ಕುರುಕ್ಷೇತ್ರದ ದುರ್ಯೋಧನ ಅಣ್ಣಾವ್ರನ್ನ ಬಿಟ್ಟರೆ ಮತ್ಯಾರಿಂದಲು ಮಾಡಲು ಸಾಧ್ಯವಿಲ್ಲ – ದರ್ಶನ್..

ಕಳೆದ ಕೆಲ ದಿನಗಳ ಹಿಂದೆ ಬಿಡುಗಡೆಗೊಂಡು ಕನ್ನಡದ ಮಲ್ಟಿಸ್ಟಾರರ್ ಸಿನಿಮಾ ಕುರುಕ್ಷೇತ್ರ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಗಳಿಕೆಯನ್ನ ಕಾಣುತ್ತಿದೆ.. ಮೊದಲ ಬಾರಿಗೆ ಪೌರಾಣಿಕ ಚಿತ್ರವೊಂದಕ್ಕೆ 3ಡಿ ಟಚ್ ನೀಡಲಾಗಿದ್ದು ಎಲ್ಲೆಡೆಯೂ ಚಿತ್ರದ ಬಗ್ಗೆ ಉತ್ತಮ ವಿಮರ್ಶೆ ಕೇಳಿ ಬರ್ತಿದೆ.. ಸಿನಿಮಾದಲ್ಲಿ ಸ್ಟಾರ್ ಗಳ ದಂಡೆ ಇದ್ದು, ದರ್ಶನ್ ಸೇರಿದಂತೆ ರೆಬಲ್ ಸ್ಟಾರ್ ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್ ಕುಮಾರಸ್ವಾಮಿ ಅಭಿಯಿಸಿದ್ದಾರೆ.. ಕುರುಕ್ಷೇತ್ರವನ್ನ ಕಣ್ಣ ಮುಂದೆ ಕಟ್ಟಿಕೊಡುವಲ್ಲಿ ಡೈರೆಕ್ಟರ್ ನಾಗಣ್ಣ ಯಶಸ್ವಿಯಾಗಿದ್ದಾರೆ

ಇನ್ನು ಪೌರಾಣಿಕ ಸಿನಿಮಾಗಳು ಅಂದ್ರು ಡಾ.ರಾಜ್ ಕುಮಾರ್ ಅವರನ್ನ ನೆನೆಪು ಮಾಡಿಕೊಳ್ಳದೆ ಇರಲು ಸಾಧ್ಯವೆ ಇಲ್ಲ.. ಕೃಷ್ಣನಿಂದ ಹಿಡಿದು ಅರ್ಜುನ ಬಬ್ರುವಾಹನರ ವರೆಗೆ ಅಣ್ಣಾವ್ರು ಮಾಡದ ಪಾತ್ರಗಳಿಲ್ಲ.. ದೇವಾನುದೇವತೆಗಳ ರೂಪ ತೊಟ್ಟು ದೈವ ಚರಿತೆಗಳನ್ನ ಕಣ್ಣಿಗೆ ಕಟ್ಟುಹಾಗೆ ಕಟ್ಟಿಕೊಟ್ಟವರಲ್ಲಿ ಮೊದಲಿಗರು  ಕನ್ನಡದ ನಟಸಾರ್ವಭೌಮರಾದ ಡಾ.ರಾಜ್ ಕುಮಾರ್ ಅವರು..

ಕುರುಕ್ಷೇತ್ರ ಚಿತ್ರವನ್ನ ನೋಡಿ ಬಂದ ಹಲವರು ಅಣ್ಣಾವ್ರನ್ನ ಮಿಸ್ ಮಾಡಿಕೊಂಡ ಬಗ್ಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.. ಇನ್ನು ಸ್ವತಃ ದರ್ಶನ್ ಅವರು ಕೂಡ ಈ ಬಗ್ಗೆ ಮಾತನಾಡಿರೋ ವಿಡಿಯೋ ವೈರಲ್ ಆಗಿದೆ.. 70-80 ದಶಕದಲ್ಲಿ ಇದೇ ಕುರುಕ್ಷೇತ್ರ ಸಿನಿಮಾ ತೆರೆಗೆ ಬಂದಿದ್ದರೆ ಈ ಪಾತ್ರವನ್ನ ಯಾರು ಮಾಡಲು ಸಾಧ್ಯವಾಗುತ್ತಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ದಾಸಅಣ್ಣಾವ್ರು ಬಿಟ್ಟರೆ ಬೇರ್ಯಾರಿಂದಲು ಸಾಧ್ಯವಿಲ್ಲ ಎಂದಿದ್ದಾರೆ..

Comments

comments

Similar Articles

Top