ಪರಭಾಷಾ ಸ್ಟಾರ್ ಗಳಿಗೆ ಯುವರಾಜ್ ಕುಮಾರ್ ಪ್ರಶ್ನೆ‌..! ಪೋಸ್ಟ್ ವೈರಲ್..

ಕರ್ನಾಟಕ ಈ ಬಾರಿ ಕಂಡು ಕೇಳರಿಯದ ಮಳೆ ಅಬ್ಬರಕ್ಕೆ ನಲುಗಿ ಹೋಗಿದೆ‌.. ಪ್ರವಾಹದಲ್ಲಿ ಜೀವವನ್ನ ಜೀವನವನ್ನೆ ಕಳೆದುಕೊಂಡು ಸಹಾಯದ ನಿರೀಕ್ಷೆಯಲ್ಲಿ ಜನತೆ ಇದ್ದಾರೆ.. ಇತ್ತ ನಮ್ಮ ಸೈನಿಕರು, ಕನ್ನಡದ ನಟನಟಿಯರು, ಸಂಘ ಸಂಸ್ಥೆಗಳು ನೆರೆ ಪರಿಹಾರಕ್ಕಾಗಿ ತಮ್ಮ ಕೈಲಾದ ಸಹಾಯವನ್ನ ಮಾಡುತ್ತ, ಸರ್ಕಾರದ ಜೊತೆಗೆ ಕೈ ಜೋಡಿ, ಜನ ಜೀವನ ಮೊದಲಿನ ಪರಿಸ್ಥಿತಿಗೆ ವಾಪಸ್ ಆಗುವಂತೆ ಪ್ರಾರ್ಥನೆಯನ್ನ ಮಾಡುತ್ತಿದ್ದಾರೆ.. ಈ ನಡುವೆ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವ ರಾಜ್ ಕುಮಾರ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನ ಹಾಕಿದ್ದಾರೆ

ಹೌದು, ಇದು ಸದ್ಯ ಪ್ರವಾಹದ ಬಗ್ಗೆನೆ ಇದೆ.. ಆದರೆ ಇದರಲ್ಲಿ ಯುವರಾಜ್ ಕುಮಾರ್ ಹೇಳಿರುವ ವಿಚಾರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಜೊತೆಗೆ ಯುವರಾಜ್ ಹೇಳ್ತಿರೋದು ಸರಿ ಇದೆ ಎಂಬ ಮಾತುಗಳು ಕೇಳಿ ಬಂದಿವೆ.. ಹಾಗಿದ್ರೆ ಯುವರಾಜ್ ಕುಮಾರ್ ಸದ್ಯದ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಿ ಹೇಳಿರೋದಾದ್ರು ಏನು ನೀವೆ ನೋಡಿ..

ಒಂದು ಆಲೋಚನೆ :

ನಮ್ಮ ಕರ್ನಾಟಕದ ಎಷ್ಟೋ ಜಿಲ್ಲೆಗಳಲ್ಲಿ ಜಲಪ್ರಳಯದ ಪರಿಣಾಮ ಲಕ್ಷಾಂತರ ಜನರು ನಷ್ಟದಲ್ಲಿದಾರೆ .. ಅವರಲ್ಲಿ ನೂರಾರು ಜನರು ನಿರಾಶ್ರಿತರಾಗಿದ್ದಾರೆ, ಆಹಾರವಿಲ್ಲ, ಮೂಲಭೂತ ಸೌಕರ್ಯಗಳಿಲ್ಲ.. ನಾವು ಕನ್ನಡಿಗರು , ಇಲ್ಲಿನ ಸಂಘ ಸಂಸ್ಥೆಗಳು , ಸೇನೆ ದಳಗಳು , ಕರ್ನಾಟಕ ಸರ್ಕಾರ ಎಲ್ಲರೂ ಒಂದಾಗಿ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನ ಪಡುತ್ತಿದ್ದೇವೆ ..

ಆದರೆ, ಎಲ್ಲಾ ಹೊರಗಿನ ಸೆಲೆಬ್ರಿಟಿಗಳು / ಸ್ಟಾರ್‌ಗಳು / ರಾಜಕಾರಣಿಗಳು ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು, ತಮ್ಮ ಬ್ರಾಂಡ್ ಅನ್ನು ಉತ್ತೇಜಿಸಲು, ನಮ್ಮ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು , ಮತ ಕೇಳಲು ಕರ್ನಾಟಕಕ್ಕೆ ಬರುವವರು ಎಲ್ಲಿದ್ದಾರೆ.? ಇಲ್ಲಿ ಬರೋದು , ಸಹಾಯ ಮಾಡೋದ್ ಇರಲಿ, ನನಗೆ ಯಾರ ಟ್ವೀಟ್ , ಪೋಸ್ಟ್ ನೋಡಿದ ನೆನಪು ಆಗುತ್ತಿಲ್ಲ ! ಅಂದ ಹಾಗೆ , ಸಹಾಯ ಮಾಡಲು ಮುಂದೆ ಬಂದಿರುವ ಎಲ್ಲರಿಗೂ ನಮ್ಮ ಕೋಟಿ ವಂದನೆಗಳು.. ನಾನು ಏನಾದರೂ ತಪ್ಪು ಹೇಳುತ್ತಿದ್ದೇನೆಯೇ.? ತಪ್ಪಿದರೆ ಕ್ಷಮೆ ಇರಲಿ.. ಯಾರೇ ಬರಲಿ ಬಿಡಲಿ ನಮ್ಮವರ ಜೊತೆ ,ಎಲ್ಲರ ಜೊತೆ ನಾವು ಇರೋಣ .. ಯುವರಾಜ್ ಕುಮಾರ್ ಹೇಳಿರುವ ಈ ವಿಚಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ..

Comments

comments

Similar Articles

Top