ಹೆಸರಿಗೆ ತಕ್ಕಹಾಗೆ ಇದೆ ‘ಅಂದವಾದ’ ಟ್ರೇಲರ್..! ಪ್ರಕೃತಿ ಮಡಿನಲ್ಲಿ ಪ್ರೇಮಪಕ್ಷಿಗಳ ಕಲರವ…

ನಮ್ಮ ಮಳೆನಾಡಿನ ಸೀಮೆ ಪ್ರಕೃತಿ ಸೌಂದರ್ಯಕ್ಕೆ ಹಿಡಿದ ಕೈಗನ್ನಡಿ.. ಇದನೆಲ್ಲ ನಮ್ಮ ಕನ್ನಡ ಚಿತ್ರಗಳಲ್ಲು ಸೆರೆ ಹಿಡಿದು ಪ್ರೇಕ್ಷಕರಾದ ನಿಮ್ಮ ಮುಂದೆ ಇಡುವ ಕಾಯಕ ಸದಿಲ್ಲದೆ ನಡೆಯುತ್ತ ಬಂದಿದೆ.. ಈಗ ಇದೇ ಹಾದಿಯಲ್ಲಿ ಕಣ್ಣಿಗೆ ಮುದ ನೀಡುವ, ಮನಸ್ಸಿಗೆ ಹಿತವಾದ ಅನುಭವ ನೀಡುವ ಅಂದವಾದ ಟ್ರೇಲರ್ ಬಿಡುಗಡೆಗೊಂಡಿದ್ದು, ಮುಂಗಾರುಮಳೆ, ಗಾಳಿಪಟ ಸಿನಿಮಾದ ತಾಜಾತನವನ್ನ ನೆನಪು ಮಾಡುತ್ತಿದೆ..

ಅಂದವಾದ ಟ್ರೇಲರ್ ನಲ್ಲಿ ಮುದ್ದಾದ ಜೋಡಿ ಹಕ್ಕಿಗಳಿವೆ, ಹಸಿರ ಸಿರಿಯಲ್ಲಿ ಮಳೆಯ ಜೊತೆ ಜೊತೆಗೆ ವಿಕ್ರಮ್ ವರ್ಮಾನ್ ಮ್ಯೂಸಿಕ್ ಮೋಡಿ ಮಾಡುವಂತಿದ್ದು, ಟ್ರೇಲರ್ ನಲ್ಲಿಯೆ ಮತ್ತಷ್ಟು ನಿರೀಕ್ಷೆಯನ್ನ ಹುಟ್ಟು ಹಾಕ್ತಿದೆ.. ಯುವ ನಾಯಕ ಜೈ ಹಾಗು ಅನುಷಾ ರಂಗನಾಥ್ ಜೋಡಿಯಾಗಿದ್ದಾರೆ.. ಚಲ ಅವರ ಈ ‘ಚಲ’ನಚಿತ್ರದ ಟ್ರೇಲರ್ ಸಿನಿಮಾ ಬಗ್ಗೆ ಹೊಸದೊಂದು ಕುತೂಹಲವನ್ನ ಹುಟ್ಟುಹಾಕ್ತಿದೆ.. ಗೋಲ್ಡನ್ ಫ್ರೇಮ್ಸ್ ನಿರ್ಮಾಣದಲ್ಲಿ ಅಂದವಾದ ರೆಡಿಯಾಗಿದ್ದು, ಆದಷ್ಟು ಬೇಗ ತೆರೆ ಮೇಲೆ ಬರಲು ತಯಾರಿ ನಡೆಸಿದೆ..

Comments

comments

Similar Articles

Top