ನೆರೆ ಸಂತ್ರಸ್ಥರಿಗೆ ವಿಭಿನ್ನವಾಗಿ ಸ್ಪಂದಿಸಿದ ಹಿರಿಯ ನಟಿ ಲೀಲಾವತಿ..! ಉತ್ತರ ಕರ್ನಾಟಕ್ಕೆ ಇವರು ಕಳಿಸಿದ್ದೇನು ಗೊತ್ತಾ?

ರಾಜ್ಯದ ನಾನಾ ಕಡೆ ಹೆಚ್ಚಿನ ಮಳೆಯಾಗುತ್ತಿದ್ದು ರಾಜ್ಯಾದ್ಯಂತ ನೆರೆ ಭೀತಿ ಜನರನ್ನು ಕಾಡುತ್ತಿರುವ ಸಮಯದಲ್ಲಿ, ಎನ್ ಡಿ ಆರ್ ಎಫ್ ಹಾಗೂ ಭಾರತೀಯ ಸೈನ್ಯದಿಂದ ಕೈಲಾದಷ್ಟು ಸಹಾಯ ಒದಗಿಬರುತ್ತಿದೆ. ಇದರೊಂದಿಗೆ ರಾಜ್ಯಾದ್ಯಂತ ಸ್ವಯಂ ಸೇವಾ ಸಂಘಗಳು, ರಾಜಕೀಯ ದ್ವೇಷ ಮರೆತ ರಾಜಕಾರಣಿಗಳು ಸೇರಿದಂತೆ ಹಲವು ಮಂದಿ ನೆರೆಸಂತ್ರಸ್ತರ ಸಹಾಯಕ್ಕೆ ಧಾವಿಸಿ ಬರುತ್ತಿದ್ದಾರೆ.

ಇದೇ ವೇಳೆಯಲ್ಲಿ ಕರ್ನಾಟಕ ಚಲನಚಿತ್ರೋದ್ಯಮ ಮಂಡಳಿಯು ಸಹ ಸೇರಿದಂತೆ, ಚಿತ್ರ ರಂಗದ ಅನೇಕ ಗಣ್ಯ ನಟರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಈಗ ತಾನೆ ಪುನೀತ್ ರಾಜಕುಮಾರ್ 25 ಕೋಟಿ ಸಹಾಯ ಮಾಡುವಂತೆ ಭರವಸೆ ನೀಡಿದ್ದಾರೆ. ಹಾಗೆಯೇ ದರ್ಶನ್ ತೂಗುದೀಪ್ ಸಹಾಯ ಮಾಡುವಂತೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಈಗ ಹಿರಿಯ ನಟಿ ಡಾ. ಲೀಲಾವತಿ ಅವರು ಸಹ ನೆರೆ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಪ್ರವಾಹದಲ್ಲಿ ಸಿಲುಕಿದ ಜಾನುವಾರುಗಳನ್ನು ರಕ್ಷಣೆ ಮಾಡಿರುವ ಜಾನುವಾರುಗಳಿಗೆ ಬೇಕಾದಂತಹ ಮೇವನ್ನು ವಿತರಣೆಯನ್ನು ಮಾಡುವುದರ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಬೆಂಗಳೂರಿನ ಹೊರವಲಯದ ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿ ನೆಲೆಸಿರುವ ಡಾ. ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ಜಾನುವಾರುಗಳ ಮೂಕವೇದನೆಗೆ ಮರುಗಿದ್ದಾರೆ. ಇವರು ಜಾನುವಾರುಗಳಿಗೆ ಬೇಕಾದ ಮೇವನ್ನು ಸ್ವಂತ ಹಣದಲ್ಲಿ ಕೊಂಡು, ಅದನ್ನು ಒಂದು ಲಾರಿಗೆ ಸ್ವತಹ ತುಂಬಿಸಿ ಪ್ರವಾಹ ಪೀಡಿತರ ಆಶ್ರಯಕ್ಕೆ ಕಳುಹಿಸಿದ್ದಾರೆ. ಮೂಲತಹ ಪ್ರಾಣಿಪ್ರಿಯ ರಾಗಿರುವ ಇವರು ಮಾಡಿರುವ ಕಾರ್ಯ ಎಲ್ಲೆಡೆಯಿಂದ ಪ್ರಶಂಸೆಗೆ ಒಳಗಾಗಿದೆ ಹಾಗೂ ಇನ್ನಿತರರಿಗೆ ಮಾದರಿಯಾಗಿದೆ.

Comments

comments

Similar Articles

Top