊಳ್ಳುತ್ತಿದ್ದು, ಡಿ ಬಾಸ್ ನಿರೂಪಣೆಯಲ್ಲಿ ಖಡಕ್ ಧ್ವನಿಯಲ್ಲಿ ಮೂಡಿ ಬರಲಿರುವ ಪ್ರಾರಂಭ ಟೀಸರ್ ಬಗ್ಗೆ ಕುತೂಹಲ ಹೆಚ್ಚಾಗಿದೆ.. ಇನ್ನು ಇದುವರೆಗೂ ಮನೋರಂಜನ್ ಅವರನ್ನ ಲವರ್ ಬಾಯ್ ಕ್ಯಾರೆಕ್ಟರ್ ನಲ್ಲಿ ನೋಡಿದವರಿಗೆ ಈ ಸಿನಿಮಾ ಪೂರ ಮಾಸ್ ಹುಡುಗನ ಗೆಟಪ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.. ಹೀಗಾಗೆ ಈ ಮಾಸ್ ಹೈದನಿಗೆ, ಸ್ಯಾಂಡಲ್ ವುಡ್ ನ ಮಾಸ್ ಕಿಂಗ್ ಡಿ ಬಾಸ್ ವಾಯ್ಸ್ ನೀಡಿರೋದು, ಮಾಸ್ ಅಭಿಮಾನಿಗಳ ಮನಸ್ಸಿಗೆ ಮುದ ನೀಡುವುದರಲ್ಲಿ ಡೌಟ್ ಇಲ್ಲ ಬಿಡಿ..

ಅಂದಹಾಗೆ ಈ ಸಿನಿಮಾವನ್ನ ಮನು ಕಲ್ಯಾಡಿ ನಿರ್ದೇಶನ ಮಾಡ್ತಿದ್ರೆ, ಜಗದೀಶ್ ಕಲ್ಯಾಡಿ ನಿರ್ಮಾಣ ಮಾಡಿದ್ದಾರೆ.. ಪ್ರಜ್ವಲ್ ಪೈ ಮ್ಯೂಸಿಕ್ ನಲ್ಲಿ, ಸುರೇಶ್ ಬಾಬು ಅವರ ಕ್ಯಾಮರಾ ವರ್ಕ್ ನಲ್ಲಿ ಪ್ರಾರಂಭ ಮೂಡಿ ಬರಲಿದೆ.. ನಾಳೆ ಟೀಸರ್ ಬಗ್ಗೆ ಕಾತುರರಾಗಿರುವವರಿಗೆ, ಚಿತ್ರದ ಮತ್ತಷ್ಟು ವಿಚಾರಗಳನ್ನ ರಿವೀಲ್ ಮಾಡಲಿದೆ ಚಿತ್ರತಂಡ..

Comments

comments

Similar Articles

Top