ಕಲರ್ಸ್ ಕನ್ನಡ ವಾಹಿನಿಯ ಎರಡು ಪ್ರಮುಖ ಧಾರಾವಾಹಿಗಳು ಈ ತಿಂಗಳು ಅಂತ್ಯ..!!

ಕನ್ನಡಿಗರಿಗೆ ವಿಭಿನ್ನ ಧಾರಾವಾಹಿಗಳನ್ನು ನೀಡುವ ಮೂಲಕ ಮನರಂಜಿಸಿದ ವಾಹಿನಿಗಳಲ್ಲಿ ಕಲರ್ಸ್ ಕನ್ನಡ ಕೂಡ ಒಂದು. ಪುಟ್ಟಗೌರಿ ಮದುವೆ, ಅಗ್ನಿಸಾಕ್ಷಿ, ರಾಧಾ ರಾಮಣ, ಕುಲವಧು, ಕಿನ್ನರಿ, ಲಕ್ಷ್ಮೀ ಬಾರಮ್ಮ ಹೀಗೆ ಅನೇಕ ಧಾರಾವಾಹಿಗಳು ಕಲರ್ಸ್ ವಾಹಿನಿ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದೆ.

ಇದೀಗ ಅನೇಕ ವರ್ಷಗಳಿಂದ ಕರುನಾಡ ಜನತೆಗೆ ಸದಾಭಿರುಚಿಯ ಮನರಂಜನೆ ನೀಡುತ್ತಿರುವ ಕಲರ್ಸ್ ಕನ್ನಡದ 2 ಮೆಗಾಹಿಟ್ ಸೀರಿಯಲ್ ಗಳು ಮುಕ್ತವಾಗುತ್ತಿದೆ. ಅದೇ ಕುಲವಧು ಮತ್ತು ಕಿನ್ನರಿ. ಕುಲವಧು ಹಾಗೂ ಕಿನ್ನರಿ ಕನ್ನಡದ ಟಾಪ್ 5 ಧಾರವಾಹಿಗಳಾಗಿ ಹೊರಹೊಮ್ಮಿದೆ. ಇದೀಗ ಈ ಎರಡು ಧಾರಾವಾಹಿಗಳು ಮುಗಿಯುವ ಹಂತವನ್ನು ತಲುಪಿದೆ.

ಧಾರಾವಾಹಿಗಳ ಸಮಯವನ್ನು ಬದಲಾಯಿಸಿಕೊಂಡರು ಈ ಎರಡು ಧಾರಾವಾಹಿಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಲೇ ಕುಲವಧು 1500 ಕಂತುಗಳನ್ನು ಪೂರೈಸಿದೆ ಹಾಗೂ ಕಿನ್ನರಿ 1100 ಕಂತುಗಳನ್ನು ಪೂರೈಸಿದೆ. ಕಿನ್ನರಿ ಹಾಗೂ ಕುಲವಧು ಇದೆ ಆಗಸ್ಟ್ 24ರಂದು ತನ್ನ ಕೊನೆಯ ಸಂಚಿಕೆಯನ್ನು ಪ್ರಸಾರ ಮಾಡುತ್ತಿವೆ.. ಈ ಮೂಲಕ ಹೊಸ ಸೀರಿಯಲ್ ಜಾಗ ನೀಡಲ್ಲಿದ್ದು, ಮತ್ತಷ್ಟು ಉತ್ತಮ ಧಾರಾವಾಹಿಗಳನ್ನ ತರಲು ವಾಹಿನಿ ಮುಂದಾಗಿದೆ..

Comments

comments

Similar Articles

Top