ಬಿಡುಗಡೆಗೊಂಡ ಒಂದೇ ವಾರದಲ್ಲಿ ದಾಖಲೆ ಬರೆದ ಕುರುಕ್ಷೇತ್ರ ಗಳಿಸಿದ್ದೆಷ್ಟು ಕೋಟಿ ಗೊತ್ತಾ..?

ಕನ್ನಡದ ಮಲ್ಟಿ ಸ್ಟಾರರ್ ಪೌರಾಣಿಕ ಸಿನಿಮಾ 2ಡಿ ಹಾಗು 3ಡಿ ರೂಪದಲ್ಲಿ ಕಳೆದ ವಾರ ಬಿಡುಗಡೆಗೊಂಡಿದೆ.. ಆಗಸ್ಟ್ 9 ರಂದು ತೆರೆ ಕಂಡ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಥಿಯೇಟರ್ ಗಳ ಮುಂದೆ ಹೌಸ್ ಬೋರ್ಡ್ ಬೀಳುತ್ತಿದೆ. ಒಂದು ವಾರ ಕಳೆದರು ಕ್ರೇಜ್ ಕಡಿಮೆಯಾಗದ ಕುರುಕ್ಷೇತ್ರದ ಕಲೆಕ್ಷನ್ ಕೂಡ ಏರುತ್ತಿದೆ.. ಮುನಿರತ್ನ ನಿರ್ಮಾಣದಲ್ಲಿ ದರ್ಶನ್ ಅವರ 50 ನೇ ಸಿನಿಮಾವಾಗಿ ತೆರೆಗೆ ಬಂದ ಕುರುಕ್ಷೇತ್ರ ಕನ್ನಡ ಹಾಗು ತೆಲುಗಿನ ಪ್ರೇಕ್ಷಕರನ್ನ ರಂಜಿಸುತ್ತಿದೆ..

ಸದ್ಯ ರಾಜ್ಯದಲ್ಲಿ ಮಹಾ ಮಳೆಯ ಪ್ರವಾಹ ಇದ್ದರು, ಚಿತ್ರದ ಗಳಿಕೆಗೆ ಯಾವುದೇ ಹೊಡೆತ ಬಿದ್ದಿಲ್ಲ.. ಭಾರತ ಮಾತ್ರವಲ್ಲದೆ ಹೊರ ದೇಶಗಳಲ್ಲಿಯು ಕುರುಕ್ಷೇತ್ರ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ.. ಹೀಗಾಗೆ ಸಿನಿಮಾ 30 ಕೋಟಿ ಗಳಿಕೆಯನ್ನ ಕಂಡು ಮುಂದೆ ಸಾಗಿದೆ.. ಇದೇ ಆಗಸ್ಟ್ 15ಕ್ಕೆ ತಮಿಳಿನಲ್ಲಿ ರಿಲೀಸ್ ಗೆ ಸಿದ್ದತೆಯನ್ನ ಮಾಡಿಕೊಳ್ಳಲಾಗಿದೆ.. ಇದರ ಜೊತೆಗೆ ಮಲೆಯಾಳಂ ಹಾಗು ಹಿಂದಿ ಭಾಷೆಯಲ್ಲು ಕುರುಕ್ಷೇತ್ರ ತೆರೆಗೆ ಬರುವ ತಯಾರಿಯಲ್ಲಿದೆ..

ನಾಗಣ್ಣ ನಿರ್ದೇಶನದಲ್ಲಿ ಮೂಡಿ ಬಂದಿರುವ ಕುರುಕ್ಷೇತ್ರ ಚಿತ್ರದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರೆ ಕಾಣಿಸಿಕೊಂಡಿದ್ದಾರೆ.. ದರ್ಶನ್, ಅರ್ಜುನ್ ಸರ್ಜಾ, ಅಂಬರೀಶ್, ರವಿಚಂದ್ರನ್, ಶಶಿಕುಮಾರ್, ನಿಖಿಲ್ ಕುಮಾರಸ್ವಾಮಿ, ರವಿಶಂಕರ್, ಭಾರತಿ, ಸ್ನೇಹಾ, ಹರಿಪ್ರಿಯಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.. ಈ ಮೂಲಕ ಕನ್ನಡದಲ್ಲಿ ಪೌರಾಣಿಕ ಸಿನಿಮಾವೊಂದು ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಷೋಗಳನ್ನ ಹೆಚ್ಚಿಸಲಾಗುವುದು ಎಂದು ವಿತರಣೆ ಜವಾಬ್ದಾರಿಯನ್ನ ವಹಿಸಿಕೊಂಡಿರುವ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ..

Comments

comments

Similar Articles

Top