ರಾಜವಂಶದಿಂದ ಮೊದಲ ಹೀರೋಯಿನ್ ಬರುತ್ತಿದ್ದಾರೆ ಎಂಬ ಪ್ರಶ್ನೆಗೆ ಅಪ್ಪು ಕೊಟ್ಟ ಖಡಕ್ ಉತ್ತರವೇನು ಗೊತ್ತಾ..?

ಡಾ.ರಾಜ್ ಕುಮಾರ್ ಅವರ ಕುಟುಂಬದಿಂದ ಬಂದ ದೊಡ್ಡಮನೆಯ ಮಕ್ಕಳು ಚಿತ್ರರಂಗದಲ್ಲಿ ತಮ್ಮದೆ ಆದ ಸ್ಥಾನವನ್ನ ಪಡೆದುಕೊಂಡಿದ್ದಾರೆ.. ನಟರಾಗಿ ನಿರ್ಮಾಪಕರಾಗಿ, ಗಾಯಕರಾಗಿ ಕನ್ನಡ ಸಿನಿ ಪ್ರೇಮಿಗಳ ಮನವನ್ನ ಗೆದ್ದಿದ್ದಾರೆ.. ದಿನ ಕಳೆದ ಹಾಗೆ ದೊಡ್ಮನೆಯ ಈ ದೊಡ್ಡ ನಟರ ಮೇಲೆ ಅಭಿಮಾನಿ ವಲಯ ಹೆಚ್ಚಾಗುತ್ತಿದ್ದು, ಸಿನಿ ಪ್ರೇಮಿಗಳನ್ನ ರಂಜಿಸುವ ಕಾರ್ಯದಲ್ಲಿ ಎಲ್ಲರ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ..

ಈಗಾಗ್ಲೇ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ವಿನಯ್ ರಾಜ್ ಕುಮಾರ್ ಒಂದೊಳ್ಳೆ ಬ್ರೇಕ್ ಗಾಗಿ ಎದುರು ನೋಡುತ್ತಿದ್ದು, ಗುರುರಾಜ್ ಕೂಡ ಇಂಡಸ್ಟ್ರಿಗೆ ನಾಯಕನಾಗಿ ಎಂಟ್ರಿ ಕೊಡಲು ತಯಾರಿ ನಡೆಸಿದ್ದಾರೆ.. ಇವರ ಜೊತೆಗೆ ಡಾ.ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಅವರು ವೆಬ್ ಸೀರಿಸ್ ನಿರ್ಮಾಣ ಮಾಡುವ ಮೂಲಕ ಅಜ್ಜಿಯಂತೆ ಸಿನಿಮಾ ನಿರ್ಮಾಣದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಲು ಮುಂದಾಗಿರುವ ವಿಚಾರ ನಿಮಗೆಲ್ಲ ಗೊತ್ತೆ ಇದೆ..

ಈಗ ಇದೇ ಹಾದಿಯಲ್ಲಿ ಸಾಗಿರುವ ಪೂರ್ಣಿಮಾ ಹಾಗು ನಟ ರಾಮ್ ಕುಮಾರ್ ದಂಪತಿಗಳ ಮಕ್ಕಳು ಕನ್ನಡ ಚಿತ್ರರಂಗಕ್ಕೆ ನಾಯಕ ಮತ್ತು ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.. ಧೀರೆನ್ ‘ದಾರಿ ತಪ್ಪಿದ ಮಗ’ ಸಿನಿಮಾ ಮೂಲಕ ತನ್ನ ಸಿನಿ ಜರ್ನಿ ಶುರು ಮಾಡಿದ್ರೆ, ಇವರ ಸಹೋದರಿ ಧನ್ಯಾ ರಾಮ್ ಕುಮಾರ್ ‘ನಿನ್ನ ಸನಿಹಕೆ’ ಎಂಬ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ನೀಡಿದ್ದಾರೆ.. ನಿನ್ನೆಯಷ್ಟೆ ಈ ಸಿನಿಮಾದ ಮುಹೂರ್ತ ನಗರದ ಬಸವನಗುಡಿ ರಸ್ತೆಯ ದೊಡ್ಡ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ನಡೆದಿದೆ. ಈ ಸಮಾರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ , ರಾಘವೇಂದ್ರ ರಾಜ್​ಕುಮಾರ್ ಹಾಗೂ ದಿನಕರ್ ತೂಗುದೀಪ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ರು..

ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಪವರ್ ಸ್ಟಾರ್ ಅಕ್ಕ ಮಗಳ ಸಿನಿ ಪಯಣದ ಬಗ್ಗೆ ಹೀಗೆ‌ಹೇಳಿದ್ದಾರೆ.. ರಾಜವಂಶದಿಂದ ಮೊದಲ ಹೀರೋಯಿನ್ ಬರುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಪ್ಪು, ಇಲ್ಲಿ ಹೆಣ್ಣಾಗಿ ಗಂಡಾಗಲಿ ಇಲ್ಲ. ವೃತ್ತಿಯಲ್ಲಿ ನಾನು ಯಾರನ್ನೂ ವ್ಯತ್ಯಾಸದಿಂದ ನೋಡುವುದಿಲ್ಲ. ನನಗೆ ಯಾವತ್ತೂ ನಾಯಕಿ ಆಗ್ತೀನಿ ಎಂದು ಧನ್ಯಾ ಹೇಳಿಲ್ಲ. ಅಕ್ಕ ಹೇಳಿದ ಮೇಲೆ ಗೊತ್ತಾಯ್ತು ಎಂದು ಉತ್ತರಿಸುವ ಮೂಲಕ ಧನ್ಯಾಗೆ ಆಲ್ ದಿ ಬೆಸ್ಟ್ ಎಂದಿದ್ದಾರೆ ಮಾವ ಪವರ್ ಸ್ಟಾರ್..

Comments

comments

Similar Articles

Top