ಕೋಮಲ್ ಮೇಲಿನ ಹಲ್ಲೆಯಲ್ಲಿ ಕಿಚ್ಚ ಸುದೀಪ್ ಹೆಸರು..!! ಕಿಡಿಕಾರಿದ ಜಗ್ಗೇಶ್ ಹೇಳಿದ್ದು ಹೀಗೆ..

ನಿನ್ನೆ ನಟ ಕೋಮಲ್ ಅವರ ಮೇಲೆ ಬೆಂಗಳೂರಿನ ಮಲ್ಲೇಶ್ವರಂನ ಸಂಪಿಗೆ ಚಿತ್ರಮಂದಿರದ ರೈಲ್ವೇ ಕೆಳ ಸೇತುವೆ ಬಳಿ, ಮಗನನ್ನ ಟ್ಯೂಶನ್ ಗೆ ಬಿಡಲು ಹೋಗುತ್ತಿದ್ದ ಹಲ್ಲೆ ಮಾಡಲಾಗಿದೆ.. ಅಂಡರ್ ಪಾಸ್ ಬಳಿ ಬಂದಾಗ ಹಲ್ಲೆ ನಡೆದಿದ್ದು ನಾಲ್ಕು ಜನರ ಗುಂಪಿನಲ್ಲಿ ಮೂವರು ಕೋಮಲ್ ಅವರನ್ನ ಹಿಡಿದುಕೊಂಡಿದ್ದು ಮತ್ತೊಬ್ಬ ಹಲ್ಲೆ ಮಾಡಿದ್ದಾನೆ.. ಈ ನಾಲ್ವರು ಕೂಡ ಮದ್ಯಪಾನ ಮಾಡಿದ್ರು ಎಂಬುದು ತಿಳಿದು ಬಂದಿದೆ..

ಈ ಘಟನೆ ಆದ ನಂತರ ಪ್ರತಿಕ್ರಿಯೆ ನೀಡಿದ ಜಗ್ಗೇಶ್ ಇದಕ್ಕೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದಿದ್ರು.. ಚಿತ್ರರಂಗದ ಕೈವಾಡದ ಬಗ್ಗೆ ಮಾತುಗಳು ಕೇಳಿ ಬಂದಾಗ ಇದಕ್ಕೆ ಯಾರೆ ಕಾರಣವಾದ್ರು ಬಿಡೋದಿಲ್ಲ ಎಂದಿದ್ರು.. ಸದ್ಯ ಟ್ವಿಟರ್ ನಲ್ಲಿ ಆಕ್ಟೀವ್ ಇರುವ ನವರಸ ನಾಯಕನಿಗೆ ಕೋಮಲ್ ಪ್ರಕರಣದಲ್ಲಿ ಕಿಚ್ಚ ಸುದೀಪ್ ಅವರ ಹೆಸರನ್ನ ಎಳೆದು ತಂದಿರೋದು ಗಮನಕ್ಕೆ ಬಂದಿದೆ.. ಹೀಗಾಗೆ ಜಗ್ಗೇಶ್ ಅವರು ಕೆಂಡಾಮಂಡಲವಾಗಿದ್ದಾರೆ..

ವೈಯಕ್ತಿಕ ಅನಿಸಿಕೆ ನಿರ್ಧಾರ ಮಾಡಿ ನನ್ನ ಕಲಾಬಂಧು ಕಿಚ್ಚ ಸುದೀಪ್ ಹೆಸರು ಯಾರಾದರೂ ಈ ವಿಷಯದಲ್ಲಿ ತಂದರೆ ಕ್ಷಮೆ ಇಲ್ಲ.. ಸುದೀಪ್ ನನ್ನ ಒಡಹುಟ್ಟದಿದ್ದರು ನನ್ನ ಹೆಮ್ಮೆಯ ತಮ್ಮನಂತೆ.. ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದ್ದು.. ಬರೆಯುವ ಆಸೆ ಇದ್ದರೆ ಉತ್ತಮ ಸಾಮಾಜಕ ವಿಷಯ ಬರೆಯಿರಿ.. ಕೆಡಿಸದಿರಿ ಮನಗಳ ಧನ್ಯವಾದಎಂದಿದ್ದಾರೆ..

ಈ ಮೂಲಕ ಸುಖಾಸುಮ್ಮನೆ ದೊಡ್ಡ ದೊಡ್ಡ ನಟರನ್ನ ತನ್ನ ಸಹೋದರನ ಮೇಲಾದ ಹಲ್ಲೆ ಪ್ರಕರಣಕ್ಕೆ ಎಳೆದು ತರದಂತೆ ಮನವಿ ಮಾಡಿದ್ದು, ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.. ಇನ್ನು ಕೋಮಲ್ ಮೇಲೆ ಹಲ್ಲೆ ಮಾಡಿರುವ ವಿಜಿ ಸುದೀಪ್ ಅಭಿಮಾನಿ ಆಗಿರೋದ್ರಿಂದ ಈ ರೀತಿ ಮಾತುಗಳು ಕೇಳಿಬಂದಿದೆ..

Comments

comments

Similar Articles

Top