ವಿವಾದ ಸುಳಿಯಲ್ಲಿ ಯಶ್​​ ಸಿನಿಮಾ! ಜೈಲು ಸೇರಿದ ‘ಕೆಜಿಎಫ್’ ಸಿನಿಮಾ ತಂಡದ ಸದಸ್ಯ

ದಾಖಲೆಗಳ ಸರಮಾಲೆಯನ್ನೇ ಸೃಷ್ಟಿಸಿದ ಕೆಜಿಎಫ್ ಚಲನಚಿತ್ರದ ಎರಡನೆಯ ಭಾಗ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು. ಈಗ ಚಿತ್ರದ ಸ್ಟಂಟ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ರಘು ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ.

ಅಧಿಕ ನಿರೀಕ್ಷೆಗಳನ್ನು ಇಟ್ಟುಕೊಂಡು ನಡೆಯುತ್ತಿರುವ ಚಿತ್ರೀಕರಣ ಈ ಸಮಯದಲ್ಲಿ ಇಂಥದೊಂದು ವಿವಾದಕ್ಕೆ ಸಿಲುಕಿದೆ ಕೆಜಿಎಫ್ ತಂಡ. ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ರಘುವಿನ ಗೆಳತಿಯ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದ ವ್ಯಕ್ತಿಯೊಬ್ಬನನ್ನು ರಘು ಕೊಲೆ ಮಾಡಿದ್ದಾರೆ, ಎನ್ನುವ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ. ರಘು ಮತ್ತು ಆತನ ಗೆಳತಿ ಹಾಗೂ ಮತ್ತೋರ್ವ ಸ್ನೇಹಿತ ಸೇರಿ ಕೊಲೆಗೈದಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಮೂವರನ್ನೂ ಕೊಲೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ರಘು ಈ ಮೊದಲು ಬೇರೆ ಚಿತ್ರಗಳಲ್ಲೂ ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ.

ಇತ್ತೀಚಿಗೆ ಚಿತ್ರತಂಡ ಅಧೀರನ ಪಾತ್ರಕ್ಕೆ ಬಾಲಿವುಡ್ ನಟ ಸಂಜಯ್ ದತ್ ಎಂಟ್ರಿ ಕೊಡುವ ಬಗ್ಗೆ ಮಾಹಿತಿ ನೀಡಿತ್ತು. ಚಿತ್ರದಲ್ಲಿ ಅವರ ಲುಕ್ ಹೇಗಿರುತ್ತೆ ಅನ್ನುವ ಬಗ್ಗೆಯೂ ವರದಿಯಾಗಿತ್ತು. ಎಲ್ಲಾ ಚೆನ್ನಾಗಿ ನಡೆಯುತ್ತಿರುವಾಗಲೇ ಹೀಗೊಂದು ಅಹಿತಕರ ಘಟನೆ ನಡೆದಿರುವುದು ಚಿತ್ರತಂಡಕ್ಕೆ ಬೇಸರದ ಸಂಗತಿಯಾಗಿದೆ.

Comments

comments

Similar Articles

Top