ದುರ್ಗದಲ್ಲಿ ಪವರ್ ಸ್ಟಾರ್ – ಕಿಚ್ಚ ಸುದೀಪ್ ಮಹಾ ಸಂಗಮ..!!

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗು ಕಿಚ್ಚ ಸುದೀಪ್ ಚಿಕ್ಕವಯಸ್ಸಿನಿಂದಲು ಗೆಳೆಯರು.. ಸದ್ಯ ಇಬ್ಬರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದು, ತಮ್ಮ ಸಿನಿ ಜರ್ನಿಯಲ್ಲಿ ಹಂತ ಹಂತವಾಗಿ ಮೇಲೆ ಬಂದಿದ್ದಾರೆ.. ಸದ್ಯ ಯುವರತ್ನ ಚಿತ್ರದಲ್ಲಿ ಅಪ್ಪು ಬ್ಯುಸಿಯಾಗಿದ್ರೆ, ಇತ್ತ ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.. ಇಬ್ಬರು ಈಗ ಚಿತ್ರದುರ್ಗದಲ್ಲಿ ಅಭಿಮಾನಿಗಳಿಗೆ ಒಟ್ಟಿಗೆ ನೋಡೋಕೆ ಸಿಗ್ತಿದ್ದಾರೆ

ಹೌದು, ನಿಮಗೆಲ್ಲ ಗೊತ್ತಿರುವ ಹಾಗೆ ಪೈಲ್ವಾನ್ ಬಿಡುಗಡೆ ಸಿದ್ದತೆಯನ್ನ ನಡೆಸಿದ್ದು, ಹೊಸದೊಂದ ದಾಖಲೆ ಹುಟ್ಟುಹಾಕುವ ಭರವಸೆಯನ್ನ ಉಂಟು ಮಾಡ್ತಿದೆ.. ಇದೇ 9 ತಾರೀಖು ಚಿತ್ರದುರ್ಗದಲ್ಲಿ ಈ ಸಿನಿಮಾ ಆಡಿಯೋ ಲಾಂಚ್ ಗೆ ಮುಹೂರ್ತವನ್ನ ಫಿಕ್ಸ್ ಮಾಡಿದ್ದಾರೆ.. ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ..

ಈಗ ಇದೇ ಸಿನಿಮಾದ ಆಡಿಯೋವನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡಲಿರೋದು ಸಿನಿಮಾಗೆ ಉತ್ತಮ ಬೂಸ್ಟ್ ನೀಡಲಿರೋದ್ರಲ್ಲಿ ಯಾವುದೇ ಡೌಟ್ ಇಲ್ಲ.. ಈಗಾಗ್ಲೇ ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿರೋ ಪೈಲ್ವಾನ್ ಫುಲ್ ಮಜಾ ಪವರ್ ಸ್ಟಾರ್ ಕೈಯಲ್ಲಿ ಧ್ವನಿಸುರುಳಿ ಬಿಡುಗಡೆಯಾಗುವ ಮೂಲಕ ಸಿಗಲ್ಲಿದ್ದು, ದುರ್ಗದ ಜನತೆ ಒಂದೇ ವೇದಿಕೆಯಲ್ಲಿ ಈ ಇಬ್ಬರು ಸ್ನೇಹಿತರನ್ನು ನೋಡುವ ಅವಕಾಶ ಒದಗಿ ಬರಲಿದೆ..

Comments

comments

Similar Articles

Top