ಕಾಶ್ಮೀರದಲ್ಲಿ ಧೋನಿ ನೋಡಿ ‘ ಬೂಮ್ ಬೂಮ್ ಅಫ್ರಿದಿ’ ಎಂದ ಕೂಗಿದ ಕಿಡಿಗೇಡಿಗಳು..!!

ನಿಮಗೆಲ್ಲ ಗೊತ್ತಿರುವ ಹಾಗೆ ಮಹೇಂದ್ರ ಸಿಂಗ್ ಧೋನಿ ತಮ್ಮ ಕ್ರಿಕೆಟ್ ಗೆ ಎರಡು ತಿಂಗಳ ವಿರಾಮ ನೀಡಿ ದೇಶದ ಸೇವೆ ಮಾಡುವ ನಿಟ್ಟಿನಲ್ಲಿ ಆರ್ಮಿಯವರೊಂದಿಗೆ ಜೊತೆಗೂಡಿ 106 TA ಬಟಾಲಿಯನ್ ನಲ್ಲಿ ಸೇರಿಕೊಂಡು ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ಇಡೀ ತಂಡದೊಂದಿಗೆ ತನಗೆ ವಹಿಸಿರು ಕೆಲಸವನ್ನ ಶ್ರದ್ಧೆಯಿಂದ ಮಾಡುವ ಮೂಲಕ ಆರ್ಮಿ ಅಧಿಕಾರಿಗಳ ಮನಸ್ಸುಗಳನ್ನ ಗೆದ್ದಿದ್ದಾರೆ..

ಸದ್ಯ 370 ಆರ್ಟಿಕಲ್ ಅನ್ನ ರದ್ದು ಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಹೈ ಅಲರ್ಟ್ ಆಗಿರುವ ಸೇನೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತಿದೆ.. ಇನ್ನು ಧೋನಿ ಸಹ ಆಗಸ್ಟ್ 15ರವರೆಗೆ ಕಾಶ್ಮೀರದಲ್ಲಿಯೆ ಸೇವೆಯಲ್ಲಿ ಇರಲ್ಲಿದ್ದು, ಎಲ್ಲಿ ಹೋದರು ಧೋನಿಯನ್ನ ನೋಡಲು, ಮಾತನಾಡಿಸಲು, ಫೋಟೊ ಕ್ಲಿಕ್ಕಿಸಿಕೊಳ್ಳಲು ಕಾತುರರಾಗಿದ್ದಾರೆ..

ಆದರೆ ಈ ನಡುವೆ ಕಾಶ್ಮೀರದಲ್ಲಿ ಧೋನಿಯನ್ನ ಕಂಡಾಗ ಕೆಲ ಕಿಡಿಗೇಡಿಗಳು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಫ್ರಿದಿಯ ಹೆಸರನ್ನ ಘೋಷಣೆ ಕೂಗಿದ ಘಟನೆ ವರದಿಯಾಗಿದೆ.. ಧೋನಿಯನ್ನ ಆರ್ಮಿ ಬಟ್ಟೆಯಲ್ಲಿ ನೋಡುತ್ತಿದ್ದ ಹಾಗೆ ಕೆಲ ಯುವಕರ ಗುಂಪು ಹೀಗೆ ಕೂಗಾಟ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ..

Comments

comments

Similar Articles

Top